ಸಿಲಿಂಡರ್ ದರ ರು.25 ಇಳಿಕೆ

ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿಯೇತರ ಅಡುಗೆ ಅನಿಲ ಮತ್ತು ವೈಮಾನಿಕ ಇಂಧನ ದರಗಳನ್ನು ಕಡಿತಗೊಳಿಸಿವೆ...
ಗ್ಯಾಸ್ ಸಿಲಿಂಡರ್ ದರ ಇಳಿಕೆ (ಸಂಗ್ರಹ ಚಿತ್ರ)
ಗ್ಯಾಸ್ ಸಿಲಿಂಡರ್ ದರ ಇಳಿಕೆ (ಸಂಗ್ರಹ ಚಿತ್ರ)

ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿಯೇತರ ಅಡುಗೆ ಅನಿಲ ಮತ್ತು ವೈಮಾನಿಕ ಇಂಧನ ದರಗಳನ್ನು ಕಡಿತಗೊಳಿಸಿವೆ.

ಸಬ್ಸಿಡಿಯೇತರ 14.2 ಕೆಜಿ ಸಿಲಿಂಡರ್ ದರ ರು.25.50 ಕಡಿತಗೊಳಿಸಿವೆ. ಸದ್ಯ ದೆಹಲಿಯಲ್ಲಿ ಸಿಲಿಂಡರ್ ದರ ರು.559.50ಕ್ಕೆ ಇಳಿದಿದೆ. ಈ ಹಿಂದೆ ಆಗಸ್ಟ್ 1ರಂದು ರು.23.50 ಮತ್ತು ಜುಲೈ 1ರಂದು ರು.18 ಕಡಿತಗೊಳಿಸಲಾಗಿತ್ತು. ಸಬ್ಸಿಡಿ ಸಿಲಿಂಡರ್ ದರ ರು.417.82 ಇದೆ. ವೈಮಾನಿಕ ಇಂಧನ ಪ್ರತಿ ಕಿಲೊ ಲೀಟರ್ ದರ ರು.5,469.12 ಕಡಿತಗೊಳಿಸಲಾಗಿದೆ. ಇದರಿಂದ ಪ್ರತಿ ಕಿಲೋಲೀಟರ್ ದರ ರು.40,938.24ಕ್ಕೆ ಇಳಿದಿದೆ. ಈ ಹಿಂದೆ ಜ.1ರಂದು ರು.7,520 ಕಡಿತಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com