ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟಾಟಾ ಮೊಟಾರ್ಸ್ ನಿರ್ದೇಶಕ ಮಂಡಳಿಯಿಂದಲೂ ನುಸ್ಲಿ ವಾಡಿಯಾ ಹೊರಕ್ಕೆ!

ಟಾಟಾ ಸ್ಟೀಲ್ ಸಂಸ್ಥೆಯಿಂದ ಹೊರಬಿದ್ದ ಬೆನ್ನಲ್ಲೇ ಸಂಸ್ಥೆಯ ಸ್ವತಂತ್ರ ನಿರ್ದೇಶಕ ನುಸ್ಲಿ ವಾಡಿಯಾ ಅವರನ್ನು ಟಾಟಾ ಮೊಟಾರ್ಸ್ ಸಂಸ್ಥೆಯ ನಿರ್ದೇಶಕ ಮಂಡಳಿಯಿಂದಲೂ ವಜಾಗೊಳಿಸಲಾಗಿದೆ.

ನವದೆಹಲಿ: ಟಾಟಾ ಸ್ಟೀಲ್ ಸಂಸ್ಥೆಯಿಂದ ಹೊರಬಿದ್ದ ಬೆನ್ನಲ್ಲೇ ಸಂಸ್ಥೆಯ ಸ್ವತಂತ್ರ ನಿರ್ದೇಶಕ ನುಸ್ಲಿ ವಾಡಿಯಾ ಅವರನ್ನು ಟಾಟಾ ಮೊಟಾರ್ಸ್ ಸಂಸ್ಥೆಯ ನಿರ್ದೇಶಕ ಮಂಡಳಿಯಿಂದಲೂ ವಜಾಗೊಳಿಸಲಾಗಿದೆ.

ಟಾಟಾ ಸಂಸ್ಥೆಯ ನಿರ್ದೇಶಕರಾಗಿದ್ದ ಉಚ್ಛಾಟಿತ ಸೈರಸ್ ಮಿಸ್ತ್ರಿ ಅವರ ಪರವಾಗಿ ವಾದ ಮಂಡಿಸಿದ ಆರೋಪದ ಮೇಲೆ ಟಾಟಾ ಮೋಟಾರ್ಸ್ ಸಂಸ್ಥೆಯ ನಿರ್ದೇಶಕ ಮಂಡಳಿಯಿಂದಲೂ ವಜಾಗೊಳಿಸಲಾಗಿದೆ ಎಂದು  ತಿಳಿದುಬಂದಿದೆ. ಇತ್ತೀಚೆಗೆ ನಡೆದ ಟಾಟಾ ಸಂಸ್ಥೆಯ ಷೇರುದಾರರ ಮತದಾನದಲ್ಲಿ ಶೇ.70.20 ಷೇರುದಾರರು, ಸ್ವತಂತ್ರ ನಿರ್ದೇಶಕ ಹಾಗೂ ಕೈಗಾರಿಕೋದ್ಯಮಿ ನುಸ್ಲಿ ವಾಡಿಯಾ ಅವರನ್ನು ತೆಗೆದು ಹಾಕುವ ಪರವಾಗಿ ಮತ  ಚಲಾಯಿಸಿದ್ದರು.

ಸಂಸ್ಥೆಯ ಒಟ್ಟು ಟಾಟಾ ಮೊಟಾರ್ಸ್ ಸಂಸ್ಥೆಯಲ್ಲಿ 293.60  ಕೋಟಿ ಷೇರುದಾರರಿದ್ದು, ಈ ಪೈಕಿ ಮತದಾನದಲ್ಲಿ 69.93ರಷ್ಟು ಷೇರುದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅದರಂತೆ ಶೇ.70.20 ಷೇರುದಾರರು ನುಸ್ಲಿ  ವಾಡಿಯಾರನ್ನು ಸಂಸ್ಥೆಯ ನಿರ್ದೇಶಕ ಮಂಡಳಿಯಿಂದ ತೆಗೆದುಹಾಕುವ ನಿರ್ಣಯದ ಪರವಾಗಿ ಮತ ಹಾಕಿದ್ದರು. ಇದೇ ಕಾರಣಕ್ಕೆ ನುಸ್ಲಿವಾಡಿಯಾ ಅವರನ್ನು ಸಂಸ್ಥೆಯ ನಿರ್ದೇಶಕ ಮಂಡಳಿಯಿಂದಲೂ ವಡಾ ಮಾಡಲಾಗಿದೆ  ಎಂದು ಟಾಟಾ ಮೋಟಾರ್ಸ್ ಸಂಸ್ಥೆ ತಿಳಿಸಿದೆ.

ಈ ಕುರಿತು ಈಗಾಗಲೇ ಟಾಟಾ ಮೋಟಾರ್ಸ್ ಸಂಸ್ಥೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಗೆ ಮಾಹಿತಿ ನೀಡಿದ್ದು, ಇದೀಗ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ನುಸ್ಲಿ ವಾಡಿಯಾ ಅವರು, 37 ವರ್ಷಗಳ ಕಾಲ ಕಂಪನಿಯ ಸ್ವತಂತ್ರ ನಿರ್ದೇಶಕರಾಗಿದ್ದರು.

Related Stories

No stories found.

Advertisement

X
Kannada Prabha
www.kannadaprabha.com