ಘೋಷ್ ಮತ್ತು 2002ರಿಂದ ಆರೋಪ ಎದುರಿಸುತ್ತಿದ್ದ ಮೂರು ಟೆಲಿಕಾಂ ಕಂಪನಿಗಳನ್ನು ಖುಲಾಸೆಗೊಳಿಸಿರುವ ಕೋರ್ಟ್ ಪ್ರಕರಣವನ್ನು ಸಂಪೂರ್ಣ ತಿರುಚಿ ಮಾಹಿತಿಗಳನ್ನು ಕೃತ್ರಿಮಗೊಳಿಸಿ ಆರೋಪಪಟ್ಟಿ ಸಿದ್ಧಪಡಿಸಿದೆಯೆಂದು ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದೆ. ``ಆರೋಪಪಟ್ಟಿಯನ್ನು ಉದ್ದೇಶಪೂರ್ವಕವಾಗಿ ತಿರುಚಿ ಅಸ್ಪಷ್ಟ ಮಾಹಿತಿ ಸೇರಿಸಲಾಗಿದೆ. ಕರಡು ಪಟ್ಟಿ ಓದಿದವರಿಗೆ ಭಾರಿ ಅಪರಾಧ ನಡೆದಿದೆ ಎಂಬ ಭಾವ ಬರುವಂತೆ ಮಾಡಲಾಗಿದೆ. ಆದರೆ ದಾಖಲೆಗಳ ಪ್ರಕಾರ ಆರೋಪಿಗಳಿಂದ ಅಂಥಾದ್ದೇನೂ ನಡೆದೇ ಇಲ್ಲ'' ಎಂದು ಕೋರ್ಟ್ ಸಿಬಿಐ ನೀಡಿದ 235 ಪುಟಗಳ ಚಾರ್ಜ್‍ಶೀಟ್ ಅನ್ನು ತಳ್ಳಿಹಾಕಿದೆ. ವಿಶೇಷ ಸಿಬಿಐ ಜಡ್ಜ್ ಓಪಿ ಸೈನಿ ಅವರು, ಆರೋಪಪಟ್ಟಿಯನ್ನು ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮತ್ತೊಮ್ಮೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಸಿಬಿಐ ನಿರ್ದೇಶಕ ರಿಗೆ ಆದೇಶಿಸಿದ್ದಾರೆ. 2001ರಲ್ಲಿ ಪ್ರಮೋದ್ ಮಹಾಜನ್ ಟೆಲಿಕಾಂ ಸಚಿವ ರಾಗಿ ನೇಮಕವಾದ ನಂತರ ಬೇಕೆಂದೇ ಪ್ರಕರಣ ವನ್ನು ದಾರಿತಪ್ಪಿಸಲಾಗಿದೆ ಎಂಬುದನ್ನೂ ಕೋರ್ಟ್ ಉಲ್ಲೇಖಿಸಿದೆ. ಘೋಷ್‍ರೊಂದಿಗೆ 3 ಟೆಲಿಕಾಂ ಕಂಪನಿಗಳಾದ ಹಚಿನ್ಸನ್ ಮ್ಯಾಕ್ಸ್(ಪ್ರೈ)ಲಿ, ಸ್ಟೆರ್ಲಿಂಗ್ ಸೆಲ್ಯುಲಾರ್ ಲಿ ಮತ್ತು ಭಾರ್ತಿ ಸೆಲ್ಲುಲಾರ್ ಲಿ. ಕಂಪನಿಗಳು ಈ ಮೊದಲು ಸಿಬಿಐ ವರದಿ ಅನ್ವಯ ಅಪರಾಧಿಗಳೆಂದು ಗುರುತಿಸಲ್ಪಟ್ಟಿದ್ದವು. ಟೆಲಿಕಾಂ ಇಲಾಖೆ ಹೆಚ್ಚುವರಿ ಸ್ಪ್ರೆಕ್ಟ್ರಂ ವರ್ಗೀಕರಣದ ಹಗರಣದಲ್ಲಿ ಈ ಕಂಪನಿಗಳಿಂದ ಬೊಕ್ಕಸಕ್ಕೆ ರು.846.44 ಕೋಟಿ ನಷ್ಟವಾಗಿತ್ತು ಎಂಬುದು ಆರೋಪದಲ್ಲಿತ್ತು.