• Tag results for ಆಂಧ್ರಪ್ರದೇಶ

ಆಂಧ್ರಪ್ರದೇಶ:ಡಾಕ್ಟರ್ ಕೈಗಳನ್ನು ಸರಪಳಿಯಿಂದ ಕಟ್ಟಿ, ರಸ್ತೆ ಮೇಲೆ ಎಳೆದಾಡಿ ಹಲ್ಲೆಗೈದ ವೈಜಾಗ್ ಪೊಲೀಸರು

ವೈದ್ಯರಿಗೆ ಎನ್-95 ಮಾಸ್ಕ್ ಕೊರತೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದ ಕಾರಣಕ್ಕೆ  ಎರಡು ತಿಂಗಳ ಹಿಂದೆ ಸರ್ಕಾರದಿಂದ ಅಮಾನತುಗೊಳಗಾಗಿದ್ದ ಅರವಳಿಕೆ ತಜ್ಞ ವೈದ್ಯರೊಬ್ಬರ ಕೈಗಳನ್ನು ಸರಪಳಿಯಿಂದ ಕಟ್ಟಿ ರಸ್ತೆ ಮೇಲೆ ಎಳೆದಾಡಿ ವಿಶಾಖಪಟ್ಟಣಂ ಪೊಲೀಸರು ಅಮಾನುಷವಾಗಿ ಹಲ್ಲೆ ಗೈದಿರುವ ಘಟನೆ ನಡೆದಿದೆ.

published on : 17th May 2020

ಲಾಕ್‌ಡೌನ್, ಬೇಸಿಗೆಯ ಉಷ್ಣತೆ ಅನಿಲ ಸೋರಿಕೆಗೆ ಕಾರಣವಾಯಿತೆ? ಮಾಲಿನ್ಯ ನಿಯಂತ್ರಣ ಮುಖ್ಯಸ್ಥರು ಹೇಳಿದ್ದೇನು?

ವಿಶಾಖಪಟ್ಟಣಂ ವಿಷಾನಿಲ ಸೋರಿಕೆಯಿಂದಾಗಿ 11 ಮಂದಿ ಮೃತಪಟ್ಟಿದ್ದು ಸಾವಿರಾರು ಮಂದಿ ಅಸ್ವಸ್ಥರಾಗಿದ್ದಾರೆ. ಇನ್ನು ಅನಿಲ ಸೋರಿಕೆಗೆ ಕಾರಣ ಏನಿರಬಹುದು ಎಂದು ಆಂಧ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥರು ಅಂದಾಜಿಸಿದ್ದಾರೆ.

published on : 7th May 2020

ವಿಷಾನಿಲ ಸೋರಿಕೆ: ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ

ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ. 

published on : 7th May 2020

ಮದ್ಯ ಸೇವನೆ ತಡೆಗೆ ಆಂಧ್ರ ಪ್ರದೇಶ ಸರ್ಕಾರದಿಂದ ಮಾಸ್ಟರ್ ಪ್ಲಾನ್! 

ಆಂಧ್ರಪ್ರದೇಶದ ಸರ್ಕಾರ ಮದ್ಯಸೇವನೆಯನ್ನು ತಡೆಗಟ್ಟುವುದಕ್ಕೆ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದೆ. 

published on : 5th May 2020

ಶೂನ್ಯ ಬಡ್ಡಿ ಸಾಲ ಯೋಜನೆ ಆರಂಭಿಸಿದ ಆಂಧ್ರ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು "ವೈಎಸ್ಆರ್ ಶೂನ್ಯ ಬಡ್ಡಿ ಸಾಲ" ಯೋಜನೆಯನ್ನು ದ್ವಾಕ್ರಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಶುಕ್ರವಾರ ಆರಂಭಿಸಿದ್ದಾರೆ

published on : 24th April 2020

ಆಂಧ್ರಪ್ರದೇಶದಲ್ಲಿ ಮೊದಲ ಸಾವಯವ ಸೋಂಕು ನಿವಾರಕ ಸುರಂಗ!

ಆಂಧ್ರಪ್ರದೇಶದ  ಅನಂತಪುರ ಜಿಲ್ಲೆಯಲ್ಲಿ  ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ.

published on : 14th April 2020

ಆಂಧ್ರಪ್ರದೇಶದಲ್ಲಿ ಕೊರೊನಾ ಪ್ರಕರಣಗಳು 303 ಕ್ಕೆ ಏರಿಕೆ

ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು 303 ಕ್ಕೆ ಏರಿಕೆಯಾಗಿದ್ದು, ಆರು ಜನರನ್ನು ಚಿಕಿತ್ಸೆಯ ನಂತರ ಬಿಡುಗಡೆ ಗೊಂಡಿದ್ದಾರೆ. 

published on : 7th April 2020

ಜನ್ಮ ಕೊಟ್ಟ ತಾಯಿಯ ಅಂತ್ಯ ಸಂಸ್ಕಾರಕ್ಕೂ ಹೋಗದೆ ಕೆಲಸದ ಮೂಲಕವೇ ಅಂತಿಮ ನಮನ!

ಕೊರೋನಾ ವೈರಸ್ ನಿಂದಾಗಿ ಭಾರತವೇ ಥಂಡ ಹೊಡೆದು ಹೋಗಿದೆ. ಇನ್ನು ಸಮಾಜದ ರಕ್ಷಣೆಗೆ ನಿಂತಿರುವ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

published on : 2nd April 2020

ಕೊರೋನಾ ಲಾಕ್'ಡೌನ್ ಎಫೆಕ್ಟ್: ಆಂಧ್ರ ಗಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮೀನುಗಾರರು

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಗಡಿಭಾಗಗಳನ್ನು ಬಂದ್ ಮಾಡಲಾಗಿದ್ದು, ಇದರ ಪರಿಣಾಮ ಎಂದಿನಂತೆ ತಮ್ಮ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ಮೀನುಗಾರರು ಆಂಧ್ರಪ್ರದೇಶ ಗಡಿಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 

published on : 28th March 2020

ಆಂಧ್ರದಲ್ಲಿ ದಂಪತಿ ಆತ್ಮಹತ್ಯೆ: ಡೆತ್‍ನೋಟ್‍ನಲ್ಲಿ ಕೊರೊನ ಭೀತಿ ಉಲ್ಲೇಖ

ಮಾರ್ಚ್ 27 (ಯುಎನ್‌ಐ) ಶಂಕಿತ ಕೊವಿದ್ -19 ಸಾವಿನ ಪ್ರಕರಣವೊಂದರಲ್ಲಿ ಆಟೋ ಚಾಲಕ ದಂಪತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿ ನಗರದ ಎ ವಿ ಅಪ್ಪರಾವ್ ಪೇಟ ಪ್ರದೇಶದಲ್ಲಿ ನಡೆದಿದೆ.  

published on : 27th March 2020

ಕೋವಿಡ್-19: ತೆಲಂಗಾಣದಲ್ಲಿ ಮೂರು, ಆಂಧ್ರದಲ್ಲಿ 1 ಹೊಸ ಪ್ರಕರಣ ಪತ್ತೆ

ತೆಲಂಗಾಣದಲ್ಲಿ ಮೂರು, ಆಂಧ್ರದಲ್ಲಿ 1 ಹೊಸ ಪ್ರಕರಣಗಳು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ 10 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೇ, ಈ ಸೋಂಕಿತರ ಸಂಖ್ಯೆ 184ಕ್ಕೆ ಏರಿಕೆ ಆಗಿದೆ

published on : 20th March 2020

ವಿಧಾನಪರಿಷತ್ ರದ್ದು: ಆಂಧ್ರಪ್ರದೇಶ ಸಚಿವ ಸಂಪುಟ ಅನುಮೋದನೆ

13 ವರ್ಷಗಳ ಹಿಂದೆ ತಮ್ಮ ತಂದೆ ಮತ್ತೆ ಅಸ್ತಿತ್ವಕ್ಕೆ ತಂದಿದ್ದ ವಿಧಾನಪರಿಷತ್ ಅನ್ನು ರದ್ದುಗೊಳಿಸುವ ಕುರಿತಂತೆ ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ಆಂಧ್ರಪ್ರದೇಶ ಸಚಿವ ಸಂಪುಟ ಸಭೆ ಸೋಮವಾರ ಅನುಮೋದನೆ ನೀಡಿದೆ.

published on : 27th January 2020

ಮೂರು ರಾಜಧಾನಿಯನ್ನು ರಚಿಸುವ ಮಸೂದೆ ಆಂಧ್ರ ವಿಧಾನಸಭೆಯಲ್ಲಿ ಅಂಗೀಕಾರ

 ಆಂಧ್ರಪ್ರದೇಶದ ವಿಕೇಂದ್ರೀಕರಣ ಮತ್ತು ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ 2020 ನ್ನು ಆಂಧ್ರಪ್ರದೇಶ  ವಿಧಾನಸಭೆಯು ಸೋಮವಾರ ತಡರಾತ್ರಿ ಅಂಗೀಕರಿಸಿತು, ಇದು ಮೂರು ರಾಜಧಾನಿಗಳನ್ನು ಹೊಂದುವ  ರಾಜ್ಯ ಸರ್ಕಾರದ ಯೋಜನೆಗೆ ಆಕಾರ ನೀಡುವ ಉದ್ದೇಶವನ್ನು ಹೊಂದಿದೆ ವಿಶಾಖಪಟ್ಟಣಂನಲ್ಲಿ ಕಾರ್ಯಾಂಗ, ಅಮರಾವತಿಯಲ್ಲಿ ಶಾಸಕಾಂಗ ಮತ್ತು ಕರ್ನೂಲ್ ನಲ್ಲಿ ನ್ಯಾಯಾಂಗಆಡಳಿತವಿರ

published on : 21st January 2020

ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ: ಸಾಲಿನಲ್ಲಿ ನಿಂತಿದ್ದ ವ್ಯಕ್ತಿಗೆ ಹೃದಯ ಸ್ತಂಭನ, ಸಾವು

ಈರುಳ್ಳಿ ದರ ಗಗನಕ್ಕೇರಿದ್ದು, ಈ ಹಿನ್ನೆಲೆಯಲ್ಲಿ ಜನರಿ ನೆರವಿಗೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ರೂ.25ಕ್ಕೆ ಮಾರಾಟ ಮಾಡುತ್ತಿದೆ. ಹೀಗಾಗಿ ಅಗ್ಗದ ದರದಲ್ಲಿ ಸರ್ಕಾರ ವಿತರಿಸುತ್ತಿರುವ ಈರುಳ್ಳಿ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. 

published on : 9th December 2019
1 2 3 4 >