ರಾಜ್ಯದೊಂದಿಗೆ ರುಚಿ ಸೋಯಾ ರು.350 ಕೋಟಿ ಹೂಡಿಕೆ ಒಪ್ಪಂದ

ಫೆಬ್ರವರಿಯಲ್ಲಿ ನಡೆಯಲಿರುವ ಇನ್‍ವೆಸ್ಟ್ ಕರ್ನಾಟಕ ವಿಶ್ವ ಬಂಡವಾಳ ಹೂಡಿಕೆ ಸಮಾವೇಶದ ಹಿನ್ನೆಲೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಫೆಬ್ರವರಿಯಲ್ಲಿ ನಡೆಯಲಿರುವ ಇನ್‍ವೆಸ್ಟ್ ಕರ್ನಾಟಕ ವಿಶ್ವ ಬಂಡವಾಳ ಹೂಡಿಕೆ ಸಮಾವೇಶದ ಹಿನ್ನೆಲೆಯಲ್ಲಿ ಜಾಗತಿಕ ಹೂಡಿಕೆದಾರರನ್ನು ಸೆಳೆಯಲು ರಾಜ್ಯ ಸರ್ಕಾರ ಮುಂಬೈನಲ್ಲಿ ರೋಡ್ ಶೋ ನಡೆಸುವುದರ ಜೊತೆಗೆ ಉದ್ಯಮಿಗಳ ಜತೆಗೆ ಮಾತುಕತೆ ನಡೆಸಿದೆ. 
ಕರ್ನಾಟಕದಲ್ಲಿ ರು.350 ಕೋಟಿ ಬಂಡವಾಳ ಹೂಡುವುದಾಗಿ ಮುಂಬೈ ರೋಡ್ ಶೋನಲ್ಲಿ `ರುಚಿ ಸೋಯಾ ಇಂಡಸ್ಟ್ರೀಸ್' ಪ್ರಕಟಿಸಿದೆ. ಕೃಷಿ ಮತ್ತು ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಕರ್ನಾಟಕ ಸರ್ಕಾರದ ಜತೆ ಇದೇ ಸಂದರ್ಭದಲ್ಲಿ ಒಡಂಬಡಿಕೆಗೆ ಸಹಿ ಮಾಡಲಾಗಿದೆ. 
ಬಂಡವಾಳ ಹೂಡಲು ದೇಶದಲ್ಲೇ ಕರ್ನಾಟಕ ಪ್ರಥಮ ಪ್ರಾಶಸ್ತ್ಯ ರಾಜ್ಯ ಎಂದು ಜೆಎಸ್‍ಡಬ್ಲ್ಯೂ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ. ಕಂಪನಿಗಳು ಸುಲಲಿತವಾಗಿ ವಹಿವಾಟು ನಡೆಸಲು ಅಗತ್ಯವಾದ ಎಲ್ಲಾ ನೆರವನ್ನು ನೀಡುವುದಾಗಿ ಪ್ರವಾಸೋದ್ಯಮ ಸಚಿವ ಆರ್ .ವಿ.ದೇಶಪಾಂಡೆ ಭರವಸೆ ನೀಡಿದರು.
ಕರ್ನಾಟಕದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಲವು ಕಂಪನಿಗಳು, ವಿದೇಶಿ ಕಂಪನಿಗಳು, ಕೈಗಾರಿಕಾ ಸಂಘಗಳು ಮತ್ತು ವ್ಯಾಪಾರ ಸಂಸ್ಥೆಗಳ ಜತೆ ಖುದ್ದು ಮಾತುಕತೆ ನಡೆಸಿ ಅವರ ಅಭಿಪ್ರಾಯ ಕೇಳುತ್ತಿರುವುದಾಗಿ ತಿಳಿಸಿದರು. ಭವಿಷ್ಯವು ಉನ್ನತ ತಂತ್ರಜ್ಞಾನದಲ್ಲಿದ್ದು ಅದನ್ನು ನಾವು ಮಾಡಿದ್ದೇವೆ. 
3ಡಿ ಪ್ರಿಂಟಿಂಗ್ ನ್ಯಾನೋ ತಂತ್ರಜ್ಞಾನ, ರೋಬೊಟಿಕ್ಸ್ ಮುಂತಾದ ತಂತ್ರಜ್ಞಾನಗಳು ಮುಂದೆ ನಾವು ಹೇಗೆ ಜೀವಿಸಲಿದ್ದೇವೆ, ಕಾರ್ಯ ನಿರ್ವಹಿಸಲಿದ್ದೇವೆ ಎಂಬುದನ್ನು ನಿರ್ಧರಿಸಲಿವೆ. ಕರ್ನಾಟಕ ಈಗಾಗಲೇ ಎಲ್ಲಾ ತಂತ್ರಜ್ಞಾನಗಳ ಕೇಂದ್ರ ಸ್ಥಾನವಾಗಿದೆ ಎಂದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, 2020ರ ವೇಳೆಗೆ ಎಲ್ಲರಿಗೂ ಪೂರ್ಣ ಪ್ರಮಾಣದ ವಿದ್ಯುತ್ ಒದಗಿಸುವ ಗುರಿಯನ್ನು ಕರ್ನಾಟಕ ಸರ್ಕಾರ ಹೊಂದಿದೆ ಎಂದರು. 
ವಾರ್ತಾ ಸಚಿವ ಆರ್.ರೋಷನ್ ಬೇಗ್, ಕರ್ನಾಟಕ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ್ ಗುಪ್ತಾ ಅವರನ್ನೊಳಗೊಂಡ ತಂಡ ಮುಂಬೈನ ಕೈಗಾರಿಕೋದ್ಯಮಿಗಳೊಂದಿಗೆ ಮಾತುಕತೆ ನಡೆಸಿತು. 
ಸಭೆಯಲ್ಲಿ ಮಹೀಂದ್ರ ಸಮೂಹದ ಆನಂದ ಮಹೀಂದ್ರ, ಹಿಂದೂಜಾ ಸಮೂಹದ ಅಧ್ಯಕ್ಷರಾದ ಅಶೋಕ್ ಹಿಂದೂಜಾ, ರುಚಿ ಸೋಯಾ ಕಂಪನಿ ಅಧ್ಯಕ್ಷ ದಿನೇಶ್ ಸಹರಾ, ಗೋದಾವರಿ ಬಯೋ ರಿಫೆೈನರೀಸ್ ಲಿಮಿಟೆಡ್ ನ ಅಧ್ಯಕ್ಷ ಸಮೀರ್ ಸೋಮಯ್ಯ, ಶೇಟ್ ಕಾಪೆರ್Çರೇಷನ್ ಕಂಪನಿಯ ಅಧ್ಯಕ್ಷ ಅಶ್ವಿನ್ ಶೇಟ್ ಸೇರಿದಂತೆ ಹಲವು ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com