ಡಿ.1 ಕ್ಕೆ ಆರ್ ಬಿ ಐ ನ 5 ನೇ ಹಣಕಾಸು ನೀತಿ ಪರಾಮರ್ಶೆ ಪ್ರಕಟ

ಆರ್.ಬಿ.ಐ ನ ಪ್ರಸಕ್ತ ಸಾಲಿನ 5 ನೇ ಹಣಕಾಸು ನೀತಿ ಪರಾಮರ್ಶೆ ಡಿ.1 ರಂದು ಪ್ರಕಟಗೊಳ್ಳಲಿದ್ದು ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.
ಆರ್.ಬಿ.ಐ
ಆರ್.ಬಿ.ಐ

ಮುಂಬೈ: ಆರ್.ಬಿ.ಐ ನ ಪ್ರಸಕ್ತ ಸಾಲಿನ 5 ನೇ ಹಣಕಾಸು ನೀತಿ ಪರಾಮರ್ಶೆ ಡಿ.1 ರಂದು ಪ್ರಕಟಗೊಳ್ಳಲಿದ್ದು ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.
ಸೆ.29 ರಂದು ಪ್ರಕಟಗೊಂಡಿದ್ದ ನೀತಿಯಲ್ಲಿ ಆರ್.ಬಿ.ಐ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್( ಶೇ.6 .75 )  ನಷ್ಟು ಕಡಿಮೆ ಮಾಡಿತ್ತು. ಡಿಸೆಂಬರ್ ಮಧ್ಯದಲ್ಲಿ ಯುಎಸ್ ಫೆಡರಲ್ ರಿಸರ್ವ್ ನೀತಿ ಪರಾಮರ್ಶೆ ಪ್ರಕಟಗೊಳ್ಳುವುದರಿಂದ ಆರ್.ಬಿ.ಐ ತನ್ನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳಲಾಗಿದೆ.
ಮಧ್ಯಪ್ರಾಚ್ಯದ ರಾಜಕೀಯ ಸ್ಥಿತಿ ಹಾಗೂ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳು ಸಹ ಆರ್.ಬಿ.ಐ ನೀತಿ ಪರಾಮರ್ಶೆ ಮೇಲೆ ಪರಿಣಾಮ ಬೀರಲಿದ್ದು, ಬಡ್ಡಿ ದರ ಕಡಿತವನ್ನು ನಿರೀಕ್ಷಿಸುವಂತಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಅಸೋಸಿಯೇಟೆಡ್ ಚೇಂಬರ್ಸ್ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com