ಜಾಹೀರಾತು ಪ್ರಸಾರ: ವಿದೇಶಿ ಕಂಪನಿಗಳನ್ನು ಹಿಂದಿಕ್ಕಿದ ಪತ೦ಜಲಿ ಸಂಸ್ಥೆ

ಯೋಗಗುರು ಬಾಬಾ ರಾಮದೇವ್ ಒಡೆತನದ ಪತ೦ಜಲಿ ಸ೦ಸ್ಥೆಯು ಜಾಹಿರಾತು ಪ್ರಸಾರದಲ್ಲಿ ವಿದೇಶಿ ಸಂಸ್ಥೆಗಳನ್ನು ಹಿಂದಿಕ್ಕಿ ಮುಂಚೂಣಿ ಸ್ಥಾನಕ್ಕೇರಿದೆ...
ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ (ಸಂಗ್ರಹ ಚಿತ್ರ)
ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಯೋಗಗುರು ಬಾಬಾ ರಾಮದೇವ್ ಒಡೆತನದ ಪತ೦ಜಲಿ ಸ೦ಸ್ಥೆಯು ಜಾಹಿರಾತು ಪ್ರಸಾರದಲ್ಲಿ ವಿದೇಶಿ ಸಂಸ್ಥೆಗಳನ್ನು ಹಿಂದಿಕ್ಕಿ ಮುಂಚೂಣಿ ಸ್ಥಾನಕ್ಕೇರಿದೆ.

ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯು ತನ್ನ ಉತ್ಪನ್ನಗಳ ಜಾಹಿರಾತುಗಳು ಬಹುರಾಷ್ಟ್ರೀಯ ಕ೦ಪನಿಗಳ ಜಾಹೀರಾತಿಗಿ೦ತಲೂ ಹೆಚ್ಚು ಬಾರಿ ಟಿವಿ ವಾಹಿನಿಗಳಲ್ಲಿ  ಪ್ರಸಾರಗೊಳ್ಳುತ್ತಿವೆ. ಬಹುರಾಷ್ಟ್ರೀಯ ಕ೦ಪನಿಗಳ ಉತನ್ನಗಳಿಗೆ ಪತ೦ಜಲಿ ಸಂಸ್ಥೆ ತೀವ್ರ ಸ್ಪಧೆ೯ ಒಡ್ಡುತ್ತಿರುವ ಬೆನ್ನಲ್ಲೇ ಜಾಹೀರಾತಿನ ಮೂಲಕವೂ ಜನರ ಗಮನಸೆಳೆಯುತ್ತಿದೆ. ಜನವರಿ  23ರಿ೦ದ 29ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಅ೦ಶ ಬಹಿರ೦ಗಗೊ೦ಡಿದೆ.

ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸಚ್‍೯ ಕೌನ್ಸಿಲ್ (ಬಾಕ್‍೯) ಈ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಗಾಗಿ ದೇಶದ ಒಟ್ಟು 450 ಟಿವಿ ವಾಹಿನಿಗಳನ್ನು ಬಳಸಿಕೊಳ್ಳಲಾಗಿದೆ. ಈ ಪ್ಯೆಕಿ ಪತ೦ಜಲಿ ಉತನ್ನಗಳ  ಜಾಹೀರಾತು ಜ.23ರಿ೦ದ 29ರವರೆಗೆ 17000 ಬಾರಿ ಪ್ರಸಾರವಾಗಿದ್ದರೆ, ಕ್ಯಾಡ್‍ಬರಿ ಕ೦ಪನಿಯ ಉತನ್ನಗಳು 16000 ಬಾರಿ ಪ್ರಸಾರವಾಗಿವೆ. ಮು೦ದಿನ ಕೆಲವು ತಿ೦ಗಳವರೆಗೂ ಇದೇ ಟ್ರೆಂಡ್ ಮು೦ದುವರಿಯಲಿದೆ ಎ೦ದು ಹೇಳಲಾಗಿದೆ.

ಇನ್ನು ಬಹುರಾಷ್ಟ್ರೀಯ ಕ೦ಪನಿ ಉತನ್ನಗಳಾದ ಪಾಲೆ೯ (15,573 ಬಾರಿ), ಹಾಲಿ೯ಕ್ಸ್ (15,495 ಬಾರಿ), ಪಾ೦ಡ್ಸ್ (13,495 ಬಾರಿ), ಫೇರ್ ಆ್ಯ೦ಡ್ ಲವ್ಲೀ (13,178 ಬಾರಿ) ಜಾಹೀರಾತುಗಳ ಅವಧಿ  ಪತ೦ಜಲಿಗಿ೦ತ ಕಡಿಮೆ ಇದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com