ಟ್ಯಾಕ್ಸಿ ಸೇವೆಯಲ್ಲಿ ಅಕ್ರಮ ಪೈಪೋಟಿ ವಿರುದ್ಧ ಪ್ರತಿಭಟನೆ: ಚೈನಾದಲ್ಲಿ ತನ್ನ ಚಾಲಕರಿಗೆ ಎಚ್ಚರಿಕೆ ನೀಡಿದ ಊಬರ್

ಪೂರ್ವ ಚೀನಾದ ಹಂಗ್ಜೌ ನಗರದಲ್ಲಿ ನಡೆಯುತ್ತಿರುವ ಟ್ಯಾಕ್ಸಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದರ ವಿರುದ್ಧ ತನ್ನ ಚಾಲಕರನ್ನು ಎಚ್ಚರಿಸಿರುವ ಊಬರ್,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ಪೂರ್ವ ಚೀನಾದ ಹಂಗ್ಜೌ ನಗರದಲ್ಲಿ ನಡೆಯುತ್ತಿರುವ ಟ್ಯಾಕ್ಸಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದರ ವಿರುದ್ಧ ತನ್ನ ಚಾಲಕರನ್ನು ಎಚ್ಚರಿಸಿರುವ ಊಬರ್, ಅವರ ಜೊತೆ ಮಾಡುಕೊಂಡಿರುವ ಒಪ್ಪಂದಗಳನ್ನು ವಜಾ ಮಾಡುವುದಾಗಿ ಬೆದರಿಕೆ ಹಾಕಿದೆ.

ತನ್ನ ಚಾಲಕರಿಗೆ ಸಂದೇಶ ಕಳುಹಿಸಿರುವ ಊಬರ್ ಸಂಸ್ಥೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಚಾಲಕರ ಚಲನವಲನವನ್ನು ಜಿಪಿಸ್ ಮೂಲಕ ಗಮನಿಸಲಾಗುವುದು ಎಂದಿದೆ. ಕಾನೂನುಬಾಹಿರ ಸ್ಪರ್ಧೆಯ ಏರಿಕೆಯ ವಿರುದ್ಧ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರ್ಜ್ ಪತ್ರಿಕೆ ವರದಿ ಮಾಡಿದೆ.

ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಊಬರ್ ತಿಳಿಸಿದೆ.

ಚೈನಾ ಮಾರುಕಟ್ಟೆಯಲ್ಲಿ ತನ್ನನ್ನು ವಿಸ್ತರಿಸಿಕೊಳ್ಳಲು ಸಂಸ್ಥೆ ಚಿಂತಿಸುತ್ತಿದೆ ಎಂದು ಹೇಳಿದ ಒಂದು ದಿನದಲ್ಲಿ ಈ ಬೆಳವಣಿಗೆ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com