ಕುಟುಂಬ ರಕ್ಷಿಸಿದ ಸೈಫ್ ಅಲಿ ಖಾನ್ ಧೈರ್ಯ ಮೆಚ್ಚಲೇಬೇಕು: ಅಕ್ಷಯ್ ಕುಮಾರ್

ಜನವರಿ 16 ರಂದು ಸೈಫ್ ಅಲಿಖಾನ್ ಅವರ ಬಾಂದ್ರಾ ಅಪಾರ್ಟ್ಮೆಂಟ್ ನಲ್ಲಿ ನಡೆದ ದಾಳಿಯಲ್ಲಿ, ನಟನಿಗೆ ಆರು ಬಾರಿ ಚಾಕುವಿನಿಂದ ಇರಿಯಲಾಗಿದೆ.
ಅಕ್ಷಯ್ ಕುಮಾರ್ - ಸೈಫ್ ಅಲಿ ಖಾನ್
ಅಕ್ಷಯ್ ಕುಮಾರ್ - ಸೈಫ್ ಅಲಿ ಖಾನ್
Updated on

ನವದೆಹಲಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಧೈರ್ಯವನ್ನು ನಟ ಅಕ್ಷಯ್ ಕುಮಾರ್ ಶ್ಲಾಘಿಸಿದ್ದಾರೆ ಮತ್ತು ಇತ್ತೀಚೆಗೆ ಅವರ ಮನೆಯಲ್ಲಿ ದಾಳಿಗೊಳಗಾದ ಸಹನಟ ಸುರಕ್ಷಿತವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

"ಅವರು ಸುರಕ್ಷಿತವಾಗಿರುವುದರಿಂದ ತುಂಬಾ ಸಂತೋಷವಾಗಿದೆ. ಅವರು ಪ್ರಾಣಾಪಯದಿಂದ ಪಾರಾಗಿರುವುದಕ್ಕೆ ಇಡೀ ಉದ್ಯಮಕ್ಕೆ ಸಂತೋಷವಾಗಿದೆ ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿದ ಅವರ ಧೈರ್ಯ ಮೆಚ್ಚಲೇಬೇಕು" ಎಂದು ಅಕ್ಷಯ್ ಸೋಮವಾರ ದೆಹಲಿಯಲ್ಲಿ ತಮ್ಮ ಹೊಸ ಚಿತ್ರ ಸ್ಕೈ ಫೋರ್ಸ್‌ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಜನವರಿ 16 ರಂದು ಸೈಫ್ ಅಲಿಖಾನ್ ಅವರ ಬಾಂದ್ರಾ ಅಪಾರ್ಟ್ಮೆಂಟ್ ನಲ್ಲಿ ನಡೆದ ದಾಳಿಯಲ್ಲಿ, ನಟನಿಗೆ ಆರು ಬಾರಿ ಚಾಕುವಿನಿಂದ ಇರಿಯಲಾಗಿದೆ.

ಅಕ್ಷಯ್ ಕುಮಾರ್ - ಸೈಫ್ ಅಲಿ ಖಾನ್
ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣ: ಬಾಂಗ್ಲಾದೇಶದ ಆರೋಪಿಗೆ 5 ದಿನ ಪೊಲೀಸ್ ಕಸ್ಟಡಿ

ಕಳ್ಳತನ ಮಾಡುವ ಉದ್ದೇಶದಿಂದ ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ನುಗ್ಗಿದ್ದ ಆರೋಪಿ, ಅವರ ಮೇಲೆ ಹಲ್ಲೆ ನಡೆಸಿದ್ದನು. ಈ ವೇಳೆ ಸೈಫ್ ಅವರಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ಸೈಫ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com