ದ್ವಿದಳ ಧಾನ್ಯಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ದ್ವಿದಳ ಧಾನ್ಯಗಳ ಬೆಲೆ ಹೆಚ್ಚಳದಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಗುರುವಾರ ಕಡ್ಲೆಬೇಳೆ ಮತ್ತು ಮಸೂರ್ ದಾಲ್‍ಗೆ ಕ್ವಿಂಟಲ್‍...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದ್ವಿದಳ ಧಾನ್ಯಗಳ ಬೆಲೆ ಹೆಚ್ಚಳದಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಗುರುವಾರ ಕಡ್ಲೆಬೇಳೆ ಮತ್ತು ಮಸೂರ್ ದಾಲ್‍ಗೆ ಕ್ವಿಂಟಲ್‍ಗೆ ರು.250ರಷ್ಟು ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. 

ಹಿಂಗಾರು ಋತುವಿನಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಮತ್ತು ಆಮದಿನ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ. 
ಈ ಧಾನ್ಯಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವುದರ ಜೊತೆಗೆ, ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಕಡ್ಲೆಬೇಳೆ, ಮಸೂರ್ ದಾಲ್‍ಗೆ ಕ್ವಿಂಟಲ್‍ಗೆ ರು.75ರಷ್ಟು ಬೋನಸ್ ಅನ್ನೂ ಘೋಷಿಸಿದೆ. 
ಪ್ರಮುಖ ರಬಿ ಬೆಳೆಯಾದ ಗೋದಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‍ಗೆ ರು.75 ಏರಿಸಿದ್ದು, ರು.1,525ಕ್ಕೆ ತಲುಪಿದೆ. ಇದೇ ರೀತಿ, ಎಣ್ಣೆಬೀಜಗಳಿಗೆ ಕ್ವಿಂಟಲ್‍ಗೆ ರು.250 ಬೆಂಬಲ ಬೆಲೆ ನೀಡಲು ನಿರ್ಧರಿಸಲಾಗಿದೆ. 
ಸರ್ಕಾರದ ಸಲಹಾ ಸಂಸ್ಥೆಯಾದ ಕೃಷಿ ವೆಚ್ಚ ಮತ್ತು ದರ ಆಯೋಗದ ಶಿಫಾರಸಿನ ಮೇರೆಗೆ ಗೋದಿ, ಬಾರ್ಲಿ, ಕಡ್ಲೆಬೇಳೆ, ಮಸೂರ್, ಸಾಸಿವೆ ಸೇರಿದಂತೆ 6 ರಬಿ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದು ವಿದ್ಯುತ್ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com