66 ಆಸನ ಸಾಮರ್ಥ್ಯದ ಎಟಿಆರ್ 72-500 ವಿಮಾನ ದೇವಸ್ಥಾನಗಳ ನಗರ ಮತ್ತು ಐಟಿ ನಗರದ ನಡುವೆ ಸಂಚರಿಸಲಿದೆ ಎಂದು ಕಂಪನಿ ನಿರ್ದೇಶಕ ಅಶ್ವಿನ್ ಥಾಮಸ್ ಹೇಳಿದ್ದಾರೆ. ಬೆಳಗ್ಗೆ 10.40ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನ 12 ಗಂಟೆಗೆ ಮಧುರೈ ತಲುಪಲಿದೆ. 12.30ಕ್ಕೆ ಮಧುರೈನಿಂದ ಹೊರಟು 1.50ಕ್ಕೆ ಬೆಂಗಳೂರು ತಲುಪಲಿದೆ. ಏಪ್ರಿಲ್‍ನಲ್ಲಿ ಸೇವೆ ಅರಂಭಿಸಿದ ಮೂರು ತಿಂಗಳಲ್ಲಿ ಕಂಪನಿ ದಕ್ಷಿಣ ಭಾರತದ ನಾಲ್ಕನೆ ನಗರಕ್ಕೆ ತನ್ನ ಸೇವೆಯನ್ನು ವಿಸ್ತರಿಸಿದೆ. ಇದಕ್ಕೂ ಮೊದಲು ಹುಬ್ಬಳ್ಳಿ, ತಿರುವನಂತಪುರಂ ಮತ್ತು ಕಡಪ ನಡುವೆ ಸೇವೆ ಆರಂಭಿಸಿತ್ತು.