
ಮುಂಬೈ: ವಾರದ ಆರಂಭ ದಿನವಾದ ಸೋಮವಾರ ಬೆಳಗಿನ ವಹಿವಾಟು ಆರಂಭಕ್ಕೆ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 44 ಅಂಕಗಳಷ್ಟು ಏರಿಕೆ ಕಂಡುಬಂದು 26 ಸಾವಿರದ 172ರಲ್ಲಿ ವಹಿವಾಟು ನಡೆಸುತ್ತಿತ್ತು.
ಆದರೆ ನಾಳೆ ಆರ್ ಬಿಐನ ಎರಡು ತಿಂಗಳಿಗೆ ಒಮ್ಮೆ ಬರುವ ವಿತ್ತೀಯ ನೀತಿ ಪರಿಶೀಲನೆ ನಾಳೆ ನಡೆಯಲಿರುವುದರಿಂದ, ವಿದೇಶಿ ಹೂಡಿಕೆದಾರರು ನಿರಂತರ ನಿಧಿ ಹೊರಹರಿವು ಮಾಡುತ್ತಿರುವುದರಿಂದ ಮತ್ತು ಏಷ್ಯಾ ಮಾರುಕಟ್ಟೆಯಲ್ಲಿ ಸಡಿಲಿಕೆ ಇರುವುದರಿಂದ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಎಚ್ಚರಿಕೆ ನೀಡಲಾಗಿದೆ.
ಇಂದು ಬೆಳಗಿನ ವಹಿವಾಟು ಆರಂಭಕ್ಕೆ ಆಟೋ, ಇಂಧನ, ಬ್ಯಾಂಕಿಂಗ್, ರಿಯಾಲ್ಟಿ, ಗ್ರಾಹಕ ವಸ್ತುಗಳು ಮೊದಲಾದವುಗಳ ಷೇರು ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.
ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ಕೂಡ 14 ಅಂಕ ಏರಿಕೆಯಾಗಿ 7 ಸಾವಿರದ 957ರಲ್ಲಿ ವಹಿವಾಟು ನಡೆಸುತ್ತಿತ್ತು. ಸೆಪ್ಟೆಂಬರ್ ವರೆಗಿನ ತ್ರೈಮಾಸಿಕ ಜಿಡಿಪಿ ದಾಖಲೆ ಇಂದು ಸಂಜೆ ಬಿಡುಗಡೆಯಾಗಲಿದ್ದು, ಪ್ರಸಕ್ತ ಚಳಿಗಾಲ ಅಧಿವೇಶನದಲ್ಲಿ ಜಿಎಸ್ಟಿ ಮಸೂದೆ ಮಂಡನೆಯಾಗುತ್ತದೆಯೇ ಇಲ್ಲವೇ ಎಂಬುದು ಕೂಡ ಹೂಡಿಕೆದಾರರ ಮೇಲೆ ಪ್ರಭಾವ ಬೀರಲಿದೆ.
ಆದರೆ ಷೇರು ಮಾರುಕಟ್ಟೆಯ ಇತ್ತೀಚಿನ ವರದಿ ಬಂದಾಗ ಸಂವೇದಿ ಸೂಚ್ಯಂಕ ಇಳಿಕೆ ಕಂಡುಬಂದು 26 ಸಾವಿರದ 128ರಲ್ಲಿ ವಹಿವಾಟು ನಡೆಸುತ್ತಿದೆ. ಎನ್ಎಸ್ ಇ 5 ಅಂಕಗಳ ಇಳಿಕೆ ಕಂಡು 7 ಸಾವಿರದ 937ರಲ್ಲಿ ವಹಿವಾಟು ನಡೆಸುತ್ತಿದೆ.
Advertisement