ಗೂಗಲ್ ಸಿಇಒ ಸುಂದರ್ ಪಿಚೈಗೆ ಸಾವಿರ ಕೋಟಿ ಬಂಪರ್!

ಆಲ್ಫಾಬೆಟ್ ನಿಂದ ಗೂಗಲ್ ಸಿಇಒ, ಭಾರತೀಯ ಮೂಲದ ಸುಂದರ್ ಪಿಚೈಗೆ ಬರೋಬ್ಬರಿ ರು. 1,354 ಕೋಟಿ ವೇತನ ನೀಡಿದೆ...
ಸುಂದರ್ ಪಿಚೈ
ಸುಂದರ್ ಪಿಚೈ

ನವದೆಹಲಿ: ಆಲ್ಫಾಬೆಟ್ ನಿಂದ ಗೂಗಲ್ ಸಿಇಒ, ಭಾರತೀಯ ಮೂಲದ ಸುಂದರ್ ಪಿಚೈಗೆ ಬರೋಬ್ಬರಿ ರು. 1,354 ಕೋಟಿ ವೇತನ ನೀಡಿದೆ.

ಇದು ವೇತನ ಅಲ್ಲ, ಕಂಪನಿಯು ಅವರಿಗೆ ನೀಡುವ ಷೇರುಗಳ ಮೌಲ್ಯದಿಂದಾಗಿ ಅವರಿಗೆ ಭಾರಿ ಮೊತ್ತದ ವೇತನ ಸಿಗುವಂತಾಗಿದೆ. ಇದರಿಂದಾಗಿ ಪಿಚೈ ಅಮೆರಿಕದ ಅತ್ಯಧಿಕ ವೇತನ ಪಡೆಯುವ ಸಿಇಒ ಆಗಿ ಹೊರಹೊಮ್ಮಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಸುಂದರ್ ಪಿಚೈ ಗೂಗಲ್ ಕಂಪನಿಯ ಸಿಇಒಆಗಿ ಆಯ್ಕೆಯಾದರು. ಫೆ.3ರಂದು ಕ್ಲಾಸ್ ಸಿ ವರ್ಗದ 2,73,328 ಷೇರುಗಳನ್ನು ನೀಡಲಾಗಿದ್ದು, ಅಂದಿನ ಕಂಪನಿಯ ಷೇರುಗಳ ಮೌಲ್ಯದ ಪ್ರಕಾರ ಒಟ್ಟು ಮೌಲ್ಯ ರು. 1,354 ಕೋಟಿ ಆಗಲಿದೆ ಎಂದು ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ಇಂಕ್ ಹೇಳಿದೆ.

ಅತ್ಯಧಿಕ ವೇತನ ಪಡೆವ ಅಮೆರಿಕ ಸಿಇಒಗಳು
892 ಜಾನ್ ಹ್ಯಾಮರ್ ಗ್ರೆನ್(ಮೆಕ್ ಕೆಸ್ಸನ್)
453 ರಾಲ್ಫ್ ಲಾರೆನ್(ರಾಲ್ಫ್ ಲಾರೆನ್ ಫ್ಯಾಷನ್ ಹೌಸ್)
438 ಮೈಕಲ್ ಫಸಿಟೆಲ್(ವರ್ನಡೊ ರಿಯಾಲ್ಟಿ)
414 ರಿಚರ್ಡ್ ಕಿಂಡರ್(ಕಿಂಡರ್ ಮಾರ್ಗನ್)
379 ಡೇವಿಡ್ ಕೋಟ್(ಹನಿವೆಲ್ ಕಾಂಗ್ಲೋಮೆರೆಟ್)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com