ಡಿಎಚ್‍ಎಫ್ಎಲ್‍ಗೆ ಶೇ.17.45 ಲಾಭ

ಗೃಹ ಹಣಕಾಸು ಕಂಪನಿ ಡಿಎಚ್‍ಎಫ್ ಎಲ್ 2015ರ ಮಾರ್ಚ್ 31ರ ಅಂತ್ಯಕ್ಕೆ ರು.621.29 ಕೋಟಿ, ಅಂದರೆ ಶೇ.17.45ರಷ್ಟು ಲಾಭ ಗಳಿಸಿದೆ.
ಡಿಎಚ್‍ಎಫ್ ಎಲ್‍ನ ಅಧ್ಯಕ್ಷ ಕಪಿಲ್ ವಾಧವನ್ (ಸಂಗ್ರಹ ಚಿತ್ರ)
ಡಿಎಚ್‍ಎಫ್ ಎಲ್‍ನ ಅಧ್ಯಕ್ಷ ಕಪಿಲ್ ವಾಧವನ್ (ಸಂಗ್ರಹ ಚಿತ್ರ)

ನವದೆಹಲಿ: ಗೃಹ ಹಣಕಾಸು ಕಂಪನಿ ಡಿಎಚ್‍ಎಫ್ ಎಲ್ 2015ರ ಮಾರ್ಚ್ 31ರ ಅಂತ್ಯಕ್ಕೆ ರು.621.29 ಕೋಟಿ, ಅಂದರೆ ಶೇ.17.45ರಷ್ಟು ಲಾಭ ಗಳಿಸಿದೆ.

ವ್ಯಾಪಾರ ಪ್ರಗತಿ ಹಾಗೂ ಲಾಭ ಎರಡರಲ್ಲೂ ಕಂಪನಿ ಯಶಸ್ಸು ಕಂಡಿದೆ. ನಾವು ಕೆಳ ಹಾಗೂ ಮಧ್ಯಮ ವರ್ಗದ ಜನರ ನಮ್ಮ ಗ್ರಾಹಕರ ಸಂಖ್ಯೆ ಗುರುತಿಸಿ, ಅವರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಇದು ನಮ್ಮ ಲೋನ್ ಪೋರ್ಟ್ ಫೋಲಿಯಾ ಹಾಗೂ ಆದಾಯ ಬೆಳವಣಿಗೆಯ ಸ್ಥಿರ ವಿಸ್ತರಣೆ ಸಾಧಿಸಲು ನೆರವಾಗುತ್ತಿದೆ. ಡಿಎಚ್ ಎಫ್ ಎಲ್ ತನ್ನ ಅಸ್ತಿತ್ವವನ್ನು 575 ಸ್ಥಳಗಳಿಗೆ ಹೆಚ್ಚಿಸುವ ಮೂಲಕ ತನ್ನ ನೆಟ್‍ವರ್ಕ್‍ನ ಬಲವನ್ನು ವಿಸ್ತರಿಸಿಕೊಂಡಿದೆ. ತನ್ನ ಎಲ್ಲಾ ಗ್ರಾಹಕರ ವರ್ಗಗಳಿಗೂ ಮನೆ ಸಾಲಗಳ ಕೊಡುಗೆ ನೀಡುತ್ತಿದೆ. ಈ ಪ್ರಕಾರ ಕಡಿಮೆ ಹಾಗೂ ಮಧ್ಯಮ ವರ್ಗಗಳ ಗ್ರಾಹಕರ ಕಡೆಗಿನ ತನ್ನ ಗಮನವನ್ನು ಉಳಿಸಿ ಕೊಂಡಿದೆ ಎಂದು ಡಿಎಚ್‍ಎಫ್ ಎಲ್‍ನ ಅಧ್ಯಕ್ಷ ಕಪಿಲ್ ವಾಧವನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com