ರೈಲ್ವೆಗೂ ಎಲ್ಐಸಿ ಭದ್ರತೆ

ಅತಿ ದೊಡ್ಡ ಮೊತ್ತದ ಬಂಡವಾಳ ವಿನಿಯೋಗ ಸಂಬಂಧ ರೈಲ್ವೆ ಹಾಗೂ ಭಾರತೀಯ ಜೀವವಿಮಾ ನಿಗಮಾ(ಎಲ್ಐಸಿ)ದ ನಡುವೆ ಒಡಂಡಿಕೆ ಏರ್ಪಟ್ಟಿದೆ...
ರೈಲ್ವೆ
ರೈಲ್ವೆ

ನವದೆಹಲಿ: ಅತಿ ದೊಡ್ಡ ಮೊತ್ತದ ಬಂಡವಾಳ ವಿನಿಯೋಗ ಸಂಬಂಧ ರೈಲ್ವೆ ಹಾಗೂ ಭಾರತೀಯ ಜೀವವಿಮಾ ನಿಗಮಾ(ಎಲ್ಐಸಿ)ದ ನಡುವೆ ಒಡಂಡಿಕೆ ಏರ್ಪಟ್ಟಿದೆ. ರೈಲ್ವೆಗೆ 1.5 ಲಕ್ಷ ಕೋಟಿ ರು. ಒದಗಿಸಲು ಎಲ್ಐಸಿ ಮುಂದಾಗಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಸಮ್ಮುಖದಲ್ಲಿ ಬುಧವಾರ ಈ ಭಾರಿ ಹೂಡಿಕೆ ಸಂಬಂಧ ಒಡಂಬಡಿಕೆಯಾಯಿತು. ಒಡಂಬಡಿಕೆ ಪ್ರಕಾರ ಎಲ್ ಐಸಿ ಮುಂದಿನ ಐದು ವರ್ಷಗಳಲ್ಲಿ ರೈಲ್ವೆಗೆ ಮತ್ತು ರೈಲ್ವೆ ಅಂಗ ಸಂಸ್ಥೆಗಳಿಗೆ ನಾನಾ ಯೋಜನೆಗಳೆಗೆ 1.5 ಲಕ್ಷ ಕೋಟಿ ರು. ನೆರವು ಒದಗಿಸುತ್ತದೆ.

ಈ ನೆರವು 2015-16 ನೇ ಸಾಲಿನಿಂದಲೇ ಆರಂಭವಾಗುತ್ತದೆ. ಭಾರಿ ಪ್ರಮಾಣದ ನಗದು ಹೊಂದಿರುವವ ಒಡಂಬಡೀಕೆಯಲ್ಲಿ ರೈಲ್ವೆ ಪಡೆಯುವ ಸಾಲ ಮತ್ತು ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಲು ಐದು ವರ್ಷ ರಿಯಾಯ್ತಿ ನೀಡಲಾಗಿದೆ.

ಮರುಪಾವತಿ ಅವಧಿಯನ್ನು ರೈಲ್ವೆಯ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಇದು ಎನ್ ಡಿಎ ಸರ್ಕಾರದ ಹೊಸ ಆರ್ಥಿಕ ನೀತಿಯ ಮೊದಲ ಹೆಜ್ಜೆ ಎಂದೇ ಹೇಳಬಹುದು. ಮುಂದಿನ ಐದು ವರ್ಷಗಳಲ್ಲಿ 8.5 ಲಕ್ಷ ಕೋಟಿ ರೂಪಾಯಿ ಹೂಡುವುದಾಗಿ ಬಜೆಟ್ ನಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com