ದೇಶಾದ್ಯಂತ ಮ್ಯಾಗಿ ನೂಡಲ್ಸ್ ಗೆ ನಿಷೇಧ ಸಾಧ್ಯತೆ..?

ಸೀಸ ಮತ್ತಿತರ ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಕುರಿತು ಇತ್ತೀಚೆಗೆ ದೇಶಾದ್ಯಂತ್ಯ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ನೆಸ್ಟೆ ಸಂಸ್ಥೆಯ ಜನಪ್ರಿಯ ಫಾಸ್ಟ್ ಫುಡ್ ಮ್ಯಾಗಿ ನ್ಯೂಡಲ್ಸ್..
ಮ್ಯಾಗಿ ನೂಡಲ್ಸ್
ಮ್ಯಾಗಿ ನೂಡಲ್ಸ್
Updated on

ನವದೆಹಲಿ: ಸೀಸ ಮತ್ತಿತರ ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಕುರಿತು ಇತ್ತೀಚೆಗೆ ದೇಶಾದ್ಯಂತ್ಯ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ನೆಸ್ಟೆ ಸಂಸ್ಥೆಯ ಜನಪ್ರಿಯ ಫಾಸ್ಟ್ ಫುಡ್  ಮ್ಯಾಗಿ ನ್ಯೂಡಲ್ಸ್ ಮೇಲೆ ದೇಶಾದ್ಯಂತ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನೆಸ್ಲೆ ಸಂಸ್ಥೆಯ ಈ ಉಪಾಹಾರದ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಆರೋಪಗಳು ಕೇಳಿಬಂದಿರುನವ ಹಿನ್ನಲೆಯಲ್ಲಿ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority of India-FSSAI) ದೇಶದ ವಿವಿಧೆಡೆಗಳಿಂದ ಮ್ಯಾಗಿ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಗುರಿಪಡಿಸಲಿದೆ ಎಂದು ತಿಳಿದುಬಂದಿದೆ. ಈ ಪರೀಕ್ಷೆಯಲ್ಲಿ ರಾಸಾಯನಿಕ ಅಂಶಗಳು ಇರುವುದು ದೃಢಪಟ್ಟರೆ ಮ್ಯಾಗಿ ನೂಡಲ್ಸ್ ಗೆ ದೇಶಾದ್ಯಂತ ನಿಷೇಧ ಹೇರುವ ಸಾಧ್ಯತೆಯಿದೆ. ಈಗಾಗಲೇ ಉತ್ತರ ಪ್ರದೇಶ ರಾಜ್ಯದಲ್ಲಿ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಗೆ ನಿಷೇಧ ಹೇರಲಾಗಿದೆ.

ಉತ್ತರ ಪ್ರದೇಶದ ಕೆಲವು ಪ್ರದೇಶಗಳಿಂದ ಸಂಗ್ರಹಿಸಿದ ಮ್ಯಾಗಿ ನೂಡಲ್ಸ್ ಮಾದರಿಯಲ್ಲಿ ಸೀಸ ಮತ್ತು ಮೊನೊಸೋಡಿಯಂ ಗುಟ್ಲಮೇಟ್‌ ಎಂಬ ರಾಸಾಯನಿಕ ಪದಾರ್ಥಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರುವುದು ಪತ್ತೆಯಾಗಿತ್ತು. ಈ ಎರಡು ರಾಸಾಯನಿಕಗಳಿಂದ ಕ್ಯಾನ್ಸರ್‌ ರೋಗ ಬರುವ ಸಾಧ್ಯತೆಯಿದೆ ಎಂದು ವೈದ್ಯಕೀಯ ವರದಿ ನೀಡಲಾಗಿತ್ತು. ಆಹಾರದಲ್ಲಿ ದಶಲಕ್ಷಕ್ಕೆ 0.01 ಭಾಗ ಸೀಸದ ಅಂಶ ಸೇರಿಸಲು ಅನುಮತಿಯಿದೆ. ಆದರೆ ಮ್ಯಾಗಿಯಲ್ಲಿ ಶೇ. 17 ರಷ್ಟು ಸೀಸವಿರುವುದು ಉತ್ತರ ಪ್ರದೇಶದ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಿಂದ ಪತ್ತೆಯಾಗಿತ್ತು. ಅಂತೆಯೇ ಮೊನಸೋಡಿಯಂ ಗುಟ್ಲಮೇಟ್‌ ಅಂಶವೂ ಅಪಾಯದ ಮಟ್ಟಕ್ಕಿಂತ ಹೆಚ್ಚಿದೆ ಎಂದು ಹೇಳಲಾಗಿತ್ತು.

ಒಟ್ಟಾರೆ ಪುಟ್ಟಮಕ್ಕಳನ್ನು ಗುರಿಯಾಗಿಸಿಕೊಂಡು ನೆಸ್ಲೆ ಸಂಸ್ಥೆ ಹೊರತಂದಿದ್ದ ಮ್ಯೂಗಿ ನ್ಯೂಡಲ್ಸ್ ನ ಭವಿಷ್ಯ ಇದೀಗ ಡೋಲಾಯಮಾನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com