Jailer ನಟನ ನಂಗಾನಾಚ್: ನೆರೆಮನೆಯವರ ಮುಂದೆ ಟವಲ್ ಬಿಚ್ಚಿ ಅರೆನಗ್ನವಾಗಿ ವರ್ತಿಸಿದ ವಿನಾಯಕನ್; Video Viral

ವಿನಾಯಕನ್ ತುಂಡು ಬಟ್ಟೆ ಧರಿಸಿ ಬಾಲ್ಕನಿಯಲ್ಲಿ ನಿಂತು ನಿಂದಿಸುತ್ತಿರುವುದನ್ನು ಕಾಣಬಹುದು. ನೆರೆಮನೆಯವರಿಗೆ ಬೈಯುತ್ತಾ, ಅಶ್ಲೀಲವಾಗಿ ನಡೆದುಕೊಂಡಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ.
Vinayakan
ನಟ ವಿನಾಯಕನ್
Updated on

ಜೈಲರ್ ಖಳನಟ ವಿನಾಯಕನ್ ಸಾರ್ವಜನಿಕವಾಗಿ ತಮ್ಮ ಅಶಿಸ್ತಿನ ವರ್ತನೆಯಿಂದಾಗಿ ಆಗಾಗ್ಗೆ ವಿವಾದಗಳನ್ನು ಎದುರಿಸುತ್ತಿದ್ದರು. ಕುಡಿದ ಮತ್ತಿನಲ್ಲಿ ಆಗಾಗ್ಗೆ ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಜನರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಘಟನೆಗಳು ವರದಿಯಾಗಿತ್ತು. ಇತ್ತೀಚೆಗೆ, ಜೈಲರ್ ನಟನ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ತಮ್ಮ ನೆರೆಹೊರೆಯವರೊಂದಿಗೆ ಜಗಳವಾಡುತ್ತಿರುವುದು ಕಂಡುಬಂದಿದೆ.

ಈ ವಿಡಿಯೋದಲ್ಲಿ, ವಿನಾಯಕನ್ ತುಂಡು ಬಟ್ಟೆ ಧರಿಸಿ ಬಾಲ್ಕನಿಯಲ್ಲಿ ನಿಂತು ನಿಂದಿಸುತ್ತಿರುವುದನ್ನು ಕಾಣಬಹುದು. ನೆರೆಮನೆಯವರಿಗೆ ಬೈಯುತ್ತಾ, ಅಶ್ಲೀಲವಾಗಿ ನಡೆದುಕೊಂಡಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಅದನ್ನು ವಿನಾಯಕನ್ ಕೂಡ ಒಪ್ಪಿಕೊಂಡಿದ್ದಾರೆ. ವಿನಾಯಕನ್ ಅವಾಚ್ಯ ಪದಗಳಿಂದ ನೆರೆಮನೆಯವರನ್ನು ನಿಂದಿಸಿದ್ದಾನೆ. ಲುಂಗಿ ಧರಿಸಿ ಜಗಳಕ್ಕೆ ಬಂದಿದ್ದ ನಟನಿಗೆ ಸರಿಯಾಗಿ ನಿಂತುಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಸೊಂಟದ ಮೇಲಿದ್ದ ಲುಂಗಿ ಉದುರಿ ಹೋದರೂ ಅದರ ಅರಿವಿಲ್ಲದೆ ಜಗಳವಾಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ನಟನಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನು ತನ್ನ ವರ್ತನೆಗೆ ನಟ ಕ್ಷಣೆಯಾಚಿಸಿದ್ದಾನೆ. ನನ್ನಿಂದ ತಪ್ಪಾಗಿದೆ ಹೀಗಾಗಿ ಜನರ ಬಳಿ ಕ್ಷಮೆ ಕೇಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ವಿನಾಯಕನ್ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸಿ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ, ಗೋವಾದಲ್ಲಿ ಅಂಗಡಿಯವನೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್ ಆದ ನಂತರ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಆ ಕ್ಲಿಪ್‌ನಲ್ಲಿ, ಅವರು ಬೀದಿಗಳಲ್ಲಿ ಗದ್ದಲ ಸೃಷ್ಟಿಸುತ್ತಿರುವುದು ಕಂಡುಬಂದಿದೆ. ಅವನು ತನ್ನ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಮುಂದುವರಿಸುತ್ತಿದ್ದಂತೆ, ಘಟನೆಯನ್ನು ವೀಕ್ಷಿಸಲು ಜನಸಮೂಹ ಜಮಾಯಿಸಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Vinayakan
ಕುಟುಂಬ ರಕ್ಷಿಸಿದ ಸೈಫ್ ಅಲಿ ಖಾನ್ ಧೈರ್ಯ ಮೆಚ್ಚಲೇಬೇಕು: ಅಕ್ಷಯ್ ಕುಮಾರ್

2024ರ ಸೆಪ್ಟೆಂಬರ್ ನಲ್ಲಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕುಡಿದು ಟೈಟಾಗಿದ್ದ ವಿನಾಯಕನ್ ನನ್ನು ಬಂಧಿಸಿದ್ದರು. ನಂತರ, ವಿನಾಯಕನ್ ಅವರ ದುರ್ವರ್ತನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com