
ನವದೆಹಲಿ: ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ) ಸದಸ್ಯರಾಗಿರುವವರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳ ಠೇವಣಿ ಆಧಾರಿತ ವಿಮೆ ಯೋಜನೆ (ಇಡಿಎಲ್‍ಐ) ಮೊತ್ತ ಹಾಲಿ ರು.3.6 ಲಕ್ಷದಿಂದ ರು.5.5 ಲಕ್ಷಕ್ಕೇರಿಸುವ ಸಾಧ್ಯತೆ ಇದೆ.
ಸೆ.9ರಂದು ನಡೆಯಲಿರುವ ವಿಮೆ ಮತ್ತು ಇಡಿಎಲ್‍ಐ ಜಾರಿ ಸಮಿತಿ ಸಭೆ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಒಂದು ವೇಳೆ ಈ ಮೊತ್ತ ಪರಿಷ್ಕರಣೆಗೊಂಡರೆ ಸುಮಾರು ಆರು ಕೋಟಿ ಸದಸ್ಯರಿಗೆ ಅನುಕೂಲವಾಗಲಿದೆ. ಸಮಿತಿ ಸಭೆಯಲ್ಲಿ ಅನುಮೋದನೆ ದೊರಕಿದ ಬಳಿಕ ಇಪಿಎಫ್ಒದ ಉನ್ನತ ಮಂಡಳಿ ಕೇಂದ್ರೀಯ ವಿಶ್ವಸ್ಥ ಮಂಡಳಿ (ಸಿಬಿಟಿ) ಮುಂದೆ ಸಲ್ಲಿಕೆ ಮಾಡಲಾಗುತ್ತದೆ. ಕೇಂದ್ರ ಕಾರ್ಮಿಕ ಸಚಿವ ಮುಖ್ಯಸ್ಥರಾಗಿರುವ ಈ ಮಂಡಳಿ ಅಂಗೀಕಾರ ನೀಡಿದ ಬಳಿಕ ಸಚಿವಾಲಯದ ಪ್ರಕಟಣೆ ಮೂಲಕ ಜಾರಿ ಮಾಡಲಾಗುತ್ತದೆ.
Advertisement