ಎಟಿಎಂ ಹಣಕ್ಕೆ ವೈರಸ್ ಭೀತಿ

ಎಟಿಎಂನಲ್ಲಿರುವ ಹಣ ಎಷ್ಟು ಸುರಕ್ಷಿತ ಎಂಬುದು ಇಂದಿನ ದರೋಡೆ ಯುಗದಲ್ಲಿ ಬ್ಯಾಂಕ್‍ಗಳನ್ನು ಕಾಡುತ್ತಿರುವುದು ನಿಜ. ಸೆಕ್ಯುರಿಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ : ಎಟಿಎಂನಲ್ಲಿರುವ ಹಣ ಎಷ್ಟು ಸುರಕ್ಷಿತ ಎಂಬುದು ಇಂದಿನ ದರೋಡೆ ಯುಗದಲ್ಲಿ ಬ್ಯಾಂಕ್‍ಗಳನ್ನು ಕಾಡುತ್ತಿರುವುದು ನಿಜ. ಸೆಕ್ಯುರಿಟಿ, ಕ್ಯಾಮೆರಾ ಎಲ್ಲ ಇದ್ದರೂ ಎಟಿಎಂ ಯಂತ್ರವನ್ನೇ ಹೊತ್ತೊಯ್ಯುವ ಭಾರಿ ದುಷ್ಕರ್ಮಿಗಳು ಇಲ್ಲಿದ್ದಾರೆ. ಅಂಥವರನ್ನು ಹೇಗೋ ಹಿಡಿಯಬಹುದು ಎಂಬ ಧೈರ್ಯ ತಂದುಕೊಂಡಿರೋ ದೇಶದ ಭದ್ರತಾ ತಂಡಕ್ಕೆ, ಬ್ಯಾಂಕ್‍ಗಳಿಗೆ ಹಾಗೂ ಗ್ರಾಹಕರಿಗೆ ಇಲ್ಲೊಂದು ಆಘಾತಕಾರಿ ಸುದ್ದಿ ಇದೆ. ಇದು ವೈರಸ್ ನಿಂದ ಎದುರಾಗಿರೋ ಅಪಾಯ. ರಷ್ಯಾದ 19ರ ಹರೆಯದ ಯುವಕನೊಬ್ಬ ತನ್ನ ಟೆಕ್ಕೀ ತಲೆ ಬಳಸಿ ಸೃಷ್ಟಿಸಿರುವ ಟೈಯುಪ್ಕಿನ್ ಎಂಬ ವೈರಸ್ ಭಾರತದ ಎಲ್ಲ ಎಟಿಎಂ ಯಂತ್ರಗಳಿಗೆ ಹ್ಯಾಕಿಂಗ್ ಭಯ ಹುಟ್ಟಿಸಿದೆ. ಈ ವೈರಸ್‍ಅನ್ನು ಎಟಿಎಂ ಯಂತ್ರಗಳಿಗೆ ಹರಿದುಬಿಡುವ ಮೂಲಕ ಮಷಿನನ್ನು ಮೇಂಟೆನೆನ್ಸ್  ಮೋಡ್‍ಗೆ ಚಲಿಸುವಂತೆ ಮಾಡಿ ಆ ನಂತರ ಹಣ ದೋಚುವ ವಿಧಾನವನ್ನು ಈ ಹುಡುಗ ಕಂಡುಕೊಂಡಿದ್ದಾನೆ. ವಿವರವಾಗಿ ಹೇಳೋದಾದ್ರೆ, ಎಟಿಎಂಗಳಲ್ಲಿರುವ ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿ ವೈರಸ್ ಬಿಟ್ಟುಬಿಡುವುದು. ಆನಂತರ ಯಾರೇ ಹಣಕ್ಕಾಗಿ ಮೆಷಿನ್ ಬಳಸಿದರೂ, ಅದು ಮೇಂಟೆನೆನ್ಸ್  ಮೋಡ್‍ಗೆ ಹೋಗುತ್ತದೆ. ಹಣ ಸಿಗದೆ ಅವರು ಹೋದಕೂಡಲೆ, ಮೆಷಿನ್ನಿಗೊಂದು ಪೆನ್ ಡ್ರೈವ್  ಸಿಕ್ಕಿಸಿ ಕಂಪ್ಯೂಟರನ್ನು ರೀಬೂಟ್ ಮಾಡಿ ಒಳಗಿರುವ ಅಷ್ಟೂ ಹಣವನ್ನು ಎತ್ತಿಕೊಳ್ಳುವುದು ಈ ವಂಚನೆಯ ವಿಧಾನ. ಈ ವೈರಸ್ ಭಾರತ ತಲುಪಿದ್ದು ಕೆಲವು ಯಂತ್ರಗಳು ಈಗಾಗಲೇ ಸೋಂಕಿಗೆ ಒಳಗಾಗಿದೆ ಯಂತೆ. ರಷ್ಯದ ಒಂದು ಕುಖ್ಯಾತ ತಂಡ ಈ ಮೊದಲು ಯೂರೋಪ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ತನ್ನ ವಂಚನೆಜಾಲ ಹರಡಿತ್ತು. ಭಾರತದಲ್ಲಿ ಎಟಿಎಂ ಭದ್ರತೆ ದುರ್ಬಲವಾಗಿರುವುದನ್ನು ಗಮನಿಸಿ ಈ ಕಡೆ ಕಾಲಿಟ್ಟಿದೆಯೆಂದು ತಿಳಿದುಬಂದಿದೆ. ಈ ಮಾಲ್ ವೇರ್‍ನಿಂದ ರಕ್ಷಿಸಿಕೊಳ್ಳಲು ಈಗಾಗಲೇ ಎನ್‍ಸಿಆರ್ ಇಂಡಿಯಾದ ನಿರ್ವಾಹಕ ನಿರ್ದೇಶಕ ನವ್ರೋಜ್ ದಸ್ತೂರ್ ಎಲ್ಲ ಎಟಿಎಂಗಳಿಗೆ ಒಂದಷ್ಟು ಸೂಚನೆಗಳನ್ನು ಕಳಿಸಿದ್ದು, ಪಾಸ್‍ವರ್ಡ್ ಪ್ರೊಟೆಕ್ಷನ್ , ಸಾಫ್ಟ್ ವೇರ್ ಅಪ್‍ಗ್ರೇಡ್ ಮುಂತಾದ ಮುನ್ನೆಚ್ಚರಿಕೆತೆಗೆದುಕೊಳ್ಳಲು ಹೇಳಿದ್ದಾರೆ. ಯಂತ್ರಗಳಿಗೆ ಬಲಿಷ್ಠ ಫೈರ್‍ವಾಲ್ ಬಳಸಲೂ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com