
ಬೆಂಗಳೂರು: ಕೆಲಸ ಹುಡುಕುವವರಿಗೆ ಬೆಂಗಳೂರು ಎಂದಿಗೂ ಆಕರ್ಷಣೆಯ ಕೇಂದ್ರಬಿಂದು. ಐಟಿ ಹಬ್ ಖ್ಯಾತಿಯ ಬೆಂಗಳೂರಿನಲ್ಲಿ ಸುಲಭವಾಗಿ ಕೆಲಸ ಹುಡುಕಲು ಪರಿಣತ ಜಾಬ್ ಸರ್ಚ್ ಇಂಜಿನ್ ಗಳಿದ್ದು ಕೆಲಸ ಹುಡುಕುವವರಿಗೆ ನೆರವು ನೀಡುತ್ತಿದೆ.
ಜಾಬ್ ಟಾನಿಕ್ ( Jobtonic.in ) ನಂತಹ ಅನೇಕ ಸರ್ಚ್ ಇಂಜಿನ್ ಗಳು, ಉತ್ತಮ ವೇತನದೊಂದಿಗೆ ಉದ್ಯೋಗ ಹುಡುಕುತ್ತಿರುವವರ ವಿದ್ಯಾರ್ಹತೆಗೆ ಸರಿಹೊಂದುವಂತಹ ಅಸಂಖ್ಯ ನೌಕರಿಯ ಆಯ್ಕೆಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಬೆಂಗಳೂರು ಅತ್ಯಂತ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆ ಆಗಿದ್ದು ಉದ್ಯೋಗಿಗಳಿಗೆ ತಮ್ಮ ಅರ್ಹತೆಗೆ ಸರಿಹೊಂದುವ ಉದ್ಯೋಗವನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ ನೌಕರಿಯ ಆಯ್ಕೆಗಳನ್ನು ಉದ್ಯೋಗಾರ್ಥಿಗಳ ಮುಂದಿಡುವುದು ಜಾಬ್ ಸರ್ಚ್ ಇಂಜಿನ್ ಗಳ ಮುಖ್ಯ ಉದ್ದೇಶ.
ಬೆಂಗಳೂರು ಉದ್ಯೋಗ ಮಾರುಕಟ್ಟೆಯಲ್ಲಿ ವಿವಿಧ ಉದ್ಯೋಗಾವಕಾಶಗಳು:
ಉದ್ಯೋಗಗಳ ಬಗ್ಗೆ ಸರಿಯಾದ ಮೂಲದಿಂದ ಮಾಹಿತಿ ಪಡೆದರೆ ಉದ್ಯೋಗ ಪಡೆಯಲು ಅರ್ಧ ಕೆಲಸ ಮುಗಿದಂತೆಯೇ. ಬೆಂಗಳೂರಿನಲ್ಲಿ ಪ್ರಸ್ತುತ ಅತಿ ಹೆಚ್ಚು ಉದ್ಯೋಗಗಳನ್ನು ನೀಡುತ್ತಿರುವ ಕ್ಷೇತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸಾಫ್ಟ್ ವೇರ್/ ಅಪ್ಲಿಕೇಶನ್ ಡೆವಲಪರ್ ಕಂಪನಿಗಳು: ಬೆಂಗಳೂರು ಐಟಿ ಹಬ್ ಎಂದೇ ವಿಶ್ವಾದ್ಯಂತ ಖ್ಯಾತಿ ಪಡೆದಿದ್ದು ದೇಶದ ವಿವಿಧ ಭಾಗಗಳಿಂದ ಉತ್ತಮವಾದ ಸಾಫ್ಟ್ ವೇರ್ / ಅಪ್ಲಿಕೇಶನ್ ಡೆವಲಪರ್ ಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು ಸಾಫ್ಟ್ ವೇರ್/ ಅಪ್ಲಿಕೇಷನ್ ವಿನ್ಯಾಸಗಾರಿಗಂತೂ ಬೇಡಿಕೆ ಹೆಚ್ಚುತ್ತಲೇ ಇದೆ.
ಮಾರುಕಟ್ಟೆ ಕಾರ್ಯನಿವಾಹಕ(ಮಾರ್ಕೆಟಿಂಗ್ ಎಕ್ಸಿಕ್ಯುಟಿವ್): ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರ, ಇಲ್ಲಿ ವಿವಿಧ ರೀತಿಯ ಸರಕುಗಳಿಗೆ ಬೇಡಿಕೆ ಎಂದಿಗೂ ಕುಸಿಯುವುದಿಲ್ಲ. ಹೊಸ ಬ್ರಾಂಡ್ ಗಳು, ವಿದೇಶಿ ಸರಕುಗಳು ಮಾರ್ಕೆಟಿಂಗ್ ವಿಭಾಗಕ್ಕೆ ಮಹತ್ವ ನೀಡಿವೆ. ಇದರಿಂದಾಗಿ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಗಳ ಬೇಡಿಕೆ ಹೆಚ್ಚುತ್ತಿದೆ.
ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್ ಎಂಜಿನಿಯರ್ಸ್: ಮೆಕ್ಯಾನಿಕಲ್ ಇಂಜಿನಿಯರಿಂಗ್ ನ್ನು ಇಂಜಿನಿಯರಿಂಗ್ ನ ಎವರ್ ಗ್ರೀನ್ ಕ್ಷೇತ್ರ ಎಂದೇ ಬಣ್ಣಿಸಲಾಗುತ್ತದೆ. ಯಾವುದಕ್ಕೆ ಬೇಡಿಕೆ ಕುಸಿದರು ಮೆಕ್ಯಾನಿಲ್ ಇಂಜಿನಿಯರ್ ಗಳಿಗೆ ಬೇಡಿಕೆ ಕುಸಿಯುವುದಿಲ್ಲ. ಬೆಂಗಳೂರು ಆಧುನಿಕ ವಾಸ್ತುಶಿಲ್ಪದ ಮಾದರಿ ನಗರವಾಗುತ್ತಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರೆ ಉತ್ತಮ ಉದ್ಯೋಗ ದೊರೆಯಲಿದೆ.
ಅಂತರ್ಜಾಲ ವ್ಯವಸ್ಥೆ ನಿರ್ವಾಹಕ (ನೆಟ್ ವರ್ಕ್ ಸಿಸ್ಟಮ್ ನಿರ್ವಾಹಕ): ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳವಣಿಗೆಯಾಗುತ್ತಿರುವಂತೆಯೇ, ಕಂಪ್ಯೂಟರ್ ಹಾಗೂ ಅಂತರ್ಜಾಲದ ಮೇಲಿನ ಅವಲಂಬನೆಯೂ ಹೆಚ್ಚುತ್ತಿದ್ದು ಈ ವ್ಯವಸ್ಥೆಯನ್ನು ನಿರ್ವಹಿಸಲು ಉದ್ಯೋಗಿಗಳು ಅವಶ್ಯವಾಗಿರುವುದರಿಂದ ಅಂತರ್ಜಾಲ ವ್ಯವಸ್ಥೆ ನಿರ್ವಾಹಕರಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ಇಂತಹ ಅನೇಕ ಉದ್ಯೋಗಾವಕಾಶಗಳಿದ್ದು ಜಾಬ್ ಸರ್ಚ್ ಇಂಜಿನ್ ಪರಿಶೀಲಿಸಿದ ನೌಕರಿಯ ಆಯ್ಕೆಗಳನ್ನು ನೀಡಿ ಸೂಕ್ತ ಉದ್ಯೋಗ ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ.
Advertisement