ಮನೆ ಖರೀದಿಸಲು ಇನ್ನು ಸಿಗುತ್ತೆ ಶೇ.90ರಷ್ಟು ಸಾಲ

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರ ಕಡಿಮೆ ಮಾಡಿ ಗೃಹ, ವಾಹನ ಮತ್ತಿತರ ಸಾಲ ಪಡೆಯುವವರಿಗೆ ಬಡ್ಡಿದರ ಹೊರೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರ ಕಡಿಮೆ ಮಾಡಿ ಗೃಹ, ವಾಹನ ಮತ್ತಿತರ ಸಾಲ ಪಡೆಯುವವರಿಗೆ ಬಡ್ಡಿದರ ಹೊರೆಯನ್ನು ಇಳಿಸಿತು. ಈಗ ಮನೆಗೆ ಖರೀದಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚಿಸಿದ್ದು ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ.
ಬ್ಯಾಂಕ್‍ಗಳು ಇನ್ನು ರು.30 ಲಕ್ಷ ಮೌಲ್ಯದ ಮನೆ ಖರೀದಿಗೆ ಶೇ.90ರವರೆಗೂ ಸಾಲ ನೀಡಲಿವೆ ಎಂದು ಆರ್ ಬಿಐ ಹೇಳಿದೆ. ಈ ಹಿಂದೆ ಈ ಮಿತಿ ರು.20 ಲಕ್ಷವರೆಗೂ ಮಾತ್ರ ಇತ್ತು. ಈ ಹೊಸ ನಿಯಮದಿಂದ 20 ರಿಂದ 30 ಲಕ್ಷ ರು.ವರೆಗಿನ ಮನೆ ಖರೀದಿಸಬೇಕೆಂದಿರುವವರಿಗೆ ಅನುಕೂಲವಾಗಲಿದೆ. 
ಆರ್ ಬಿಐ ರೆಪೊ ದರವನ್ನು ಕಡಿತಗೊಳಿಸಿದ ನಂತರ ಎಲ್ಲ ಬ್ಯಾಂಕ್‍ಗಳು ಬಡ್ಡಿದರ ಕಡಿತಗೊಳಿಸಿದವು. ಇದರ ಬೆನ್ನಲ್ಲೇ ಆರ್ ಬಿಐ ಈ ಆದೇಶ ಹೊರಡಿಸಿದೆ. ರು.30 ರಿಂದ ರು.75 ಲಕ್ಷವರೆಗಿನ ಮನೆ ಖರೀದಿಗೆ ಶೇ.80ರಷ್ಟು ಮತ್ತು ರು.75 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ಮನೆ ಖರೀದಿಗೆ ಶೇ.75ರಷ್ಟು ಸಾಲ ನೀಡಲಿವೆ. 
ಆರ್ ಬಿಐನ ಈ ನಿರ್ಧಾರವನ್ನು ಭಾರತೀಯ ರಿಯಾಲ್ಟಿ ಕಂಪನಿಗಳ ಒಕ್ಕೂಟ ಕ್ರೆಡಾಯ್ ಅಧ್ಯಕ್ಷ ಗೀತಂಬರ್ ಆನಂದ್ ಸ್ವಾಗತಿಸಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಪ್ರಗತಿ ಕುಂಠಿತಗೊಂಡಿರುವ ರಿಯಲ್ ಎಸ್ಟೇಟ್ ವಲಯಕ್ಕೆ ಚೇತರಿಕೆ ತುಂಬಲಿದೆ. ಈ ಮಿತಿಯನ್ನು ರು.40 ಲಕ್ಷವರೆಗೆ ವಿಸ್ತರಿಸಬೇಕೆಂದಿದ್ದಾರೆ. ಕಳೆದ ಎರಡು ಮೂರು ವರ್ಷದಿಂದ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿ ಕುಸಿತ ಕಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com