ಪಿಎಫ್ ಗೆ ತಿದ್ದುಪಡಿ: ವೇತನಕ್ಕೆ ಕತ್ತರಿ?

ಶೀಘ್ರದಲ್ಲೇ ನಿಮ್ಮ ಟೇಕ್ ಹೋಂ ವೇತನಕ್ಕೆ ಕತ್ತರಿ ಬೀಳಲಿದೆ. ಮನೆ ಬಾಡಿಗೆ, ಗ್ರಾಚ್ಯುಟಿ, ಪ್ರಯಾಣ ಮತ್ತು ಇತರೆ ಭತ್ಯೆಗಳನ್ನು ಭವಿಷ್ಯ ನಿಧಿ ವ್ಯಾಪ್ತಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ..
ಭವಿಷ್ಯನಿಧಿ
ಭವಿಷ್ಯನಿಧಿ

ನವದೆಹಲಿ: ಶೀಘ್ರದಲ್ಲೇ ನಿಮ್ಮ ಟೇಕ್ ಹೋಂ ವೇತನಕ್ಕೆ ಕತ್ತರಿ ಬೀಳಲಿದೆ. ಮನೆ ಬಾಡಿಗೆ, ಗ್ರಾಚ್ಯುಟಿ, ಪ್ರಯಾಣ ಮತ್ತು ಇತರೆ ಭತ್ಯೆಗಳನ್ನು ಭವಿಷ್ಯ ನಿಧಿ ವ್ಯಾಪ್ತಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ.

ನೌಕರರ ಭವಿಷ್ಯನಿಧಿ ಮತ್ತು ಇತರೆ ನಿಬಂಧನೆ ಕಾಯ್ದೆ, 1952ಕ್ಕೆ ತಿದ್ದುಪಡಿ ತರಲು ಕಾರ್ಮಿಕ ಸಚಿವಾಲಯ ನಿರ್ಧರಿಸಿದ್ದು, ಒಟ್ಟಾರೆ ವೇತನದಿಂದ ಭವಿಷ್ಯ ನಿ„(ಪಿಎಫ್) ಕಡಿತದ ಮೊತ್ತವನ್ನು ಈಗಿರುವ ಶೇ.10ರಿಂದ ಶೇ.12 ಕ್ಕೇರಿಸಲು ಚಿಂತನೆ ನಡೆಸಿದೆ. ಈ ಪ್ರಸ್ತಾಪಕ್ಕೆ ಈಗಾಗಲೇ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಟ್ರಸ್ಟಿಗಳ ಮಂಡಳಿ ಒಪ್ಪಿಗೆ ಸೂಚಿಸಿದ್ದು, ಮುಂದಿನ ತಿಂಗಳು
ಕೇಂದ್ರ ಸಂಪುಟದಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಮುಂಗಾರು ಅ„ವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com