ಆರ್ ಬಿಐ ರೆಪೋ ದರ ಇಳಿಕೆ: ಇಎಂಐ ಇಳಿಕೆ ಸಾಧ್ಯತೆ

ರೆಪೋ ದರ ಇಳಿಕೆಯಿಂದ ಗ್ರಾಹಕರು ತಮ್ಮ ಸಾಲದ ಮೇಲೆ ಕಡಿಮೆ ಕಂತುಗಳ(ಇಎಂಐ) ಲಾಭ ಪಡೆಯುವ ನಿರೀಕ್ಷೆಯಿದೆ. ಹಣ ಆಧಾರಿತ ಸಾಲ ಪ್ರಮಾಣ ಕನಿಷ್ಠ ವೆಚ್ಚವು...

ನವದೆಹಲಿ: ರೆಪೋ ದರ ಇಳಿಕೆಯಿಂದ ಗ್ರಾಹಕರು ತಮ್ಮ ಸಾಲದ ಮೇಲಿನ ಕಂತುಗಳಲ್ಲಿ (ಇಎಂಐ) ದರ ಇಳಿಕೆಯ ಲಾಭ ಪಡೆಯುವ ನಿರೀಕ್ಷೆಯಿದೆ. ನಿಧಿ ಆಧಾರಿತ ಬಡ್ಡಿದರಗಳಿಂದ  ಅಲ್ಪಾವಧಿಯ ಠೇವಣಿ ದರಗಳು ಕಡಿಮೆಯಾದರೆ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವೂ ಹೆಚ್ಚು ಸಮರ್ಥ ರೀತಿಯಲ್ಲಿ ಕಡಿಮೆಯಾಗಲಿವೆ.

ಎರಡನೆಯದಾಗಿ, ಇತ್ತೀಚೆಗೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಇಳಿಸಲಾದ ಬಡ್ಡಿದರ.  ಮೂರನೆಯದಾಗಿ ಕಡಿಮೆ ಹಣದುಬ್ಬರ ಅಂದರೆ ಪ್ರಸ್ತುತ ಶೇಕಡಾ 5.18ರಷ್ಟಿದೆ.

ಆರ್ ಬಿಐ ತನ್ನ ತ್ರೈ ಮಾಸಿಕದಲ್ಲಿ ಕಡಿತಗೊಳಿಸಿದ ಬಡ್ಡಿದರದಿಂದ ಬ್ಯಾಂಕುಗಳು ತಮ್ಮ ಬಡ್ಡಿದರದಲ್ಲಿ ಕಡಿತ ಮಾಡಿ ಗ್ರಾಹಕರಿಗೆ ಒದಗಿಸುವ ನಿರೀಕ್ಷೆಯಿದೆ. ಆರ್ ಬಿಐ ಬ್ಯಾಂಕುಗಳಿಗೆ ನೀಡುವ ದರವಾದ ರೆಪೋ ದರವನ್ನು ಶೇಕಡಾ 0.25 ಮೂಲಾಂಕದಿಂದ ಶೇಕಡಾ 6.50ರಷ್ಟು ಕಡಿತಗೊಳಿಸಿದ್ದು, ಇನ್ನಷ್ಟು ಕಡಿತ ಮಾಡುವ ಅವಕಾಶವನ್ನು ಆರ್ ಬಿಐ ತೆರೆದಿಟ್ಟಿದೆ. ಆದರೆ ನಗದು ಮೀಸಲು ಅನುಪಾತ ಬದಲಾವಣೆಯಾಗದೆ ಶೇಕಡಾ 4ರಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com