ಮೂರೇ ಗಂಟೆಯಲ್ಲಿ ಪಿಎಫ್ ಮೊತ್ತ ಖಾತೆಗೆ

ಭವಿಷ್ಯ ನಿಧಿ ಚಂದಾದಾರರಿಗೆ ಶುಭ ಸುದ್ದಿ. ಅರ್ಜಿ ಸಲ್ಲಿಸಿದ ಮೂರೇ ಗಂಟೆಗಳಲ್ಲಿ ಭವಿಷ್ಯ ನಿಧಿ(ಪಿಎಫ್)ಯ ಮೊತ್ತ ನಿಮ್ಮ ಖಾತೆಗೆ!..
ಭವಿಷ್ಯನಿಧಿ (ಸಂಗ್ರಹ ಚಿತ್ರ)
ಭವಿಷ್ಯನಿಧಿ (ಸಂಗ್ರಹ ಚಿತ್ರ)

ನವದೆಹಲಿ: ಭವಿಷ್ಯ ನಿಧಿ ಚಂದಾದಾರರಿಗೆ ಶುಭ ಸುದ್ದಿ. ಅರ್ಜಿ ಸಲ್ಲಿಸಿದ ಮೂರೇ ಗಂಟೆಗಳಲ್ಲಿ ಭವಿಷ್ಯ ನಿಧಿ(ಪಿಎಫ್)ಯ ಮೊತ್ತ ನಿಮ್ಮ ಖಾತೆಗೆ!

ಹೌದು. ಭವಿಷ್ಯ ನಿಧಿಯ ಮೊತ್ತವನ್ನು ಪಡೆಯಲು ಇನ್ನು ನೀವು ಆ ಅರ್ಜಿ, ಈ ದಾಖಲೆ ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಯಾವಾಗ ಹಣ ಬರುತ್ತದೋ ಎಂದು ದಿನಗಟ್ಟಲೆ ಕಾಯಬೇಕಾಗಿಲ್ಲ.  ಏಕೆಂದರೆ, ಮುಂದಿನ ಮಾರ್ಚ್ ಅಂತ್ಯದಿಂದ ಆನ್‌ಲೈನ್ ಪಿಎಫ್ ವಿತ್‌ಡ್ರಾವಲ್ ಸೌಲಭ್ಯ ಆರಂಭವಾಗಲಿದೆ. ಅದರಂತೆ, ಆನ್‌ಲೈ ನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು, ಮೂರೇ ಗಂಟೆಗಳಲ್ಲಿ  ನಿಮ್ಮ ಪಿಎಫ್ ಹಣ ಖಾತೆಗೆ ಬಂದು ಬೀಳಲಿದೆ. ದೇಶಾದ್ಯಂತ ಸುಮಾರು ೫ ಕೋಟಿ ಚಂದಾದಾರರನ್ನು ಹೊಂದಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ), ಈ ಸೌಲಭ್ಯವನ್ನು ಒದಗಿಸಲು  ನಿರ್ಧರಿಸಿದೆ.

ಭವಿಷ್ಯ ನಿಧಿ ಸೇರಿದಂತೆ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಸ್ವಇಚ್ಛೆಯಿಂದ ಆಧಾರ್ ಕಾರ್ಡ್ ಬಳಸಬಹುದು ಎಂದು ಗುರುವಾರವಷ್ಟೇ ಸುಪ್ರೀಂ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ  ಇಪಿಎಫ್ಒ ತನ್ನ ಆನ್‌ಲೈನ್ ಪಿಎಫ್ ವಿತ್‌ಡ್ರಾವಲ್ ವ್ಯವಸ್ಥೆ ಬಗ್ಗೆ ಘೋಷಿಸಿದೆ. ಈಗಾಗಲೇ ಈ ಕುರಿತು ಕಾರ್ಮಿಕ ಸಚಿವಾಲಯಕ್ಕೆ ಪ್ರಸ್ತಾಪ ಸಲ್ಲಿಸಿರುವ ಸಂಸ್ಥೆ, ಆನ್‌ಲೈನ್ ವ್ಯವಸ್ಥೆಗೆ  ಅನುಮತಿ ನೀಡುವಂತೆ ಕೋರಿದೆ. ಈವರೆಗೆ ಪಿಎಫ್ ಗೆ ಅರ್ಜಿ ಸಲ್ಲಿಸುವವರು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕಾಗಿತ್ತು.

ಅರ್ಜಿ ಸಲ್ಲಿಕೆಯಾದ ೨೦ ದಿನಗಳ ಬಳಿಕ ಹಣ  ಸಂದಾಯವಾಗುತ್ತಿತ್ತು. ಆದರೆ, ಹೊಸ ವ್ಯವಸ್ಥೆಯಿಂದಾಗಿ ಪಿಎಫ್ ಮೊತ್ತವು ಕೆಲವೇ ಗಂಟೆಗಳೊಳಗೆ ನೌಕರರ ಖಾತೆಗೇ ನೇರವಾಗಿ ಜಮೆ ಆಗಲಿದೆ ಎಂದು ಕೇಂದ್ರ ಭವಿಷ್ಯ ನಿಧಿ ಆಯುಕ್ತ ಕೆ ಕೆ ಜಲನ್ ತಿಳಿಸಿದ್ದಾರೆ. ಇದೇ ವೇಳೆ, ಆನ್‌ಲೈನ್ ಪಿಎಫ್ ಸೌಲಭ್ಯ ಪಡೆಯುವವರು ತಮ್ಮ ಆಧಾರ್ ಸಂಖ್ಯೆಯನ್ನು ಯುಎಎನ್(ಯುನೀಕ್ ಅಕೌಂಟ್ ನಂಬರ್) ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com