
ನವದೆಹಲಿ: ಭಾರತೀಯರು ಭೌತಿಕವಾಗಿ ಚಿನ್ನ ಖರೀದಿಸುವುದನ್ನು ನಿಯಂತ್ರಿಸಲು ಕೇಂದ್ರ ಹೊಸ 2ಯೋಜನೆಗಳನ್ನು ಪ್ರಕಟಿಸಿದೆ.
ಸರ್ಕಾರದ ಖಾತರಿ ಹೊಂದಿರುವ ಚಿನ್ನ ಬಾಂಡ್‍ಗಳು (ಅಥವಾ ಸವರಿನ್ ಗೋಲ್ಡ್ ಬಾಂಡ್), ಗೋಲ್ಡ್ ಮಾನಿಟೈಸೇಷನ್ ಸ್ಕೀಂ (ಬ್ಯಾಂಕ್‍ನಲ್ಲಿ ಖಾತೆ ತೆರೆದು ಚಿನ್ನ ಠೇವಣಿ) ಪ್ರಕಟಿಸಿದೆ. ಈ ಯೋಜನೆಗಳ ಕುರಿತು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿತ್ತು.
ಹೊಸ ಯೋಜನೆ ಕುರಿತ ಸಂಕ್ಷಿಪ್ತ ನೋಟ ಹೀಗಿದೆ
ಸವರಿನ್ ಗೋಲ್ಡ್ ಬಾಂಡ್ ಗಳೆಂದರೆ ಹೂಡಿಕೆದಾರರು ಸರ್ಕಾರದಿಂದ ಚಿನ್ನದ ಪ್ರಮಾಣ ಪತ್ರಗಳನ್ನು ಖರೀದಿಸಬಹುದು. ನಂತರ ಇದನ್ನು ಹಿಂತಿರುಗಿಸುವ ಮೂಲಕ ನಗದು , ಭೌತಿಕವಾಗಿ ಚಿನ್ನ ಪಡೆಯಬಹುದು.
ಸರ್ಕಾರ ನಿಗದಿಪಡಿಸಿದ ಬಡ್ಡಿ ದರದಲ್ಲಿ ಚಿನ್ನದ ಬಾಂಡ್‍ಗಳನ್ನು ವಿತರಿಸಲಾಗುವುದು. ಹೂಡಿಕೆ ಸಂದರ್ಭದಲ್ಲಿ ಇದ್ದ ಚಿನ್ನದ ಮೌಲ್ಯದ ಆಧಾರದಲ್ಲಿ ಬಡ್ಡಿ ಲೆಕ್ಕ ಹಾಕಲಾಗುವುದು. ಚಿನ್ನದ ಬಾಂಡ್‍ಗಳ ಅವಧಿ 5 ರಿಂದ 7 ವರ್ಷ.
ಮಾನಿಟೈಸೇಷನ್ ಸ್ಕೀಂ
ವ್ಯಕ್ತಿ ಅಥವಾ ಯಾವುದೇ ಒಂದು ಸಂಸ್ಥೆ ತಮ್ಮಲ್ಲಿರುವ ಚಿನ್ನವನ್ನು ಈ ಖಾತೆಯಲ್ಲಿ ಠೇವಣಿ ಇಡುವ ಮೂಲಕ ನಗದು ಅಥವಾ ಚಿನ್ನದ ರೂಪದಲ್ಲಿ ಬಡ್ಡಿ ಗಳಿಸಬಹುದು.
-ಖಾತೆ ತೆರೆದ ನಂತರ 30 ಅಥವಾ 60 ದಿನಗಳ ನಂತರ ಬಡ್ಡಿ ನೀಡಲಾಗುವುದು.
-ಠೇವಣಿ ಕನಿಷ್ಠ ಮಿತಿ 30 ಗ್ರಾಂ.
-ಚಿನ್ನದ ಠೇವಣಿ ಮೇಲೆ ಗಳಿಸಿದ ಬಡ್ಡಿಗೆ ಯಾವುದೇ ಆದಾಯ ತೆರಿಗೆ ಅಥವಾ ಬಂಡವಾಳ ಗಳಿಕೆ ತೆರಿಗೆ ಇರುವುದಿಲ್ಲ.
Advertisement