ರಿಲಯನ್ಸ್ ಜಿಯೋ ಎಫೆಕ್ಟ್; ಏರ್ ಟೆಲ್ 3ಜಿ, 4ಜಿ ದರದಲ್ಲಿ ಶೇ.80ರಷ್ಟು ಕಡಿತ?

ರಿಲಯನ್ಸ್ ಸಂಸ್ಥೆ ಅತೀ ಅಗ್ಗದ ದರಕ್ಕೆ 4ಜಿ ಸೇವೆ ನೀಡಲು ಮುಂದಾಗಿರುವಂತೆಯೇ ಅದಕ್ಕೆ ತೀವ್ರ ಪೈಪೋಟಿ ನೀಡಲು ಖ್ಯಾತ ಟೆಲಿಕಾಂ ಸಂಸ್ಥೆ ಏರ್ ಟೆಲ್ ಸಿದ್ಧತೆ ನಡೆಸಿದ್ದು, ತನ್ನ 3ಜಿ ಹಾಗೂ 4ಜಿ ಸೇವೆಗಳ ದರದಲ್ಲಿ ಶೇ.80ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ.
ಏರ್ ಟೆಲ್ ಹಾಗೂ ರಿಲಯನ್ಸ್ ಜಿಯೋ (ಸಂಗ್ರಹ ಚಿತ್ರ)
ಏರ್ ಟೆಲ್ ಹಾಗೂ ರಿಲಯನ್ಸ್ ಜಿಯೋ (ಸಂಗ್ರಹ ಚಿತ್ರ)

ನವದೆಹಲಿ: ರಿಲಯನ್ಸ್ ಸಂಸ್ಥೆ ಅತೀ ಅಗ್ಗದ ದರಕ್ಕೆ 4ಜಿ ಸೇವೆ ನೀಡಲು ಮುಂದಾಗಿರುವಂತೆಯೇ ಅದಕ್ಕೆ ತೀವ್ರ ಪೈಪೋಟಿ ನೀಡಲು ಖ್ಯಾತ ಟೆಲಿಕಾಂ ಸಂಸ್ಥೆ ಏರ್ ಟೆಲ್ ಸಿದ್ಧತೆ ನಡೆಸಿದ್ದು,  ತನ್ನ 3ಜಿ ಹಾಗೂ 4ಜಿ ಸೇವೆಗಳ ದರದಲ್ಲಿ ಶೇ.80ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ.

ರಿಲಯನ್ಸ್ ಸಂಸ್ಥೆ ಅಗ್ಗದ ದರದಲ್ಲಿ 4ಜಿ ಸೇವೆ ಒದಗಿಸಲು ಜಿಯೋ ಯೋಜನೆ ಆರಂಭಿಸಿದ್ದು, ತನ್ನ ಜಿಯೋ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಅದು ತೀರಾ ಅಗ್ಗದ ದರದಲ್ಲಿ 4ಜಿ ಸೇವೆಗಳನ್ನು  ನೀಡುವುದಾಗಿ ಘೋಷಣೆ ಮಾಡಿದೆ. ಇದೇ ಕಾರಣಕ್ಕೆ ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಜಿಯೋ ಮೊಬೈಲ್ ಸೇವೆಗಾಗಿ ಅರ್ಜಿ ಸಲ್ಲಿಸುತ್ತಿರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ  ಹೆಚ್ಚಾಗುತ್ತಿದ್ದು, ಇತರೆ ಟೆಲಿಕಾಂ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ.

ಈ ಹಿನ್ನಲೆಯಲ್ಲಿ ಎರ್ ಟೆಲ್ ರಿಲಯನ್ಸ್ ಜಿಯೋ ಗೆ ಪೈಪೋಟಿ ನೀಡಲು ಸಿದ್ಧವಾಗಿದ್ದು, ತನ್ನ 3ಜಿ ಹಾಗೂ 4ಜಿ ಸೇವೆಗಳ ದರಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲು ಮುಂದಾಗಿದೆ.  ಮೂಲಗಳ ಪ್ರಕಾರ ಪ್ರಸ್ತುತ ಏರ್ ಟೆಲ್ ವಿಧಿಸುತ್ತಿರುವ 4ಜಿ ಹಾಗೂ 3ಜಿ ದರಗಳ ಪ್ರಮಾಣದಲ್ಲಿ ಶೇ.80 ದರ ಕಡಿತಗೊಳ್ಳಲಿದೆ. ಕೇವಲ 51 ರು.ಗೆ 1 ಜಿಬಿ 3ಜಿ ಡಾಟಾ ನೀಡುವುದಾಗಿ ಏರ್ ಟೆಲ್  ಘೋಷಿಸಲು ನಿರ್ಧರಿಸಿದೆ. ಇದಲ್ಲದೆ  1,498 ರು.ಗೆ 28 ದಿನಗಳ ಕಾಲಾವಧಿಯ 4ಜಿ ಸೇವೆ ನೀಡಲು ಏರ್ ಟೆಲ್ ನಿರ್ಧರಿಸಿದೆ. ಈ 1 ಜಿಬಿ ಡಾಟಾ ಮುಕ್ತಾಯವಾದರೂ ಕೂಡ ಬಳಿಕ ಪ್ರತೀ ಒಂದು  ಜಿಬಿ ಡಾಟಾಗೆ ಏರ್ ಟೆಲ್ 51 ರು. ದರ ವಿಧಿಸಲು ನಿರ್ಧರಿಸಿದೆ.

ಈ ನೂತನ ಆಫರ್ ಗಳು ಇದೇ ಆಗಸ್ಟ್ 31ರಿಂದ ಜಾರಿಯಾಗಲಿದೆ ಎಂದು ಏರ್ ಟೆಲ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com