ಅನಿಲ ದರ ಇಳಿಕೆ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ: ಮೂಡೀಸ್

ನೈಸರ್ಗಿಕ ಅನಿಲ ಬೆಲೆ ಇಳಿಕೆ ಮಾಡಿರುವುದು ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಗ್ಲೋಬಲ್ ರೇಟಿಂಗ್ ಏಜೆನ್ಸಿ ಮೂಡೀಸ್‌ ಹೇಳಿದೆ.
ಮೂಡೀಸ್‌
ಮೂಡೀಸ್‌

ನವದೆಹಲಿ: ನೈಸರ್ಗಿಕ ಅನಿಲ ಬೆಲೆ ಇಳಿಕೆ ಮಾಡಿರುವುದು ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಗ್ಲೋಬಲ್ ರೇಟಿಂಗ್ ಏಜೆನ್ಸಿ ಮೂಡೀಸ್‌ ಹೇಳಿದೆ.
ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ ದರ ಇಳಿಕೆ ಮಾಡಿರುವುದು ಸರಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೇ ಪರಿಶೋಧನೆ ಹೂಡಿಕೆ ಮತ್ತು ಇಂಧನ ಆಮದು ಮಾಡಿಕೊಳ್ಳುವುದರ ಮೇಲೆ ಪರಿಣಾಮ ಬೀರಲಿದೆ ಎಂದು ಗ್ಲೋಬಲ್ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ.
ಬೆಲೆ ಇಳಿಕೆಯಿಂದಾಗಿ ಒಎನ್ ಜಿಸಿ ಗೆ ಮತ್ತಷ್ಟು ಆದಾಯ ಕಡಿಮೆಯಾಗಲಿದೆ. ಸರ್ಕಾರದ ಕ್ರಮದಿಂದಾಗಿ ಒಎನ್ ಜಿಸಿಯ ಆದಾಯ 300 ಮಿಲಿಯನ್ ಡಾಲರ್ ಕಡಿಮೆಯಾಗಿದ್ದರೆ ಆಯಿಲ್ ಇಂಡಿಯಾಗೆ 33 ಮಿಲಿಯನ್ ಡಾಲರ್ ಕಡಿಮೆಯಾಗಿದೆ ಎಂದು  ಜಾಗತಿಕ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ಮೂಡೀಸ್‌ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com