ರಿಸ್ಕ್ ತೆಗೆದುಕೊಂಡು ಬಂಡವಾಳ ಹೂಡಿ: ಉದ್ಯಮಿಗಳಿಗೆ ಪ್ರಧಾನಿ ಮೋದಿ ಕರೆ

ದೇಶದ ಪ್ರಮುಖ ಉದ್ಯಮಿ, ಬ್ಯಾಂಕರ್ ಅರ್ಥಶಾಸ್ತ್ರಜ್ಞರ ಜೊತೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆರ್ಥಿಕ ಕುಸಿತದ ಹೊರತಾಗಿಯೂ ಭಾರತದ ಆರ್ಥಿಕತೆಯನ್ನು ವೃದ್ಧಿಗೊಳಿಸುವುದರ ಬಗ್ಗೆ ಚರ್ಚೆ....
ಉದ್ಯಮಿಗಳೊಂದಿಗೆ ಪ್ರಧಾನಿ ಮೋದಿ ಸಭೆ
ಉದ್ಯಮಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ನವದೆಹಲಿ: ದೇಶದ ಪ್ರಮುಖ ಉದ್ಯಮಿ, ಬ್ಯಾಂಕರ್ ಅರ್ಥಶಾಸ್ತ್ರಜ್ಞರ ಜೊತೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆರ್ಥಿಕ ಕುಸಿತದ ಹೊರತಾಗಿಯೂ ಭಾರತದ ಆರ್ಥಿಕತೆಯನ್ನು ವೃದ್ಧಿಗೊಳಿಸುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

ದೇಶದ ಆರ್ಥಿಕತೆ ಬೆಳವಣಿಗೆಯಾದರೆ ಉದ್ಯಮಿಗಳು ರಿಸ್ಕ್ ತೆಗೆದುಕೊಂದು ಬಂಡವಾಳ ಹೂಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರ ಮುಖ್ಯವಾದದ್ದು ಆದ್ದರಿಂದ ಪ್ರಧಾನಿ ನಮಗೆ ರಿಸ್ಕ್ ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಿಐಐ ಅಧ್ಯಕ್ಷ ಸುಮಿತ್ ಮಜೂಂದಾರ್ ಹೇಳಿದ್ದಾರೆ.

ಸಭೆಯಲಿ ಹಲವು ಉದ್ಯಮಿಗಳು ಬಡ್ಡಿದರ ಕಡಿತಗೊಳಿಸಲು ಹಾಗೂ ವ್ಯಾಪಾರ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದರು. ಬಡ್ಡಿ ದರ ಕಡಿಮೆ ಮಾಡುವುದರಿಂದ ಉದ್ಯಮಿಗಳಿಗೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಎಂಬುದು ಉದ್ಯಮಿಗಳ ಅಭಿಪ್ರಾಯ. ಆದರೆ ಬಡ್ಡಿ ದರ ಕಡಿತಗೊಳಿಸುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಭರವಸೆ ನೀಡಿಲ್ಲ.

ಉದ್ಯಮಿಗಳೊಂದಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್, ಸಚಿವ ಅರುಣ್ ಜೇಟ್ಲಿ, ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಚಿವ ಪಿಯೂಶ್ ಗೋಯಲ್ ಮತ್ತು ಸಚಿವ ಧರ್ಮೇಂದ್ರ ಪ್ರಧಾನ್ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com