ಆರ್ ಬಿಐ ರೆಪೊ ದರ ಕಡಿತ ಎಫೆಕ್ಟ್: ಎಸ್ ಬಿಐ, ಆಂಧ್ರ ಬ್ಯಾಂಕ್ ಬಡ್ಡಿ ದರ ಕಡಿತ

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಮಂಗಳವಾರ ರೆಪೋ ದರ ಕಡಿತಗೊಳಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಮೇಲಿನ ಮೂಲ ಬಡ್ಡಿ ದರವನ್ನು 0.4ರಿಂದ 9.3ರಷ್ಟು ಕಡಿತಗೊಳಿಸಿದೆ...
ಆರ್ ಬಿಐ ಗವರ್ನರ್ ರಘುರಾಮ್ ರಾಜನ್ (ಸಂಗ್ರಹ ಚಿತ್ರ)
ಆರ್ ಬಿಐ ಗವರ್ನರ್ ರಘುರಾಮ್ ರಾಜನ್ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಮಂಗಳವಾರ ರೆಪೋ ದರ ಕಡಿತಗೊಳಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಮೇಲಿನ  ಮೂಲ ಬಡ್ಡಿ ದರವನ್ನು 0.4ರಿಂದ 9.3ರಷ್ಟು ಕಡಿತಗೊಳಿಸಿದೆ.

ಕಡಿತಗೊಂಡ ಈ ಮೂಲ ಬಡ್ಡಿದರ ಎಲ್ಲ ಪ್ರಕಾರದ ಸಾಲದ ವ್ಯವಸ್ಥೆ (ಲೋನ್ ಗಳು)ಗಳನ್ನು ಒಳಗೊಂಡಿದ್ದು, ಗೃಹ ಸಾಲ, ವಾಹನ ಸಾಲ ಮತ್ತು ವಾಣಿಜ್ಯ ಸಾಲಗಳ ಮೇಲಿನ ಬಡ್ಡಿದರಗಳು  ಇನ್ನು ಕನಿಷ್ಟ ಶೇ.0.40ರಷ್ಟು ಕಡಿತಗೊಳ್ಳಲಿವೆ. ಇದೇ ಅಕ್ಟೋಬರ್ 5ರಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಎಸ್ ಬಿಐ ಆಡಳಿತ ಮಂಡಳಿ ತಿಳಿಸಿದೆ.

ಈ ಬಗ್ಗೆ  ಮಾಧ್ಯಮಗಳೊಂದಿಗೆ ಮಾತನಾಡಿರುವ ಎಸ್ ಬಿಐ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಅವರು, ಆರ್ ಬಿಐ ಬಡ್ಡಿದರವನ್ನು ಶೇ.0.50ರಷ್ಟು ಕಡಿತಗೊಳಿಸಿದ್ದು, ನಾವು ಇದನ್ನು ಶೇ.0.40ಕ್ಕೆ  ಇಳಿಸಿದ್ದೇವೆ. ಅಲ್ಲದೆ ಸ್ಥಿರ ಠೇವಣಿಯ ಮೇಲಿನ ಬಡ್ಡಿ ದರವನ್ನು ಕೂಡ ನಾವು ಶೇ.0.25ರಷ್ಟು ಕಡಿತಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

"ದರ ಕಡಿತವಾಗಿರುವುದರಿಂದ ಕಂಡಿತವಾಗಿಯೂ ಮಾರುಕಟ್ಟೆಯ ಮೇಲೆ ಸಕರಾತ್ಮಕ ಪರಿಣಾಮಗಳು ಉಂಟಾಗಲಿವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಅರುಂಧತಿ ಭಟ್ಟಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.

ದೇಶದ ಬಹುದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಎಸ್ ಬಿಐ ಕಡಿತಗೊಳಿಸಿರುವ ಬಡ್ಡಿದರ ಪ್ರಮಾಣ ಆರ್ಥಿಕ ಮಾರುಕಟ್ಟೆಯಲ್ಲೇ ಅತಿ ಹೆಚ್ಚಿನ ಪ್ರಮಾಣದ್ದು ಎಂದು ಹೇಳಲಾಗುತ್ತಿದ್ದು,  ಎಸ್ ಬಿಐಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಇತರೆ ಬ್ಯಾಂಕುಗಳು ಸಹ ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಇನ್ನು ಈಗಾಗಲೇ ಆಂಧ್ರ ಬ್ಯಾಂಕ್ ಕೂಡ ತನ್ನ  ಬಡ್ಡಿದರ ಪ್ರಮಾಣ ಕಡಿತಗೊಳಿಸಿದ್ದು, ಶೇ.0.25ರಿಂದ 9.75ರವರೆಗೆ ಬಡ್ಡಿದರ ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com