2015-16 ಇಪಿಎಫ್ ಠೇವಣಿಗಳಿಗೆ ಶೇ.8.7 ಬಡ್ಡಿಗೆ ಜೇಟ್ಲಿ ಅಸ್ತು

2015-16ರ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) ನಿಗದಿಗೊಳಿಸಿದ್ದ ಶೇ.8.8 ದರದ ಬಡ್ಡಿಯ ಬದಲು ಶೇ. 8.7ರಷ್ಟು ದರದಲ್ಲಿ ಬಡ್ಡಿ ನೀಡಲು...
ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ
ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ

ನವದೆಹಲಿ: 2015-16ರ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) ನಿಗದಿಗೊಳಿಸಿದ್ದ ಶೇ.8.8 ದರದ ಬಡ್ಡಿಯ ಬದಲು ಶೇ. 8.7ರಷ್ಟು ದರದಲ್ಲಿ ಬಡ್ಡಿ ನೀಡಲು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಒಪ್ಪಿಗೆ ನೀಡಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ನಡೆಸಿದ್ದ ಸಭೆಯಲ್ಲಿ 2015-16 ಠೇವಣಿಗಳಿಗೆ ಶೇ.8.8ರಷ್ಟು ಮಧ್ಯಂತರ ದರದಲ್ಲಿ ಬಡ್ಡಿ ಪಾವತಿ ಮಾಡಬೇಕು ಎಂದು ಪ್ರಸ್ತಾವವೊಂದನ್ನು ಮುಂದಿಟ್ಟಿತ್ತು.

ಇದರಂತೆ ವಿತ್ತ ಸಚಿವಾಲಯ ಇದೀಗ ಶೇ.8.7 ದರದಲ್ಲಿ ಬಡ್ಡಿ ಪಾವತಿಸಲು ಒಪ್ಪಿಗೆ ಸೂಚಿಸಿದೆ. ಪ್ರಸ್ತುತ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಸುಮಾರು 5 ಕೋಟಿ ಚಂದಾದಾರರಿದ್ದಾರೆ.

ಸಚಿವಾಲಯದ ಒಪ್ಪಿಗೆ ಕುರಿತಂತೆ ಲೋಕಸಭೆಗೆ ಲಿಖಿತ ಮುಖಾಂತರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಉತ್ತರ ನೀಡಿದ್ದು, ಬಡ್ಡಿ ದರವನ್ನು ನಾವು ಇಳಿಸಿಲ್ಲ. ಇದೀಗ ಏನೇ ನಿರ್ಧಾರವನ್ನು ತೆಗೆದುಕೊಂಡಿದ್ದರು. ದೇಶದ ಆರ್ಥಿಕ ಪ್ರವೃತ್ತಿಯನ್ನು ಗಮನಿಸಿಯೇ ತೆಗೆದುಕೊಳ್ಳಲಾಗಿದೆ. ವಿವಿಧ ಯೋಜನೆಗಳ ಬಡ್ಡಿದರಗಳನ್ನು 7ನೇ ವೇತನ ಆಯೋಗದಂತೆ ನಿಗದಿಪಡಿಸಲಾಗಿದೆ. ಏನಿದ್ದರೂ ವಿತ್ತ ಸಚಿವಲಾಯವು ಶೇ.8.7ರ ದರದಲ್ಲಿ ಬಡ್ಡಿ ಪಾವತಿಸಲು ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಕಾರ್ಮಿಕ ಸಚಿವರೇ ಮುಖ್ಯಸ್ಥರಾಗಿರುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ನಿರ್ಧರಿಸಿದ್ದ ಬಡ್ಡಿ ದರವನ್ನು ಹಣಕಾಸು ಸಚಿವಾಲಯ ಒಪ್ಪದೆಯೇ ಬಡ್ಡಿ ದರವನ್ನು ಇಳಿಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com