ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತದ ಹಣ ಶೇ.10 ರಷ್ಟು ಕುಸಿತ!

ಕಪ್ಪು ಹಣ ಎಂದಾಕ್ಷಣ ನೆನಪಿಗೆ ಬರುವ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರಿಟ್ಟಿದ್ದ ಹಣ ಶೇ.10 ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತದ ಹಣ ಶೇ.10 ರಷ್ಟು ಕುಸಿತ!

ಜ್ಯೂರಿಚ್: ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ ತರಲು ಭಾರತ ಸರ್ಕಾರ ಯತ್ನಿಸುತ್ತಿದ್ದು, ಕಪ್ಪು ಹಣ ಎಂದಾಕ್ಷಣ ನೆನಪಿಗೆ ಬರುವ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರಿಟ್ಟಿದ್ದ ಹಣ ಶೇ.10 ರಷ್ಟು(12,615 ಕೋಟಿಗೆ ಇಳಿಕೆ) ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.    

ಕಳೆದ ವರ್ಷ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಶೇ.10 ರಷ್ಟು ಹಣ ಕುಸಿದಿದೆ ಎಂದು  ಸ್ವಿಜರ್ಲ್ಯಾಂಡ್ ನ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಸಿದ್ಧ ರಹಸ್ಯ ತಂಡ ಹೇಳಿದೆ. 2014 ರಲ್ಲಿ 1.9  ಬಿಲಿಯನ್ ಯು.ಎಸ್ ಡಾಲರ್ ನಷ್ಟಿದ್ದ ಹಣ ಈಗ 2,030 ಮಿಲಿಯನ್ ಗೆ ಇಳಿಕೆಯಾಗಿದೆ ಎಂದು ಸ್ವಿಸ್ ಬ್ಯಾಕ್ ನ ಕೇಂದ್ರ ಬ್ಯಾಂಕಿಂಗ್ ಪ್ರಾಧಿಕಾರದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಇದು ಭಾರತೀಯರು ಸ್ವಿಸ್ ಬ್ಯಾಂಕ್ ನಲ್ಲಿ ಉಳಿಸಿರುವ ಎರಡನೇ ಕನಿಷ್ಠ ಮೊತ್ತದ ಹಣ ಎಂದು ತಿಳಿದುಬಂದಿದೆ.

ವಿಚಿತ್ರವೆಂದರೆ ಬೇರೆ ದೇಶದವರು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿದ್ದ ಠೇವಣಿ 2014 ರಲ್ಲಿ 90 ಲಕ್ಷ ಕೋಟಿಯಿಂದ 1.6 ಟ್ರಿಲಿಯನ್ ನಷ್ಟು ಏರಿಕೆಯಾಗಿದೆ. 2012 ರಲ್ಲಿ ಭಾರತೀಯರ ಕಪ್ಪು ಹಣದ ಮೊತ್ತ ಮೂರನೇ ಒಂದು ಭಾಗದಷ್ಟು ಕುಸಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com