ಮುಂದಿನ ತಿಂಗಳೊಳಗೆ ಚಿನ್ನದ ಬೆಲೆ 23 ಸಾವಿರಕ್ಕೆ ಇಳಿಕೆ?: ತಜ್ಞರು

ಮುಂದಿನ ತಿಂಗಳೊಳಗಾಗಿ ಚಿನ್ನದ ಬೆಲೆ ಅತೀ ಕಡಿಮೆ ಅಂದರೆ 23 ಸಾವಿರಕ್ಕೆ ಇಳಿಯಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.
ಚಿನ್ನ
ಚಿನ್ನ

ಮುಂಬೈ: ಮುಂದಿನ ತಿಂಗಳೊಳಗಾಗಿ ಚಿನ್ನದ ಬೆಲೆ ಅತೀ ಕಡಿಮೆ ಅಂದರೆ 23 ಸಾವಿರಕ್ಕೆ ಇಳಿಯಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತಲ್ಲಣಗಳಿಂದಾಗಿ ಮುಂದಿನ ದಿನಗಳಲ್ಲಿ ಚಿನ್ನ ಮತ್ತಷ್ಟು ಬೇಡಿಕೆ ಕಳೆದುಕೊಳ್ಳಲಿದೆ. ತಿಂಗಳೊಳಗೆ ಹತ್ತು ಗ್ರಾಂ ಚಿನ್ನದ ಬೆಲೆ 23 ಸಾವಿರ ರುಪಾಯಿಗೆ ಇಳಿಯಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

ಜುಲೈ 29ರಂದು ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿ ದರ ಏರಿಕೆ ಕುರಿತು ತನ್ನ ನಿರ್ಧಾರ ಪ್ರಕಟಿಸಲಿದೆ. ಬಡ್ಡಿ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಆ ನಿರ್ಧಾರ ಹೊರಬಿದ್ದರೂ ಚಿನ್ನದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಲಿದೆ. ಅಲ್ಲದೆ, ರೂಪಾಯಿ ವಿರುದ್ಧ ಡಾಲರ್ ಬಲವರ್ಧನೆಯಾದಷ್ಟು ಚಿನ್ನದ ಬೆಲೆ ಕುಸಿಯಲಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಚೀನಾ ತನ್ನಲ್ಲಿರುವ ಚಿನ್ನವನ್ನು ಮಾರುತ್ತಿರುವುದರಿಂದಲೂ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಮುಂದಿನ ಒಂದು ವಾರದಿಂದ ಒಂದು ತಿಂಗಳೊಳಗೆ 10 ಗ್ರಾಂ ಚಿನ್ನದ ಬೆಲೆ 23 ಸಾವಿರದಿಂದ 23500 ರುವರೆಗೂ ಇಳಿಯಲಿದೆ ಎಂದು ಸಂಶೋಧನಾ ನಿರ್ದೇಶಕ ಜ್ಞಾನಶೇಖರ್‌ ತ್ಯಾಗರಾಜನ್‌ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com