ಗ್ರೀಸ್ ಆರ್ಥಿಕ ಸಂಕಷ್ಟ : ಸೆನ್ಸೆಕ್ಸ್ 530 ಅಂಕ ಕುಸಿತ

ಭಾರತೀಯ ಷೇರು ಮಾರುಕಟ್ಟೆ ಹಾಗೂ ಮುಂಬೈ ಷೇರು ವಿನಿಮಯ ಸಂವೇದಿ ಸೂಚ್ಯಂಕ ಇಳಿಕೆಯಾಗಿದ್ದು ಬಿ.ಎಸ್.ಇ 530 .59 ಅಂಕ ಗಳಷ್ಟು ಕುಸಿತ ಕಂಡಿದೆ.
ಗ್ರೀಸ್ ಆರ್ಥಿಕ ಸಂಕಷ್ಟ : ಸೆನ್ಸೆಕ್ಸ್  530 ಅಂಕ ಕುಸಿತ

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಹಾಗೂ ಮುಂಬೈ ಷೇರು ವಿನಿಮಯ ಸಂವೇದಿ ಸೂಚ್ಯಂಕ(ಬಿ.ಎಸ್.ಇ) ಇಳಿಕೆಯಾಗಿದ್ದು ಬಿ.ಎಸ್.ಇ 530 .59 ಅಂಕ ಗಳಷ್ಟು ಕುಸಿತ ಕಂಡಿದೆ.     

ಗ್ರೀಕ್ ನ ಎಲ್ಲಾ ಬ್ಯಾಂಕ್ ಗಳು ಒಂದು ವಾರದವರೆಗೆ ಸ್ಥಗಿತಗೊಂಡ ಸುದ್ದಿ ದೃಢವಾಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಕುಸಿತ ಉಂಟಾಗಿದೆ. ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ (ಎನ್ಎಸ್ಇ) 'ನಿಫ್ಟಿ' ಸಹ 165 .05 ಅಂಶ ಕುಸಿದು 8,216.05 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.

27 ,811.84 ಅಂಶಗಳೊಂದಿಗೆ ಸೆನ್ಸೆಕ್ಸ್  ಕಳೆದ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತ್ತು. ಜೂ.29 ರಂದು 27,451.0 ಅಂಶಗಳೊಂದಿಗೆ ವಹಿವಾಟು ಪ್ರಾರಂಭವಾಗಿತ್ತು.  ಗ್ರೀಸ್ ಸರ್ಕಾರದ ಜೊತೆಗೆ ಸಾಲವನ್ನು ವಿಸ್ತರಿಸಲು ಯೂರೋಜೋನ್ ಒಪ್ಪದಿರುವುದರಿಂದ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್, ಗ್ರೀಸ್ ದೇಶಕ್ಕೆ ತುರ್ತು ನಿಧಿಯನ್ನು ನೀಡಲು ನಿರಾಕರಿಸಿದ್ದು,  ಗ್ರೀಕ್ ನ ಎಲ್ಲಾ ಬ್ಯಾಂಕ್ ಗಳು ಒಂದು ವಾರದವರೆಗೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಬೆಳವಣಿಗೆ ಮುಂಬೈ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು ಮಧ್ಯಾಹ್ನದ ವೇಳೆಗೆ ಬಿ.ಎಸ್.ಇ ಹಾಗೂ ನಿಫ್ಟಿಯಲ್ಲಿ ಅನುಕ್ರಮವಾಗಿ  530 .59  165 .05  ಅಂಕ ಕುಸಿತ ಉಂಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com