2 ಸಾವಿರ ರೂ. ವರೆಗಿನ ಕಾರ್ಡ್ ವಹಿವಾಟಿಗೆ ಸೇವಾ ತೆರಿಗೆ ರದ್ದುಗೊಳಿಸಲು ಚಿಂತನೆ

ನಗದು ರಹಿತ ವಹಿವಾಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 2,000 ರೂ ವರೆಗಿನ ಕಾರ್ಡ್ ವಹಿವಾಟುಗಳಿಗೆ ಸೇವಾ ತೆರಿಗೆಯನ್ನು ರದ್ದುಗೊಳಿಸುವ ಚಿಂತನೆಯಲ್ಲಿದೆ.
2 ಸಾವಿರ ರೂ. ವರೆಗಿನ ಕಾರ್ಡ್ ವಹಿವಾಟಿಗೆ ಸೇವಾ ತೆರಿಗೆ ರದ್ದುಗೊಳಿಸಲು ಚಿಂತನೆ
2 ಸಾವಿರ ರೂ. ವರೆಗಿನ ಕಾರ್ಡ್ ವಹಿವಾಟಿಗೆ ಸೇವಾ ತೆರಿಗೆ ರದ್ದುಗೊಳಿಸಲು ಚಿಂತನೆ
ನವದೆಹಲಿ: ನಗದು ರಹಿತ ವಹಿವಾಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 2,000 ರೂ ವರೆಗಿನ ಕಾರ್ಡ್ ವಹಿವಾಟುಗಳಿಗೆ ಸೇವಾ ತೆರಿಗೆಯನ್ನು ರದ್ದುಗೊಳಿಸುವ ಚಿಂತನೆಯಲ್ಲಿದೆ. 
2,000 ರೂ ಗಳ ವರೆಗೆ ಕಾರ್ಡ್ ನ್ನು ಬಳಸಿ ವಹಿವಾಟು ನಡೆಸುವವರುಗೆ ಸೇವಾ ತೆರಿಗೆ ವಿನಾಯ್ತಿ ನೀಡುವ ಬಗ್ಗೆ ಶೀಘ್ರವೇ ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಅಧಿಸೂಚನೆ ಮಂಡಿಸಲಿದ್ದಾರೆ. ನ.8 ರಂದು ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ನಿಷೇಧಿಸಿದ ನಂತರ ನೋಟುಗಳ ಅಭಾವ ಎದುರಾಗಿದ್ದು, ಕೇಂದ್ರ ಸರ್ಕಾರ ನಗದು ರಹಿತ ವಹಿವಾಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ. 
ನಗದು ರಹಿತ ವಹಿವಾಟುಗಳಿಗೆ ಪೂರಕವಾಗಿ 10 ಲಕ್ಷ ಪಾಯಿಂಟ್‌ ಆಫ್ ಸೇಲ್‌ (ಪಿಒಎಸ್‌) ಟರ್ಮಿನಲ್ ಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಈಗಾಗಲೇ ದೇಶಾದ್ಯಂತ ಇರುವ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಕಾರ್ಡ್ ಮೂಲಕ ವಹಿವಾಟು ನಡೆಸುವವರಿಗೆ ಸೇವಾ ತೆರಿಗೆಯಿಂದ ವಿನಾಯ್ತಿ ನೀಡಲು 2012 ರ  ಜೂನ್ ನ ಸೇವಾ ತೆರಿಗೆ ಅಧಿಸೂಚನೆಗೆ ತಿದ್ದುಪಡಿ ಮಾಡುವ ಚಿಂತನೆಯಲ್ಲಿದೆ ಕೇಂದ್ರ ಸರ್ಕಾರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com