• Tag results for ಕೇಂದ್ರ

ಹೆದ್ದಾರಿಗಳಲ್ಲಿ ಖಾಸಗಿ ಕಂಪನಿಗಳಿಂದ ಟೋಲ್ ಸಂಗ್ರಹ; ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

published on : 22nd October 2019

ಫೇಸ್ಪುಕ್, ವಾಟ್ಸಪ್ ನಿಯಂತ್ರಣ ಅಗತ್ಯ: ಸುಪ್ರೀಂ'ಗೆ ಕೇಂದ್ರ

ಪ್ರಜಾಪ್ರಭುತ್ವ ರಾಜಕೀಯಕ್ಕೆ ಅಂತರ್ಜಾಲ ಊಹಿಸಲೂ ಆಗದಷ್ಟು ಹಾನಿಯುಂಟು ಮಾಡುತ್ತಿದ್ದು, ಫೇಸ್'ಬುಕ್, ವಾಟ್ಸಪ್, ಟ್ವಿಟರ್ ಅಂತಹ ಮಧ್ಯವರ್ತಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್'ಗೆ ತಿಳಿಸಿದೆ.

published on : 22nd October 2019

ಎನ್ಆರ್'ಸಿ ಜಾರಿಗೆ ಸರ್ಕಾರ ಸಿದ್ಧ: ಅಕ್ರಮ ವಲಸಿಗರ ಬಂಧನದಲ್ಲಿಡಲು ನಿರಾಶ್ರಿತ ಕೇಂದ್ರ ನಿರ್ಮಾಣ

ರಾಷ್ಟ್ರೀಯ ಪೌರತ್ವ ನೋಂದಣಿ ಅಭಿಯಾನ ಆರಂಭಿಸಲು ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದ್ದು, ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಗಡಿಪಾರು ಮಾಡುವವರೆಗೂ ಇರಿಸಲು ಬಂಧನ ಕೇಂದ್ರವನ್ನು ನಿರ್ಮಾಣ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

published on : 20th October 2019

ವಿಜಯಪುರ: ತೆರೆಯದ ಆರೋಗ್ಯ ಕೇಂದ್ರ, ಹಳ್ಳಿ ಮಹಿಳೆಯರ ನೆರವಿನಿಂದ ಹೆಣ್ಣು ಮಗುವಿನ ಜನ್ಮ ನೀಡಿದ ಮಹಿಳೆ!

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ್ದ ಕಾರಣ ಕೇಂದ್ರದ ಹೊರಗೇ ಗರ್ಭಿಣಿಯೊಬ್ಬರು ಸ್ಥಳೀಯ ಮಹಿಳೆಯರ ಸಹಕಾರದಿಂದ ಮಗುವಿಗೆ ಜನ್ಮ ನೀಡಿರುವ ಘಟನೆ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನಲ್ಲಿ ನಡೆದಿದೆ.

published on : 18th October 2019

ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರನ್ನು ನನ್ನ ಉತ್ತರಾಧಿಕಾರಿಯಾಗಿ ನೇಮಿಸಿ: ಸಿಜೆಐ ರಂಜನ್ ಗೊಗೊಯ್ ಶಿಫಾರಸು 

ಸುಪ್ರೀಂ ಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಬೇಕೆಂದು ಶಿಫಾರಸು ಮಾಡಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

published on : 18th October 2019

ಸರ್ದಾರ್‌ ಪಟೇಲ್ ಭಾವಚಿತ್ರ ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ

ಮಹತ್ವ ಬೆಳವಣಿಗೆಯಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಕಚೇರಿಗಳಲ್ಲಿ ದೇಶದ ಮೊಟ್ಟ ಮೊದಲ ಗೃಹ ಸಚಿವ ಹಾಗೂ ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರವನ್ನು ಅಳವಡಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

published on : 18th October 2019

ಐಟಿ ದಾಳಿ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿಲ್ಲ: ಕೇಂದ್ರ ಸಚಿವ ಹರ್ಷವರ್ಧನ್

ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿಯ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಎನ್ ಡಿಎ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸಚಿವ ಡಾ ಹರ್ಷವರ್ಧನ್ ಅವರು ಹೇಳಿದ್ದಾರೆ.

published on : 12th October 2019

ಬಿಜೆಪಿಯಿಂದ ಕೇಂದ್ರೀಯ ಸಂಸ್ಥೆಗಳ ದುರುಪಯೋಗ: ದಿನೇಶ್ ಗುಂಡೂರಾವ್

ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷವನ್ನು ಹಣಿಯಲು ಬಿಜೆಪಿ ಪ್ರಯತ್ನಿಸುತ್ನಿದೆ. ಜನರು ಇದನ್ನು ಯಾವತ್ತೂ ಒಪ್ಪುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

published on : 11th October 2019

ಕೋಡ್ ಕಾರ್ಡ್ ಮೂಲಕ 'ಮಾಲು' ಪೂರೈಕೆ: ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳ ಐಷಾರಾಮಿ ಜೀವನ!

ಕೆಲ ಪ್ರಭಾವಿ ಕೈದಿಗಳಿಗೆ ಪರಪ್ಪನ ಅಗ್ರಹಾರ ಕಾರಾಗೃಹ ಜೈಲಾಗಿಲ್ಲ.ಐಷಾರಾಮಿ ಜೀವನ ನಡೆಸುವ ಮತ್ತೊಂದು ಗುಹೆಯಾಗಿದೆ. ಇಲ್ಲಿದ್ದುಕೊಂಡೆ ಹೊರಗಿನ ತಮ್ಮ ವ್ಯವಹಾರಗಳನ್ನು ಸುಲಭವಾಗಿ ನಡೆಸುತ್ತಾರೆ. ಪೊಲೀಸರು ಆಗಾಗ್ಗೆ ದಾಳಿ ಮಾಡಿದ್ದರೂ ಪರಿಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲ.

published on : 11th October 2019

ಅನುಮತಿಸಿದ್ದಕ್ಕಿಂತಲೂ ಹೆಚ್ಚು ಸಂದರ್ಶಕರಿಂದ ಶಶಿಕಲಾ ಭೇಟಿ: ಆರ್'ಟಿಐ  

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರನ್ನು ಭೇಟಿ ಮಾಡಲು ಅನುಮತಿಸಿದ್ದಕ್ಕಿಂತಲೂ ಹೆಚ್ಚು ಜನರಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 

published on : 10th October 2019

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ.5ರಷ್ಟು ಹೆಚ್ಚಳ

ಕೇಂದ್ರ ಸರ್ಕಾರ ತನ್ನ ನೌಕರರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು(ಡಿಎ) ಶೇ. 5ರಷ್ಟು ಹೆಚ್ಚಿಸಲು ಬುಧವಾರ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.

published on : 9th October 2019

ಪರಿಸ್ಥಿತಿ ಅನುಕೂಲವಾದರೆ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುತ್ತೇವೆ: ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಶಾಶ್ವತವಾಗಿರುವುದಿಲ್ಲ ಅನುಕೂಲಕರ ಪರಿಸ್ಥಿತಿ ಒದಗಿ ಬಂದ ನಂತರ ಅದು ತನ್ನ ರಾಜ್ಯ ಸ್ಥಾನಮಾನವನ್ನು ಮರಳಿ ಪಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

published on : 7th October 2019

ಎನ್‌ಆರ್‌ಸಿ ಪಟ್ಟಿಗೆ ಸೇರ್ಪಡೆಯಾಗದ 19 ಲಕ್ಷ ಜನ : ಕೇಂದ್ರದ ವಿವರಣೆಗೆ ಕೇಳಿದ ಪಿ ಚಿದಂಬರಂ 

ರಾಷ್ಟ್ರೀಯ ನಾಗರಿಕರ ನೋಂದಣಿಯಲ್ಲಿ (ಎನ್‌ಆರ್‌ಸಿ) ಹೆಸರಿಸದ 19 ಲಕ್ಷ ಜನರ ಬಗ್ಗೆ ಸರ್ಕಾರ ತನ್ನ ಯೋಜನೆಯನ್ನು ಬಹಿರಂಗಪಡಿಸಬೇಕು ಎಂದು ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಸೋಮವಾರ ಆಗ್ರಹಿಸಿದ್ದಾರೆ.

published on : 7th October 2019

ಕೊನೆಗೂ ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ: ಬಿಎಸ್'ವೈ ಸರ್ಕಾರ ನಿರಾಳ

ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ಬಾರದೆ ಇಕ್ಕಟ್ಟು ಅಧಿವೇಶನ ಎದುರಿಸುವ ಚಿಂತೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಕೊನೆಗೂ ಕೊಂಚ ನಿರಾಳ ಸಿಕ್ಕಂತಾಗಿದೆ. 

published on : 5th October 2019

ಡ್ರೋಣ್ ಮೂಲಕ ಪಾಕ್ ಶಸ್ತ್ರಾಸ್ತ್ರ ರವಾನೆ: ಪ್ರಕರಣ ಎನ್ಐಎ ವಶಕ್ಕೆ ನೀಡಲು ಕೇಂದ್ರ ಚಿಂತನೆ

ಪಂಜಾಬ್ ರಾಜ್ಯದ ವಿವಿಧೆಡೆ ಪಾಕಿಸ್ತಾನ ಡ್ರೋಣ್ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ರವಾನಿಸುತ್ತಿದ್ದು, ಪ್ರಕರಣವನ್ನು ಇದೀಗ ಎನ್ಐಎ ವಶಕ್ಕೆ ನೀಡಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಶನಿವಾರ ತಿಳಿದುಬಂದಿದೆ. 

published on : 5th October 2019
1 2 3 4 5 6 >