ಆರ್ಥಿಕ ಬಿಕ್ಕಟ್ಟು: ಏರ್ ಇಂಡಿಯಾ ಫ್ಲಾಟ್ ಎಸ್‍ಬಿಐಗೆ ಸೇಲ್

ಹಣಕಾಸಿನ ಮುಗ್ಗಟ್ಟಿನಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ನಾಲ್ಕು ಅಪಾರ್ಟ್‍ಮೆಂಟ್‍ಗಳನ್ನು ಮಾರಾಟ ಮಾಡಲು ಮುಂದಾಗಿದೆ..
ಏರ್ ಇಂಡಿಯಾ ಫ್ಲಾಟ್ (ಸಂಗ್ರಹ ಚಿತ್ರ)
ಏರ್ ಇಂಡಿಯಾ ಫ್ಲಾಟ್ (ಸಂಗ್ರಹ ಚಿತ್ರ)
Updated on

ಮುಂಬೈ: ಹಣಕಾಸಿನ ಮುಗ್ಗಟ್ಟಿನಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ನಾಲ್ಕು ಅಪಾರ್ಟ್‍ಮೆಂಟ್‍ಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ರು.90 ಕೋಟಿ ನೀಡಿ ಅವುಗಳನ್ನು ಖರೀದಿಸಲು ನಿರ್ಧರಿಸಿದೆ. ಈ ತಿಂಗಳಲ್ಲೇ ಅದು ಅಂತಿಮವಾಗಲಿದೆ ಎಂದು ಹೇಳಲಾಗಿದೆ. ಏರ್ ಇಂಡಿಯಾಕ್ಕೆ ರು5 ಸಾವಿರ ಕೋಟಿ ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ಅವುಗಳನ್ನು ಮಾರಲಾಗುತ್ತಿದೆ. ಈ ಡೀಲ್ ಬಗ್ಗೆ ಎಸ್ ಬಿಐನ ಎಸ್ಟೇಟ್ ಮ್ಯಾನೇಜರ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ದಕ್ಷಿಣ ಮುಂಬೈನ ಪದ್ದಾರ್‍ನಲ್ಲಿರುವ ಐಷಾರಾಮಿ ಫ್ಲ್ಯಾಟ್‍ಗಳ ಮಾರಾಟಕ್ಕಾಗಿ ಕಳೆದ 2 ವರ್ಷಗಳಿಂದ ಪ್ರಯತ್ನಿಸುತ್ತಿತ್ತು. 2 ವರ್ಷಗಳ ಹಿಂದೆ ಅವುಗಳನ್ನು ಇ-ಹರಾಜಿನ ಮೂಲಕ ಮಾರಲು ಯತ್ನಿಸಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಅದ್ಧೂರಿ ವ್ಯವಸ್ಥೆಗಳನ್ನು ಹೊಂದಿರುವ ಪ್ರತಿ ಅಪಾರ್ಟ್‍ಮೆಂಟ್ 3 ಕೊಠಡಿಗಳನ್ನು ಹೊಂದಿದ್ದು, 2,033 ಚದರ ಅಡಿ ವಿಸ್ತೀರ್ಣ ಹೊಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com