• Tag results for meeting

ಕಿಮ್‍ ಜಾಂಗ್‍ ಉನ್‍ ಬೇಷರತ್‍ ಭೇಟಿಗೆ ಸಿದ್ಧ: ಜಪಾನ್‌ನ ಹೊಸ ಪ್ರಧಾನಿ ಸುಗಾ

ಯಾವುದೇ ಷರತ್ತುಗಳಿಲ್ಲದೆ ಉತ್ತರ ಕೊರಿಯಾದ ಅಧಿನಾಯಕ ಕಿಮ್ ಉನ್ ಅವರನ್ನು ಭೇಟಿಯಾಗಲು ಸಿದ್ಧ ಎಂದು ಜಪಾನ್‌ನ ಹೊಸ ಪ್ರಧಾನಿ ಯೋಶಿಹಿಡೆ ಸುಗಾ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಎಂದು ಹೇಳಿದ್ದಾರೆ.

published on : 26th September 2020

ಕೃಷಿ ಮಸೂದೆ: ಸಿಎಂ ಮಾತಿಗೆ ಸಮಾಧಾನಗೊಳ್ಳದ ರೈತರು, ಪ್ರತಿಭಟನೆ ಮುಂದುವರೆಸಲು ನಿರ್ಧಾರ

ರೈತರಿಗೆ ಮಾರಕವಾಗಿರುವ ಮಸೂದೆಗಳನ್ನು ಕೈಬಿಡುವಂತೆ ಆಗ್ರಹಿಸಿ ಸೆ.28ಕ್ಕೆ ರಾಜ್ಯ ಬಂದ್'ಗೆ ಕರೆ ನೀಡಿರುವ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯ ಸದಸ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಸೋಮವಾರ ಬಂದ್ ನಡೆಸುವುದು ನಿಶ್ಚಿತವಾಗಿದೆ. 

published on : 26th September 2020

ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ: ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ನಿರ್ಧಾರ

ಸೋಮವಾರದಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ.

published on : 20th September 2020

ಪೂರ್ವ ಲಡಾಕ್ ಸಂಘರ್ಷ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ, ಪರಿಸ್ಥಿತಿಯ ಸಮಗ್ರ ವಿಮರ್ಶೆ

ಚೀನಾ ಸೇನೆಯಿಂದ ಗಡಿ ಉಲ್ಲಂಘನೆಯ ಸತತ ಪ್ರಯತ್ನ ಮತ್ತು ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮಾಡುತ್ತಿರುವ ಪ್ರಚೋದನಕಾರಿ ವರ್ತನೆಗಳ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಸರ್ವ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮತ್ತು ಅಲ್ಲಿನ ಒಟ್ಟಾರೆ ಪರಿಸ್ಥಿತಿಗಳ ಬಗ್ಗೆ ನಿನ್ನೆ ಕೇಂದ್ರ ಸರ್ಕಾರ ಸವಿಸ್ತಾರವಾಗಿ ಪರಿಶೀಲನೆ ನಡೆಸಿದೆ.

published on : 19th September 2020

ಸಂಕಷ್ಟದಲ್ಲಿರುವ ಎಸ್ಕಾಂಗೆ ಸಾಲ, ಪ್ರವಾಸೋದ್ಯಮ ನೀತಿಗೆ ಸಂಪುಟ ಒಪ್ಪಿಗೆ

ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಸಾಲ ಪಡೆದುಕೊಳ್ಳಲು ಸರ್ಕಾರ ಖಾತ್ರಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ರೂ.55745 ಕೋಟಿ ದೀರ್ಘಾವಧಿ ಸಾಲ ಪಡೆದುಕೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

published on : 16th September 2020

ನಾಳೆಯಿಂದ ಸಂಸತ್ ಅಧಿವೇಶನ: ಕೊರೋನಾ ಪರಿಣಾಮ ಈ ಬಾರಿ ಅಧಿವೇಶಕ್ಕೂ ಮುನ್ನ ಸರ್ವಪಕ್ಷ ಸಭೆ ಇಲ್ಲ

ಮಹಾಮಾರಿ ಕೊರೋನಾ ವೈರಸ್ ಪರಿಣಾಮ ಈ ಬಾರಿ ಸಂಸತ್ ಅಧಿವೇಶನಕ್ಕೂ ಮುನ್ನ ನಡೆಯುವ ಸರ್ವಪಕ್ಷ ಸಬೆ ನಡೆಯುವುದಿಲ್ಲ ಎಂದು ಭಾನುವಾರ ತಿಳಿದುಬಂದಿದೆ. 

published on : 13th September 2020

ದಸರಾ ಅರಮನೆ ಆವರಣಕ್ಕೆ ಮಾತ್ರ ಸೀಮಿತ: ಗಜ ಪಯಣ ಸಮಾರಂಭ ಇಲ್ಲ, ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ

ಮೈಸೂರು ದಸರಾ ಮಹೋತ್ಸವ 2020ರ ಅಂಗವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವಸಿ.ಟಿ.ರವಿ ಅವರ ಉಪಸ್ಥಿತಿಯಲ್ಲಿ ಶನಿವಾರ ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.

published on : 12th September 2020

ಬಿಹಾರ ಚುನಾವಣೆ: ಸೀಟು ಹಂಚಿಕೆ ಬಗ್ಗೆ ನಿತೀಶ್ ಜೊತೆ ನಡ್ಡಾ ಮಹತ್ವದ ಮಾತುಕತೆ

ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆ ಸೆ.12 ರಂದು ಮಹತ್ವದ ಮಾತುಕತೆ ನಡೆಸಿದ್ದಾರೆ. 

published on : 12th September 2020

ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಹೆಚ್.ಡಿ ಕುಮಾರಸ್ವಾಮಿ; ಕುತೂಹಲ ಮೂಡಿಸಿದ ಭೇಟಿ

ಮೈತ್ರಿ ಸರ್ಕಾರ ಪತನಗೊಂಡು ಒಂದು ವರ್ಷವಾದ‌ ಬಳಿಕ ಇದೇ ಮೊದಲ‌ ಬಾರಿಗೆ ಮಹತ್ವದ ರಾಜಕೀಯ ಬೆಳವಣಿಕೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲ‌ ಮೂಡಿಸಿದೆ.

published on : 11th September 2020

ಇಂಡೋ-ಚೀನಾ ರಕ್ಷಣಾ ಸಚಿವರ ಸಭೆ: ಗಡಿಯಲ್ಲಿ ಶಾಂತಿಗೆ ಭಾರತ ಆಗ್ರಹ, ಸಂಪೂರ್ಣವಾಗಿ ಸೇನೆ ಹಿಂಪಡೆಯುವಂತೆ ಚೀನಾಗೆ ಒತ್ತಾಯ

ಪೂರ್ವ ಲಡಾಕ್ ನ ಭಾರತ-ಚೀನಾ ಗಡಿಭಾಗದಲ್ಲಿ ಸೇನೆ ನಿಯೋಜನೆ, ಸಂಘರ್ಷ ಮುಂದುವರಿಯುತ್ತಿರುವುದರ ಮಧ್ಯೆ ರಷ್ಯಾದ ಮಾಸ್ಕೊದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಸಚಿವ ಜನರಲ್ ವೈ ಫೆಂಗೆ ಮಧ್ಯೆ ಮಾತುಕತೆ ನಡೆದಿದ್ದು ಭಾರತೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ಮುಕ್ತಾಯವಾಗಿದೆ.

published on : 5th September 2020

ಶಾಂತಿಯುತ ಮಾರ್ಗಗಳ ಮೂಲಕವೇ ಸಂಘರ್ಷಗಳನ್ನು ಬಗೆಹರಿಸಿಕೊಳ್ಳಬೇಕು:ಬ್ರಿಕ್ಸ್ ಸಭೆಯಲ್ಲಿ ಸಚಿವರುಗಳ ಒಕ್ಕೊರಲ ನಿರ್ಧಾರ

ಸಂಘರ್ಷ,ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಬೇಕು, ರಾಜಕೀಯ ಮಾತುಕತೆ ಮೂಲಕ ರಾಜತಾಂತ್ರಿಕ ಮಟ್ಟದಲ್ಲಿ ಮತ್ತು ಸಂಧಾನ ಮಾಡಿಕೊಳ್ಳುವುದು ಇದಕ್ಕಿರುವ ಅತ್ಯುತ್ತಮ ಮಾರ್ಗ ಎಂದು ಬ್ರಿಕ್ಸ್ ಸಭೆಯಲ್ಲಿ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ.

published on : 5th September 2020

ಸಿಎಂ ಅಧ್ಯಕ್ಷತೆಯಲ್ಲಿಂದು ಸಂಪುಟ ಸಭೆ: ಮಹತ್ವದ ಎರಡು ತೀರ್ಮಾನಗಳ ಸಾಧ್ಯತೆ 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗವನ್ನು 2020-23ರವರೆಗೆ ಮುಂದುವರಿಕೆ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2020ಕ್ಕೆ ಅನುಮೋದನೆ ಪಡೆಯುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

published on : 3rd September 2020

ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯ ನಡುವೆಯೇ ರಷ್ಯಾಕ್ಕೆ ಪ್ರಯಾಣ ಬೆಳೆಸಿದ ರಾಜನಾಥ್ ಸಿಂಗ್;ಎಸ್ ಸಿಒ ಸಭೆಯಲ್ಲಿ ಭಾಗಿ

ಶಾಂಘೈ ಸಹಕಾರ ಸಂಘಟನೆ(ಎಸ್ ಸಿಒ)ಯ ಪ್ರಮುಖ ಸಭೆಯಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಮೂರು ದಿನಗಳ ರಷ್ಯಾ ಪ್ರವಾಸಕ್ಕೆ ತೆರಳಿದ್ದಾರೆ.

published on : 2nd September 2020

ಬಿಜೆಪಿ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಕಾರ್ಯಕಾರಿಣಿ ಸಭೆ ಮುಂದೂಡಿಕೆ

ಬಿಜೆಪಿ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಕಾರ್ಯಕಾರಿಣಿ ಸಭೆ ಮುಂದೂಡಲಾಗಿದೆ.

published on : 30th August 2020

ರಾಮನಗರ: ವಿವಿಧ ನೀರಾವರಿ, ಕುಡಿಯುವ ನೀರು ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್

ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ ನಾರಾಯಣ ಇಂದು  ಸಭೆ ನಡೆಸಿದರು.

published on : 27th August 2020
1 2 3 4 5 6 >