ವಿಜಯಬ್ಯಾಂಕ್‍ಗೆ ರು.143 ಕೋಟಿ ಲಾಭ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್ ರು.142.59 ಕೋಟಿ ನಿವ್ವಳ ಲಾಭ ಗಳಿಸಿದೆ.
ವಿಜಯಾ ಬ್ಯಾಂಕ್
ವಿಜಯಾ ಬ್ಯಾಂಕ್

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್ ರು.142.59 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ ಗಳಿಸಿದ್ದ ರು.161.45 ಕೋಟಿಗೆ ಹೋಲಿಸಿದರೆ ಶೇ.11.6ರಷ್ಟು ಇಳಿಮುಖ ಕಂಡಿದೆ. ಆದರು ಬ್ಯಾಂಕ್‍ನ ಒಟ್ಟಾರೆ ಆದಾಯದಲ್ಲಿ ಏರಿಕೆ ಕಂಡಿದ್ದು  ರು.3,289.05 ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ ರು.3,189.95 ಕೋಟಿ ಗಳಿಸಿತ್ತು. ಗುರುವಾರ ಬ್ಯಾಂಕ್‍ನ ತ್ರೈಮಾಸಿಕ ಫಲಿತಾಂಶ ವಿವರ ನೀಡಿದ ಬ್ಯಾಂಕಿನ  ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಸಾನ್ಸಿ, ಈ ಅವಧಿಯಲ್ಲಿ ಬ್ಯಾಂಕ್‍ನ ಅನುತ್ಪಾದಕ ಆಸ್ತಿ ಪ್ರಮಾಣ ಶೇ.2.68ರಿಂದ ಶೇ.3.39ಕ್ಕೆ ಏರಿಕೆ ಕಂಡಿದೆ ಎಂದು ಹೇಳಿದರು.

ಬ್ಯಾಂಕ್ ಆದ್ಯತಾ ವಲಯಕ್ಕೆ ನೀಡಲಾಗುವ ಸಾಲವನ್ನು ಶೇ. 22.98ರಷ್ಟು ಹೆಚ್ಚಿಸಿದ್ದು 22158 ಕೋಟಿ ಗುರಿಗೆ 30940 ಕೋಟಿ ರು. ನೀಡಿದೆ. ಕೃಷಿ ಸಾಲ ಶೇ. 18.27ರಷ್ಟು ಹೆಚ್ಚಿದ್ದು 7734 ಕೋಟಿ ತಲುಪಿದೆ. ವಾಣಿಜ್ಯಕ್ಕೆ 19125 ಕೋಟಿ ನೀಡಲಾಗಿದೆ. ಅಶಕ್ತ ವಿಭಾಗದವರಿಗಾಗಿ ನೀಡಲಾಗುವ ನೆರವು ಶೇ. 44.76ರಷ್ಟು ಏರಿಕೆ ಮಾಡಲಾಗಿದೆ. ಮಹಿಳಾ ಫಲಾನುಭವಿಗಳಿಗೆ ಶೇ. 25.82 ರಷ್ಟು  ಸಾಲದ ನೆರವು ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಜನ್ ಧನ್ ಯೋಜನೆಯಡಿ 2014, ಆಗಸ್ಟ್ ನಿಂದ ಇದುವರೆಗೂ 12.56 ಲಕ್ಷ ಖಾತೆ ತೆರೆದು, 79.72 ಕೋಟಿ ಹಣ ಸಂಗ್ರಹವಾಗಿದೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಜೀವನ್‍ಜ್ಯೋತಿ  ಭೀಮಾ ಯೋಜನ, ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನಾ ಮತ್ತು ಅಟಲ್ ಪಿಂಚಣಿ ಯೋಜನೆಯಡಿ 20,97,577 ಖಾತೆ ತೆರೆಯಲಾಗಿದೆ ಎಂದರು. ಬ್ಯಾಂಕಿನ ಕಾರ್ಯಕಾರಿ  ನಿರ್ದೇಶಕರಾದ ಬಿ.ಎಸ್.ರಾಮರಾವ್, ರಾಮದಾಸ್ ಶೆಣೈ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com