ಗ್ರೀಕ್ ಬಿಕ್ಕಟ್ಟಿಗೆ ಕಂಗೆಟ್ಟ ಷೇರುಪೇಟೆ

ಗ್ರೀಸ್‍ನಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಭಾರತ ಸೇರಿದಂತೆ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದೆ.
ಯೂರೋಪ್ ಷೇರುಮಾರುಕಟ್ಟೆ
ಯೂರೋಪ್ ಷೇರುಮಾರುಕಟ್ಟೆ

ಅಥೆನ್ಸ್: ಗ್ರೀಸ್‍ನಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಭಾರತ ಸೇರಿದಂತೆ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದೆ.

ಹಣಕಾಸು ಮಾರುಕಟ್ಟೆ, ಕಚ್ಚಾ ತೈಲ ದರದಲ್ಲಿ ಏರುಪೇರು ಸೇರಿದಂತೆ ಎಲ್ಲ ಕ್ಷೇತ್ರಗಳನ್ನೂ ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಗಳಿವೆ. ಗ್ರೀಸ್ ಬಿಕ್ಕಟ್ಟಿನಿಂದಾಗಿ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಸಾಲದ ಮೇಲಿನ ಬಡ್ಡಿದರಗಳು ಹೆಚ್ಚುವ ಸಾಧ್ಯತೆಗಳಿವೆ. ಆಗ ಭಾರತದಲ್ಲಿ ಬಂಡವಾಳ ತೊಡಗಿಸುವವರು ಹೆಚ್ಚಿನ ಬಡ್ಡಿ ಸಿಗಲಿದೆ ಎಂದು ಇಲ್ಲಿನ ಹೂಡಿಕೆಯನ್ನು ಹಿಂಪಡೆಯಲಿದ್ದಾರೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ರಾಜೀವ್ ಮೆಹರ್ಷಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಿಕ್ಕಟ್ಟು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ ಯೂರೋ ಸಂಕಷ್ಟಕ್ಕೆ ಸಿಲುಕುವುದರಿಂದ ಭಾರತದ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಈ ಬಿಕ್ಕಟ್ಟು ಹೇಗೆಲ್ಲ ತಿರುವು ಪಡೆಯಲಿದೆ ಎಂದು ಯಾರೂ ಸಹ ಊಹಿಸಲು ಸಾಧ್ಯವಿಲ್ಲ. ನಾವು ಆರ್‍ಬಿಐ ಜೊತೆ ನಿಕಟ ಸಂಪರ್ಕದಲ್ಲಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದಿದ್ದಾರೆ.

ಗ್ರೀಕ್ ಬ್ಯಾಂಕ್‍ಗಳು ಸ್ಥಗಿತ
ಗ್ರೀಸ್‍ಗೆ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು ಮರುಪಾವತಿ ಸಮಯ ವಿಸ್ತರಿಸಲು ಸಮ್ಮತಿಸಿಲ್ಲ. ಇದರಿಂದ ಗ್ರೀಸ್ ಆಡಳಿತ ಒಂದು ವಾರ ಕಾಲ ಎಲ್ಲ ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಿದೆ.

ಇದೇ ಸಂದರ್ಭದಲ್ಲಿ ಸೋಮವಾರ ಗ್ರೀಸ್ ಷೇರು ಪೇಟೆ ವಹಿವಾಟು ನಡೆಯಲಿಲ್ಲ. ಬೆಳಿಗ್ಗೆಯಿಂದಲೂ ಜನ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಎಟಿಎಂಗಳಲ್ಲಿಯೂ ಒಬ್ಬರು ದಿನಕ್ಕೆ 60 ಯುರೊ ಮಾತ್ರ ಡ್ರಾ ಮಾಡಲು ಮಿತಿ ಹೇರಲಾಗಿದೆ. ಸೋಮವಾರ ಗ್ರೀಕ್ ಆರ್ಥಿಕತೆಗೆ ಅಕ್ಷರಃ ಕಪ್ಪು ದಿನವಾಗಿತ್ತು. ಗ್ರೀಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೋಮವಾರ ಜಗತ್ತಿನ ಎಲ್ಲ ಷೇರುಪೇಟೆಗಳು ಇಳಿಮುಖ ಕಂಡವು. ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ವಹಿವಾಟು ಆರಂಭದಲ್ಲಿ 535 ಅಂಗಳವರೆಗೂ ಕುಸಿಯಿತು. ಆದರೂ ವಹಿವಾಟು ಅಂತ್ಯದ ವೇಳೆಗೆ 430 ಅಂಕದವರೆಗೂ ಚೇತರಿಕೆ ಕಂಡಿದೆ.

ಕಚ್ಚಾ ತೈಲ ದರ ಏರಿಕೆ

ಗ್ರೀಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಮತ್ತಷ್ಟು ಕುಸಿತ ಕಂಡಿತು. ಬ್ರೆಂಟ್ ಕ್ರೂಡ್ ಮತ್ತು ನ್ಯೂಯಾರ್ಕ್ ಮಾರುಕಟ್ಟೆಗಳಲ್ಲಿ ಒಂದೂವರೆ ಡಾಲರ್‍ ವರೆಗೂ ಕುಸಿಯಿತು. ಇದರೊಂದಿಗೆ ಪ್ರತಿ ಬ್ಯಾರಲ್ ಕಚ್ಚಾ ತೈಲ ದರ 62 ಡಾಲರ್‍ಗಳಿಗೆ ಕುಸಿದಿದೆ. ಒಂದು ಕಡೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದು ಮತ್ತೊಂದು ಕಡೆ ಕಚ್ಚಾ ತೈಲ

ಉತ್ಪಾದನೆ ಹೆಚ್ಚಾಗುತ್ತಿರುವುದರಿಂದ ದರಗಳು ದಿನೇ ದಿನೇ ಕುಸಿಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com