
ಪ್ರಕಾಶಂ: ಕುಡಿಯಲು ತನಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ತಂದೆಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ತ್ರಿಪುರಾಂತಕಂ ಸಿಐ ಜಿ ಅಸ್ಸನ್ ಹೇಳಿಕೆಯ ಪ್ರಕಾರ, ಮೃತ ವ್ಯಕ್ತಿ ಪಿ ಯೇಸು (79) ಈ ಘಟನೆಯಾಗುವುದಕ್ಕೂ ಮುನ್ನ ತನ್ನ ಕಿರಿಯ ಮಗ ಪಿ ಮರಿಯಾ ದಾಸು (35) ಮತ್ತು ಆತನ ಕುಟುಂಬದೊಂದಿಗೆ ಇಂದ್ರಚೆರುವು ಗ್ರಾಮದಲ್ಲಿ ವಾಸಿಸುತ್ತಿದ್ದರು. ತಂದೆ ಮತ್ತು ಮಗ ಪರಸ್ಪರ ಪ್ರೀತಿಯಿಂದ ಇದ್ದರು. ಆದಾಗ್ಯೂ, ಕಳೆದ ಕೆಲವು ತಿಂಗಳುಗಳಿಂದ ದಾಸು ಮದ್ಯದ ವ್ಯಸನಿಯಾಗಿದ್ದ.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ದಾಸು ಕುಡಿದು ಮನೆಗೆ ಬಂದು ಮದ್ಯಕ್ಕೆ ಹಣ ನೀಡಲು ಕೇಳಿದ್ದಾನೆ. ಇದಕ್ಕೆ ನಿರಾಕರಿಸಿದ್ದಕ್ಕಾಗಿ ತಂದೆಯೊಂದಿಗೆ ಜಗಳವಾಡಿದ್ದ ತನ್ನ ತಂದೆ ಮಲಗಿದ್ದಾಗ ಭಾನುವಾರ ಮುಂಜಾನೆ ಲೋಹದ ವಸ್ತುವಿನಿಂದ ತಲೆಗೆ ಹೊಡೆದು ತಂದೆಯನ್ನು ಕೊಂದಿದ್ದಾನೆ.
ಕುಟುಂಬ ಸದಸ್ಯರ ಕೂಗಾಟ ಕೇಳಿದ ನೆರೆಹೊರೆಯವರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಹಿಡಿದಿದ್ದಾರೆ. ಆತನ ಕೈಗಳನ್ನು ಕಟ್ಟಿ ಥಳಿಸಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Advertisement