2030ರ ವೇಳೆಗೆ ದೇಶದ ಇಂಧನ ಕ್ಷೇತ್ರಕ್ಕೆ 1 ಟ್ರಿಲಿಯನ್ ಡಾಲರ್ ಹೂಡಿಕೆ ಅಗತ್ಯ: ಪಿಯೂಷ್ ಗೋಯಲ್

ವಿದ್ಯುತ್ ಕ್ಷೇತ್ರದಲ್ಲಿ 2030 ರ ವೇಳೆಗೆ ಭಾರತಕ್ಕೆ 1 ಟ್ರಿಲಿಯನ್ ಡಾಲರ್ ಹೂಡಿಕೆಯ ಅಗತ್ಯವಿರಲಿದ್ದು ಭಾರತವನ್ನು ಹೊರತುಪಡಿಸಿ ಬೇರೆಲ್ಲೂ ಈ ಪ್ರಮಾಣದ ಹೂಡಿಕೆಗೆ ಅವಕಾಶ ಇರುವುದಿಲ್ಲ ಪಿಯೂಷ್ ಗೋಯಲ್
ಪಿಯೂಷ್ ಗೋಯಲ್
ಪಿಯೂಷ್ ಗೋಯಲ್

ನವದೆಹಲಿ: ಇಂಧನ ಕ್ಷೇತ್ರದಲ್ಲಿ 2030 ರ ವೇಳೆಗೆ ಭಾರತಕ್ಕೆ 1 ಟ್ರಿಲಿಯನ್ ಡಾಲರ್ ಹೂಡಿಕೆಯ ಅಗತ್ಯವಿರಲಿದ್ದು ಭಾರತವನ್ನು ಹೊರತುಪಡಿಸಿ ಬೇರೆಲ್ಲೂ ಈ ಪ್ರಮಾಣದ ಹೂಡಿಕೆಗೆ ಅವಕಾಶ ಇರುವುದಿಲ್ಲ ಎಂದು ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಮುಂದಿನ 5 -6 ವರ್ಷದಲ್ಲಿ ವಿದ್ಯುತ್ ಕ್ಷೇತ್ರಕ್ಕೆ 250 ಬಿಲಿಯನ್ ಡಾಲರ್ ಹೂಡಿಕೆ ಅಗತ್ಯವಿದ್ದು 2030 ರ ವೇಳೆಗೆ ಇಂಧನ ಕ್ಷೇತ್ರದಲ್ಲಿ ಹೂಡಲು ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇಂಧನ ಕ್ಷೇತ್ರದಲ್ಲಿ ಹೂಡಿಕೆಯನ್ನು ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪಿಯೂಷ್ ಗೋಯೆಲ್, ಪ್ರಸ್ತುತ ಪ್ರತಿಯೊಬ್ಬ ವ್ಯಕ್ತಿ 1,050 ಯುನಿಟ್ ನಷ್ಟು ಕರೆಂಟ್ ಬಳಕೆ ಮಾಡುತ್ತಾರೆ, ಇದನ್ನು 2030 ವೇಳೆಗೆ ನಾಲ್ಕು ಪಟ್ಟು ಹೆಚ್ಚಿಸಲು ಉದ್ದೇಶಿಸಲಾಗಿದ್ದು ಬಡತನ ನಿರ್ಮೂಲನೆಗೂ ಸಹಕಾರಿಯಾಗಲಿದೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ  2022 ರ ವೇಳೆಗೆ 175 ಗಿಗಾವ್ಯಾಟ್ ನಷ್ಟು ನವೀಕರಿಸಬಹುದಾದ ಇಂಧನ ಶಕ್ತಿಯನ್ನು ಹೊಂದಲು ಗುರಿ ಇಟ್ಟಿದ್ದಾರೆ. 175 ಗಿಗಾವ್ಯಾಟ್ ನಷ್ಟು ನವೀಕರಿಸಬಹುದಾದ ಶಕ್ತಿಯ ಪೈಕಿ 100 ಗಿಗಾವ್ಯಾಟ್ ನಷ್ಟನ್ನು ಸೌರಶಕ್ತಿಯಿಂದ ಪಡೆಯಲಾಗುವುದು. ಇನ್ನು 7 -8 ತಿಂಗಳಲ್ಲಿ ಸೋಲಾರ್ ಮೂಲಕ 21 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಯನ್ನು ತಲುಪಲಿದ್ದೇವೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಬ್ರಿಟನ್ ಭೇಟಿ ವೇಳೆ ಹೂಡಿಕೆದಾರರನ್ನು ಭೇಟಿ ಮಾಡಿದ್ದು, ಭಾರತದಲ್ಲಿ ಹೂಡಿಕೆ ಅವಕಾಶಗಳನ್ನು ತಿಳಿಸುವುದಕ್ಕೆ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗೆ ಭೇಟಿ ನೀಡಿದ್ದಾಗಿ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com