ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವೀಸ್ ಸಂಸ್ಥೆಯನ್ನು ಖರೀದಿಸಲಿರುವ ರಿಲಯನ್ಸ್

ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವೀಸ್ ಸಂಸ್ಥೆಯನ್ನು ಖರೀದಿಸಲಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್(ಸಾಂದರ್ಭಿಕ ಚಿತ್ರ)
ರಿಲಯನ್ಸ್ ಕಮ್ಯುನಿಕೇಷನ್ಸ್(ಸಾಂದರ್ಭಿಕ ಚಿತ್ರ)

ಮುಂಬೈ: ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವೀಸ್ ಸಂಸ್ಥೆಯನ್ನು ಖರೀದಿಸಲಿದೆ.
ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವಿಸ್ ನೊಂದಿಗೆ ಸ್ಟಾಕ್- ಸ್ಪೆಕ್ಟ್ರಂ ಶುಲ್ಕ ಪಾವತಿ ಒಪ್ಪಂದ ಮಾಡಿಕೊಂಡಿರುವ ರಿಲಯನ್ಸ್ ಸಂಸ್ಥೆ  ಸಿಸ್ಟೆಮಾ ಶ್ಯಾಮ್ ಸ್ಪೆಕ್ಟ್ರಮ್ ನ ರೂ. 392 ಕೋಟಿ ಮೊತ್ತದ ದೂರ ಸಂಪರ್ಕ ಇಲಾಖೆಯ ಕಂತುಗಳನ್ನು ಮುಂದಿನ 10 ವರ್ಷಗಳಲ್ಲಿ ಪಾವತಿಸಲಿದೆ.
ವಿಲೀನಗೊಳ್ಳಲಿರುವ ಸಿಸ್ಟೆಮಾ ಶ್ಯಾಮ್ ಟೆಲಿ ಸರ್ಸಿಸ್ ರಿಲಯನ್ಸ್ ಕಮ್ಯುನಿಕೇಶನ್ಸ್ ನಲ್ಲಿ ಶೇ.10 ರಷ್ಟು ಪಾಲನ್ನು ಪಡೆಯಲಿದೆ. ಇದೇ ವೇಳೆ ಸಿಸ್ಟೆಮಾ ಶ್ಯಾಮ್ ಒಡೆತನದ ಎಂಟಿಎಸ್ ಬ್ರ್ಯಾಂಡ್ ಸಹ ರಿಲಯನ್ಸ್ ತೆಕ್ಕೆಗೆ ಸೇರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಿಸ್ಟೆಮಾ ಟೆಲಿ ಸರ್ವಿಸ್ ಸಂಸ್ಥೆ ಖರೀದಿಯಿಂದ ರಿಲಯನ್ಸ್ ಕಮ್ಯುನಿಕೇಶನ್ಸ್ ಗೆ 9 ಮಿಲಿಯನ್ ಹೆಚ್ಚುವರಿ ಬಳಕೆದಾರರು ಸಿಗಲಿದ್ದು, ವಾರ್ಷಿಕ 1 ,500 ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಒಪ್ಪಂದದಿಂದ ರಿಲಯನ್ಸ್ ಸಂಸ್ಥೆಯ 800 ಮೆಗಾ ಹರ್ಡ್ಸ್ ಹಾಗೂ 850 ಮೆಗಾ ಹರ್ಡ್ಸ್ ವ್ಯಾಪ್ತಿಯ ಸ್ಪೆಕ್ಟ್ರಂ ನ ವ್ಯಾಲಿಡಿಟಿ ಕೂಡ 12 ವರ್ಷಗಳವರೆಗೆ ವಿಸ್ತರಣೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com