• Tag results for cbi

ಪಿಎನ್‌ಬಿ ಹಗರಣ: ಸಿಬಿಐನಿಂದ ಮೆಹುಲ್ ಚೋಕ್ಸಿ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಕೆ

ಗೀತಾಂಜಲಿ ಗ್ರೂಪ್ ಆಫ್ ಕಂಪನಿಗಳ ಮಾಜಿ ಮುಖ್ಯಸ್ಥ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಸಿದೆ, ಪಿಎನ್‌ಬಿಯಲ್ಲಿ 7,080 ಕೋಟಿ ರೂ.ಗಳ ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀಲ್ ವರ್ಮಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

published on : 16th June 2021

ಟೀ ಶರ್ಟ್, ಜೀನ್ಸ್ ಧರಿಸಿ ಕಚೇರಿಗೆ ಬರಬೇಡಿ: ಸಿಬ್ಬಂದಿಗಳಿಗೆ ಸಿಬಿಐ ಕಟ್ಟುನಿಟ್ಟಿನ ಆದೇಶ

ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಹೊರಡಿಸಿದ ಹೊಸ ಆದೇಶದನ್ವಯ ತನಿಖಾ ಏಜೆನ್ಸಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನು ಮುಂದೆ ಕೇವಲ ಫಾರ್ಮಲ್ಸ್ ಗಳನ್ನು ಮಾತ್ರವೇ ಧರಿಸಿ ಕಚೇರಿಗೆ ಆಗಮಿಸಬೇಕು. 

published on : 4th June 2021

ಸಿಬಿಐ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿ ಸಿಬ್ಬಂದಿ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. 

published on : 26th May 2021

ಸಾಕಷ್ಟು ಪ್ರದೇಶಗಳಲ್ಲಿ ಶೋಧ, ಆದರೆ ಮೆಹುಲ್ ಚೋಕ್ಸಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ: ಆ್ಯಂಟಿಗುವಾ ಪೊಲೀಸರು

ನಾಪತ್ತೆಯಾಗಿರುವ ಪಿಎನ್ ಬಿ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರದೇಶಗಲ್ಲಿ ಶೋಧ ನಡೆಸಲಾಗಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಆ್ಯಂಟಿಗುವಾ ಪೊಲೀಸರು ತಿಳಿಸಿದ್ದಾರೆ.

published on : 25th May 2021

ಮೆಹುಲ್ ಚೋಕ್ಸಿ ನಿಗೂಢ ಕಣ್ಮರೆ: ಅಂಟಿಗುವಾ ರಾಯಭಾರ ಕಚೇರಿಯಿಂದ ಮಾಹಿತಿ ಕೇಳಿದ ಸಿಬಿಐ

ಬಹುಕೋಟಿ ಪಿಎನ್‍ಬಿ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅಂಟಿಗುವಾ ಮತ್ತು ಬರ್ಬುಡಾ ದೇಶದಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಟಿಗುವಾ ರಾಯಭಾರ ಕಚೇರಿಯಿಂದ ಸಿಬಿಐ ಮಾಹಿತಿ ಕೇಳಿದೆ.

published on : 25th May 2021

ನಾರದಾ ಪ್ರಕರಣ: ವಿಚಾರಣೆ ಮುಂದೂಡುವ ಸಿಬಿಐ ಮನವಿಗೆ ಕೋಲ್ಕತ್ತಾ ಹೈಕೋರ್ಟ್ ನಕಾರ

ನಾರದಾ ಸ್ಟಿಂಗ್ ಟೇಪ್ ಪ್ರಕರಣದ ವಿಚಾರಣೆಯನ್ನು ಮೇ.24 ರಂದು ಕೋಲ್ಕತ್ತ ಹೈಕೋರ್ಟ್ ಕೈಗೆತ್ತಿಕೊಂಡಿತು. ಸಿಬಿಐ ಈ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಮನವಿ ಮಾಡಿತು. ಆದರೆ ಸಿಬಿಐ ಮನವಿಗೆ ಹೈಕೋರ್ಟ್ ನಿರಾಕರಿಸಿದೆ. 

published on : 24th May 2021

ನಾರದಾ ಸ್ಟಿಂಗ್ ಆಪರೇಷನ್ ಕೇಸು: ಹೈಕೋರ್ಟ್ ನ ಗೃಹ ಬಂಧನ ಆದೇಶ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಸಿಬಿಐ

ನಾರದ ಸ್ಟಿಂಗ್ ಆಪರೇಷನ್ ಕೇಸಿನಲ್ಲಿ ನಾಲ್ವರು ಟಿಎಂಸಿ ನಾಯಕರನ್ನು ಗೃಹ ಬಂಧನಕ್ಕೊಳಪಡಿಸುವಂತೆ ಕೋಲ್ಕತ್ತಾ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

published on : 24th May 2021

ಡಿಎಲ್ಎಫ್ ಲಂಚ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ಕ್ಲೀನ್ ಚಿಟ್!

ಡಿಎಲ್ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ.

published on : 22nd May 2021

ನಾರದ ಪ್ರಕರಣ ವರ್ಗಾವಣೆ ಕೋರಿ ಹೈಕೋರ್ಟ್ ಗೆ ಅರ್ಜಿ, ಮಮತಾ ಬ್ಯಾನರ್ಜಿಯನ್ನು ಪ್ರತಿವಾದಿ ಮಾಡಿದ ಸಿಬಿಐ

ನಾರದ ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಪಶ್ಚಿಮ ಬಂಗಾಳದಿಂದ ವರ್ಗಾವಣೆ ಮಾಡುವಂತೆ ಕೋರಿ ಕೋಲ್ಕತ್ತಾ ಹೈಕೋರ್ಟ್‌ಗೆ ಸಿಬಿಐ ಅರ್ಜಿ ಸಲ್ಲಿಸಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾನೂನು ಸಚಿವ ಮೊಲಾಯ್ ಘಟಕ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

published on : 19th May 2021

ನಾರದ ಪ್ರಕರಣ: ಸುವೇಂದು ಅಧಿಕಾರಿ, ಇತರ 3 ಸಂಸದರ ವಿರುದ್ಧ ಕ್ರಮಕ್ಕಾಗಿ ಸ್ಪೀಕರ್ ಅನುಮತಿಗಾಗಿ ಕಾಯುತ್ತಿದೆ ಸಿಬಿಐ

ನಾರದ ಕುಟುಕು ಕಾರ್ಯಾಚರಣೆ ಪ್ರಕರಣದ ಆರೋಪಿ, ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ನಾಲ್ವರು ರಾಜಕೀಯ ಮುಖಂಡರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ, ಲೋಕಸಭಾ ಸ್ಪೀಕರ್ ಅನುಮತಿಗಾಗಿ ಕಾಯುತ್ತಿದೆ.

published on : 18th May 2021

ನಾರದಾ ಪ್ರಕರಣ: ಬಂಧಿತ ಟಿಎಂಸಿ ಶಾಸಕ ಮದನ್ ಮಿತ್ರಾ, ಪಕ್ಷದ ಮಾಜಿ ನಾಯಕ ಸೋವನ್ ಚಟರ್ಜಿ ಆಸ್ಪತ್ರೆಗೆ ದಾಖಲು

ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಂಧಿಸಿರುವ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಮತ್ತು ಪಕ್ಷದ ಮಾಜಿ ನಾಯಕ ಸೋವನ್ ಚಟರ್ಜಿ ಅವರನ್ನು ಮಂಗಳವಾರ ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 18th May 2021

ನಾರದಾ ವಿವಾದ: ತೃಣಮೂಲ ಮುಖಂಡರ ಜಾಮೀನಿಗೆ ಕೋಲ್ಕತ್ತಾ ಹೈಕೋರ್ಟ್ ತಡೆ

ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದ ಸಂಬಂಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಂಧಿಸಿರುವ ಪಶ್ಚಿಮ ಬಂಗಾಳ ಸಚಿವರು ಮತ್ತು ಮುಖಂಡರ ಜಾಮೀನು ಅರ್ಜಿಗಳಿಗೆ ಕೊಲ್ಕತ್ತಾ ಹೈಕೋರ್ಟ್ ತಡೆ ನೀಡಿದೆ.

published on : 18th May 2021

'ನಾರದ ಸ್ಟಿಂಗ್ ಆಪರೇಷನ್' ಕೇಸು: ಚಾರ್ಜ್ ಶೀಟ್ ಸಲ್ಲಿಕೆಗೆ ಸಿಬಿಐ ತಯಾರು, ಟಿಎಂಸಿ ಬೆಂಬಲಿಗರ ಭಾರೀ ಪ್ರತಿಭಟನೆ

ಸೋಮವಾರ ಬೆಳಗ್ಗೆ ಬಂಧಿತರಾಗಿರುವ ಮೂವರು ಟಿಎಂಸಿ ನಾಯಕರು ಸೇರಿದಂತೆ 5 ಮಂದಿ ವಿರುದ್ಧ ನಾರದ ರಹಸ್ಯ ಕಾರ್ಯಾಚರಣೆ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಲಿದೆ. 

published on : 17th May 2021

ನಾರದ ಲಂಚ ಪ್ರಕರಣದಲ್ಲಿ ಟಿಎಂಸಿ ಶಾಸಕ, ಸಚಿವರ ಬಂಧನ: ಸಿಬಿಐ ಕಚೇರಿಗೆ ಸಿಎಂ ಮಮತಾ ಬ್ಯಾನರ್ಜಿ ಆಗಮನ

ನಾರದ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ವು ತೃಣಮೂಲ ಕಾಂಗ್ರೆಸ್‌ ನ ಇಬ್ಬರು ಸಚಿವರನ್ನು ಬಂಧಿಸಿದ ನಂತರ ಸಿಎಂ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ಸೋಮವಾರ ಆಗಮಿಸಿದ್ದಾರೆ.

published on : 17th May 2021

ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಮಾಜಿ ಸಿಬಿಐ ಅಧಿಕಾರಿ ಕೊರೋನಾಗೆ ಬಲಿ

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಮಾಜಿ ಅಧಿಕಾರಿ ಕೆ ರಗೋಥಮನ್ ಅವರು ಬುಧವಾರ ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.

published on : 12th May 2021
1 2 3 4 5 6 >