ಐಟ್ಯೂನ್, ಗ್ಯಾಸ್... ಬಯಲಾಯಿತು ಸ್ವಿಸ್ ಕೋಡ್‍ವರ್ಡ್

ಸ್ವಿಜರ್ಲೆಂಡ್‍ನ ಬ್ಯಾಂಕ್‍ಗಳಲ್ಲಿ ಕಪ್ಪುಹಣ ಇಟ್ಟಿರುವವರ ಕೋಡ್ ವ್ಯವಹಾರಗಳು ಒಂದೊಂದಾಗಿ ಬಯಲಾಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ...
ಸ್ವಿಜರ್ಲೆಂಡ್‍ನ ಬ್ಯಾಂಕ್‍
ಸ್ವಿಜರ್ಲೆಂಡ್‍ನ ಬ್ಯಾಂಕ್‍
 ಝೂರಿಚ್ : ಸ್ವಿಜರ್ಲೆಂಡ್‍ನ ಬ್ಯಾಂಕ್‍ಗಳಲ್ಲಿ ಕಪ್ಪುಹಣ ಇಟ್ಟಿರುವವರ ಕೋಡ್ ವ್ಯವಹಾರಗಳು ಒಂದೊಂದಾಗಿ ಬಯಲಾಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಎದುರಿಸು ತ್ತಿರುವ ಬ್ಯಾಂಕ್‍ಗಳು ವ್ಯವಹಾರಕ್ಕೆ ಬಳಸು ತ್ತಿದ್ದ ಕೋಡ್‍ಗಳನ್ನು ಬಯಲು ಮಾಡಲಾರಂಭಿಸಿವೆ. ಈ ಪೈಕಿ ಐಟ್ಯೂನ್ಸ್, ಗ್ಯಾಸ್, ಡೌನ್‍ಲೋಡ್ ಕೂಡ ಸೇರಿವೆ.ಗ್ರಾಹಕರು ತಮ್ಮ ರಿಲೇಷನ್‍ಶಿಪ್ ಮ್ಯಾನೇಜರ್‍ಗಳಿಗೆ ಕೆಲ `ಐಟ್ಯೂನ್ಸ್ ಡೌನ್ ಲೋಡ್' ಮಾಡಿಕೊಡಿ ಎಂದು ಮನವಿ ಮಾಡಿದರೆ ಬ್ಯಾಂಕಿನಲ್ಲಿರುವ ತಮ್ಮ ಹಣದ ಒಂದು ಭಾಗ ವಾಪಸ್ ಕೊಡಿ ಎಂದೇ ಅರ್ಥ. ಸಾಮಾನ್ಯವಾಗಿ ಬ್ಯಾಂಕ್‍ಗಳು ಪ್ರೀಲೋಡೆಡ್ ಕಾರ್ಡ್‍ಗಳನ್ನು ಗ್ರಾಹಕರಿಗೆ ನೀಡುತ್ತವೆ. ಈ ಕಾರ್ಡ್ ಬಳಸಿಕೊಂಡು ಗ್ರಾಹಕರು ಹಣ ಬಳಕೆ ಮಾಡುತ್ತಾರೆ. ಹೆಚ್ಚುವರಿ ಹಣ ಬೇಕಾದಾಗ ಬ್ಯಾಂಕರ್ ಗಳಿಗೆ `ಗ್ಯಾಸ್ ಟ್ಯಾಂಕ್' ಖಾಲಿಯಾಗುತ್ತಿದೆ ಎಂದು ಕೋಡ್ ಸಂದೇಶ ಕಳುಹಿಸುತ್ತಾರೆ. ಇನ್ನು ಬ್ಯಾಂಕ್‍ಗಳು ತಮ್ಮ ಮ್ಯಾನೇಜರ್ ಗಳನ್ನು ಹೈಪ್ರೊಫೈ ಲ್ ಕ್ರೀಡೆ, ಕಾರ್ಯಕ್ರಮ ಗಳಿಗೆ ಕಳುಹಿಸಿ, ಶ್ರೀಮಂತರನ್ನು ಬ್ಯಾಂಕಲ್ಲಿ ಹಣ ಇಡುವಂತೆ ಮನವೊಲಿಸುತ್ತವಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com