ಜಿಡಿಪಿ ಶೇ.7.8 ಅಲ್ಲ ಶೇ.7.6: ರಘುರಾಮ್ ರಾಜನ್

ಮೋದಿ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.8ರ ದಲ್ಲಿ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಸಾಧಿಸುವ ಗುರಿ ಹೊಂದಿತ್ತು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಾ. ರಾಜನ್ ಅದನ್ನು ಪ್ರಶ್ನಿಸಿದ್ದಾರೆ...
ಆರ್ ಬಿಐ ಗವರ್ನರ್ ರಘುರಾಮ್ ರಾಜನ್
ಆರ್ ಬಿಐ ಗವರ್ನರ್ ರಘುರಾಮ್ ರಾಜನ್
Updated on

ನವದೆಹಲಿ: ಮೋದಿ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.8ರ ದಲ್ಲಿ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಸಾಧಿಸುವ ಗುರಿ ಹೊಂದಿತ್ತು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಾ. ರಘುರಾಮ್ ರಾಜನ್ ಅದನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ ಜಿಡಿಪಿ ದರವನ್ನು ಶೇ.7.8ರಿಂದ ಶೇ.7.6ಕ್ಕೆ ಇಳಿಕೆ ಮಾಡಿದ್ದಾರೆ. ವಾಸ್ತವಾಗಿ ಹಣಕಾಸು ಕ್ಷೇತ್ರದ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಳೆದ ತ್ರೈಮಾಸಿಕದಲ್ಲಿ ವಿವಿಧ ಕಂಪನಿಗಳ ಸಾಧನಾ ವಿವರಗಳೂ ಅದನ್ನೇ ತೋರಿಸುತ್ತಿವೆ ಎಂದಿದ್ದಾರೆ ಆರ್‍ಬಿಐ ಗವರ್ನರ್. ಇದರ ಜತೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಬೀಳದು ಎಂದು ಹವಾಮಾನ ಇಲಾಖೆಯ ಹೇಳಿಕೆಯನ್ನೂ ಅವರು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದರು. ಇದರ ಜತೆಗೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗುತ್ತಿರುವುದರಿಂದ ಅದು ದೇಶದ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಬೆಳವಣಿಗೆಗೆ ಮುಳ್ಳಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್‍ಬಿಐ ಚಿಯರ್ ಲೀಡರ್ ಅಲ್ಲ
ಅರ್ಥವ್ಯವಸ್ಥೆಯಲ್ಲಿ ಚಿಯರ್ ಲೀಡರ್‍ಗಳಾಗಿ ಪಾತ್ರವಹಿಸಲೆಂದೇ ಬೇರೆ ವ್ಯಕ್ತಿಗಳಿದ್ದಾರೆ. ಆದರೆ, ಆರ್‍ಬಿಐ ಚಿಯರ್ ಲೀಡರ್ ಅಲ್ಲ! ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಸಣ್ಣ, ಸಣ್ಣ ಪ್ರಮಾಣದ ಬದಲು ದೊಡ್ಡಮಟ್ಟದಲ್ಲಿ ಯಾಕೆ ಬಡ್ಡಿದರ ಕಡಿತ ಮಾಡಬಾರದು ಎನ್ನುವ ಪ್ರಶ್ನೆಯೊಂದಕ್ಕೆ ಆರ್‍ಬಿಐ ಮುಖ್ಯಸ್ಥ ರಘುರಾಂ ರಾಜನ್ ನೀಡಿದ ಉತ್ತರ ಇದು. ರುಪಾಯಿ ಮೌಲ್ಯದ ಮೇಲೆ ಜನರಿಗೆ ನಂಬಿಕೆ ಉಳಿಸುವುದು ಆರ್‍ಬಿಐ ಕೆಲಸ. ನಿರ್ಧಾರಗಳನ್ನು ತೆಗೆದುಕೊಳ್ಳಲು ಅರ್ಥವ್ಯವಸ್ಥೆಯಲ್ಲಿ ಸ್ಥಿರತೆಯ ಅಗತ್ಯವಿದೆ ಎಂದು ರಫ್ತುದಾರರು ಹೇಳುತ್ತಾರೆ. ನಾನು ಕೂಡ ಅದೇ ರೀತಿ ಯೋಚಿಸುತ್ತೇನೆ. ಅರ್ಥವ್ಯವಸ್ಥೆ ಬೂಸ್ಟರ್‍ಗಳಂತೆ ಅಥವಾ ಚೀರ್‍ಲೀಡರ್‍ಗಳಂತೆ ಕೆಲಸ ಮಾಡುವುದು ನಮ್ಮ ಕೆಲಸ ಅಲ್ಲ ಎಂದು ರಾಜನ್ ಹೇಳಿದ್ದಾರೆ.

ಮಳೆಯಾದ್ರೆ ಮಾತ್ರ ಬಡ್ಡಿ ದರ ಇಳಿಕೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಇಳಿಕೆಯಾದರೆ, ದೇಶದಲ್ಲಿ ಹಾಲಿ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿದ್ದರೆ ಮಾತ್ರ ಮುಂದಿನ ದ್ವೈಮಾಸಿಕ ಸಾಲ ಪರಿಶೀಲನಾ ಸಭೆಯಲ್ಲಿ ಬಡ್ಡಿ ದರ ಇಳಿಕೆ ಮಾಡುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದಿದ್ದಾರೆ ಅವರು. ಒಂದು ವೇಳೆ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಂಡರೆ ಏನೂ ಆಗದು ಎಂದಿದ್ದಾರೆ ಡಾ.ರಾಜನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com