ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಗ್ರಾಹಕ ಸ್ನೇಹಿ ವ್ಯವಸ್ಥೆ ಕೈಗೊಂಡಿದೆ. ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಖಾತೆಯಲ್ಲಿ ನಮೂದಿಸಲು ಬ್ಯಾಂಕ್ ಮುಂದೆ ಸಾಲು ನಿಲ್ಲುವ ಅವಶ್ಯಕತೆ ಇಲ್ಲ. ಇನ್ನು ಎಟಿಎಂಗೆ ಹೋದರೆ ಸಾಕು!
ಹಾಗಂತ ಎಟಿಎಂನಲ್ಲಿ ನೋಂದಣಿ ಮಾಡಿಕೊಳ್ಳಲು ಯಾರನ್ನೂ ನೇಮಿಸಿರುವುದಿಲ್ಲ. ಎಸ್ ಬಿಎಂ ಪ್ರಸ್ತುತ 1274 ಎಟಿಎಂ ಶಾಖೆ ಹೊಂದಿದೆ.
ಇದೀಗ ಗ್ರಾಹಕರು ಎಟಿಎಂ ಕೇಂದ್ರಕ್ಕೆ ಹೋಗಿ ತಮ್ಮ ಖಾತೆಗಳ ಜತೆಗೆ ಆಧಾರ್ ಸಂಖ್ಯೆಯನ್ನು ತಾವೇ ನಮೂದಿಸಿಕೊಳ್ಳಲು ಸಹಾಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಇದರಿಂದ ಅನುಕೂಲದ ಜತೆ ಸಮಯವೂ ಉಳಿತಾಯವಾಗಲಿದೆ ಎಂದು ಬ್ಯಾಂಕ್ ನ ಪ್ರಕಟಣೆ ತಿಳಿಸಿದೆ.
Advertisement