ನ್ಯೂ ಆರೆಂಜ್ ಕಲರ್ ನಲ್ಲಿ ಮಾರುಕಟ್ಟೆಗೆ ಬರುತ್ತಿದೆ ವಿಲಿಯಂ ಪೆನ್

ಪೆನ್
ಪೆನ್

ಬೆಂಗಳೂರು: ಲ್ಯಾಮಿ ಈ ಬಾರಿ ಕಾಪರ್ ಆರೆಂಜ್‍ನ (ತಾಮ್ರ ಕಿತ್ತಳೆ ಬಣ್ಣ) ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಭಾರತದಲ್ಲಿ ಈ ಉತ್ಪನ್ನವನ್ನು ವಿಲಿಂ ಪೆನ್ನ್ ಲಭ್ಯಗೊಳಿಸಲಿದೆ.

ಲ್ಯಾಮಿಯ ಅಲ್-ಸ್ಟಾರ್, ಹೊಸ ಪರಿಚಯ ಯುವ ನೋಟವನ್ನು ಹೊಂದಿರುವ ಮತ್ತು ಆಕರ್ಷಕವಾಗಿರುವ “ಕಾಪರ್ ಆರೆಂಜ್”, ಉದ್ದೀಪನದ ಪರಿಕಲ್ಪನೆಗೆ ಸಂಪೂರ್ಣವಾಗಿ ಹೊಸ ಅರ್ಥವನ್ನು ಒದಗಿಸುತ್ತದೆ. ಈ ಆವೃತ್ತಿಯನ್ನು ಪೂರ್ಣಗೊಳಿಸಲು ಲ್ಯಾಮಿ, ಯುವ ನೋಟವಿರುವ ಹಾಗೂ ಆಕರ್ಷಕ “ಕಾಪರ್ ಆರೆಂಜ್”ನಲ್ಲಿ ಲ್ಯಾಮಿ ಟಿ 10 ಇಂಕ್ ಕಾರ್‍ಟ್ರಿಡ್ಜ್ ಅನ್ನು ವ್ಯಾಖ್ಯಾನಿಸಿದೆ.

ಇದರ ರೋಚಕ ಮೆಟ್ಯಾಲಿಕ್ ಬಣ್ಣ, ಈ ಹಿಂದಿನ ಆವೃತ್ತಿಗಳಲ್ಲಿದ್ದಂತಹ ರೋಸ್ ಗೋಲ್ಡ್ ಹಾಗೂ ತಾಮ್ರದ ಬಣ್ಣಗಳಿಗೆ ಸೇರಿಸಿದಂತಿದ್ದು, ಆಕರ್ಷಣೆಯನ್ನು ಹೆಚ್ಚಿಸುವಂತಿದೆ. ಈ ಆರೆಂಜ್ ಅಲ್ಯೂಮಿನಯಂ ಲ್ಯಾಮ್ ಅಲ್-ಸ್ಟಾರ್ ಫೌಂಟೆನ್ ಪೆನ್, ವಿಶೇಷ ಪಾರದರ್ಶಕ ಗ್ರಿಪ್ ಹಾಗೂ ಸ್ಪ್ರಿಂಗ್ ಕ್ರಿಯೆಯುಳ್ಳ ಲೋಹದ ಕ್ಲಿಪ್‍ನೊಂದಿಗೆ ಬರುತ್ತದೆ. ಈ ಹೊಸ ಹಾಗೂ ವಿನೂತನ ಲ್ಯಾಮಿ ಅಲ್-ಸ್ಟಾರ್ ಕಾಪರ್ ಆರೆಂಜ್, ಫೌಂಟೆನ್ ಪೆನ್, ಬಾಲ್‍ಪಾಯಿಂಟ್ ಪೆನ್, ಹಾಗೂ ರೋಲರ್ ಬಾಲ್ ಪೆನ್ ರೂಪಗಳಲ್ಲಿ ಲಭ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com