ಜಾಗತಿಕ ಸ್ಮಾರ್ಟ್ ಫೋನ್ ಮಾರಾಟ; ಸ್ಯಾಮ್ಸಂಗ್ ಹಿಂದಿಕ್ಕಿದ ಆಪಲ್

ಪ್ರಸಕ್ತ ವಿತ್ತೀಯ ವರ್ಷದ ಕೊನೆಯ ತ್ರಿಮಾಸದಲ್ಲಿ ಆಪಲ್ ಇಂಕ್ ಅತಿ ಹೆಚ್ಚು ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದೆ.
ಐಫೋನ್ ಅನಾವರಣ
ಐಫೋನ್ ಅನಾವರಣ

ಪ್ರಸಕ್ತ ವಿತ್ತೀಯ ವರ್ಷದ ಕೊನೆಯ ತ್ರಿಮಾಸದಲ್ಲಿ ಆಪಲ್ ಇಂಕ್ ಅತಿ ಹೆಚ್ಚು ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದೆ. ೨೦೧೧ ರಿಂದ ಮೊದಲ ಬಾರಿಗೆ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕೊ ಅನ್ನು ಹಿಂದಿಕ್ಕಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ಗಾರ್ಟ್ನರ್ ತಿಳಿಸಿದೆ.

ಆಪಲ್ ಜಾಗತಿಕವಾಗಿ ಬಳಕೆದಾರರಿಗೆ ೭೪.೮೩ ದಶಲಕ್ಷ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದ್ದರೆ, ಸ್ಯಾಮ್ಸಂಗ್ ೭೩.೦೩ ದಶಲಕ್ಷ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದೆ ಎಂದು ಗಾರ್ಟ್ನರ್ ವರದಿಯಲ್ಲಿ ಹೇಳಿದೆ.

ಐಫೋನ್-೬ ಮತ್ತು ೬ಎಸ್ ನ ದೊಡ್ಡ ಪರದೆಯೇ ಈ ಹೆಚ್ಚಿನ ಮಾರಾಟಕ್ಕೆ ಕಾರಣವಾಗಿದೆ. ಆಪಲ್ ಸಂಸ್ಥೆಯ ಮೊದಲ ತ್ರಿಮಾಸದಲ್ಲಿ ಈ ಏರಿಕೆಯಿಂದ ೧೮ ಬಿಲಿಯನ್ ಡಾಲರ್ ಲಾಭ ಪಡೆದಿದೆ ಎನ್ನಲಾಗಿದೆ.

ಕೊನೆಯ ತ್ರಿಮಾಸದಲ್ಲಿ ಆಪಲ್ ಸಂಸ್ಥೆಯ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ೪೯% ಏರಿಕೆ ಕಂಡಿದ್ದು ಇದೇ ಸಮಯದಲ್ಲಿ ಮಾರುಕಟ್ಟೆಯ ಒಡೆಯ ಸ್ಯಾಮ್ಸಂಗ್ ನ ಸ್ಮಾರ್ಟ್ ಫೋನ್ ಮಾರಾಟದಲ್ಲಿ ೧೨% ಇಳಿಕೆ ಕಂಡಿದೆ.

ಐಫೋನಿಗೆ ಮಾರುಕಟ್ಟೆಯನ್ನು ಕಳೆದುಕೊಂದಿರುವುದಲ್ಲದೆ ಕೊರಿಯನ್ ಸಂಸ್ಥೆ, ಸ್ಯಾಮ್ಸಂಗ್, ಚೈನಾದ ಮೊಬೈಲ್ ಸಂಸ್ಥೆಗಳಾದ ಕ್ಸಯೋಮಿ ಮತ್ತು ಹುವಾವೆ ಇಂದಲೂ ತೀವ್ರ ಪ್ರತಿರೋಧ ಎದುರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com