
ನವದೆಹಲಿ/ಮುಂಬೈ: ನೀವು ಗೃಹ, ವಾಹನ ಸಾಲ ಹೊಂದಿದ್ದೀರಾ? ನಿಮ್ಮ ಸಾಲದ ಪ್ರತಿ ತಿಂಗಳ ಸಮಾನ ಮಾಸಿಕ ಕಂತಿನ ಮೇಲಿನ ಬಡ್ಡಿ ಕಡಿಮೆಯಾಗಲಿ ಎಂದು ಆಶಿಸುತ್ತಿದ್ದೀರಾ?
ಹಾಗಿದ್ದರೆ ನಿಮಗೆ ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ.
ಏಕೆಂದರೆ ಮುಂಬೈನಲ್ಲಿ ಆರ್ ಬಿಐನ ತ್ರೈಮಾಸಿಕ ಸಾಲ ನೀತಿ ಪರಿಶೀಲನಾ ಸಭೆ ನಡೆಯಲಿದೆ. ಹಣದುಬ್ಬರ ದರ ಮತ್ತು ವಿತ್ತೀಯ ಕೊರತೆ ನಿಯಂತ್ರಣದಲ್ಲಿರುವ ಕಾರಣ ಬಡ್ಡಿದರವನ್ನು ಶೇ.0.25ರಷ್ಟು ಕಡಿತ ಮಾಡುವ ನಿರೀಕ್ಷೆ ಇದೆ. ಮುಂಗಾರು ಮಾರುತದ ಮೇಲೆ ಎಲ್ ನಿನೋ ಪರಿಣಾಮ ಬೀರುವ ಆತಂಕ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬಡ್ಡಿದರ ಕಡಿತ ಕಷ್ಟವಾಗಬಹುದು. ಹಾಗಾಗಿ ಆರ್ಥಿಕ ಚಟುವಟಿಕೆ ಹಾಗೂ ಹೂಡಿಕೆಯನ್ನು ಉತ್ತೇಜಿಸಲು ಬಡ್ಡಿದರ ಕಡಿತಕ್ಕೆ ಇದು ಸಕಾಲ ಎಂದು ಬ್ಯಾಂಕರ್ಸ್‍ಗಳು ಹಾಗೂ ಉದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಗಟು ದರ ಸೂಚ್ಯಂಕ ಏಪ್ರಿಲ್‍ನಲ್ಲಿ ದಾಖಲೆ ಪ್ರಮಾಣ(ಶೇ.-2.65)ಕ್ಕೆ ಕುಸಿದಿತ್ತು. ಚಿಲ್ಲರೆ ಹಣದುಬ್ಬರ ಕೂಡ ಇಳಿಮುಖವಾಗುತ್ತಿದೆ. ಇದರ ಮಧ್ಯೆ, 2014- 15ರ ಹಣಕಾಸು ವರ್ಷದಲ್ಲಿ
ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4ರಷ್ಟಕ್ಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ಉದ್ಯಮಿಗಳು ಹಾಗೂ ಬ್ಯಾಂಕರ್ಸ್ ಗಳಿಗಿದೆ.
Advertisement