ಕಚ್ಛಾ ತೈಲ ದರ ಶೇ.6ರಷ್ಟು ಏರಿಕೆ

ಇಳಿಕೆಯತ್ತ ಮುಖಮಾಡಿದ್ದ ಪೆಟ್ರೋಲ್ ದರ ಇದೀಗ ಏರಿಕೆಯತ್ತ ಸಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ದರದಲ್ಲಿ ಶೇ.6ರಷ್ಟು ಏರಿಕೆ ದಾಖಲಾಗಿದೆ...
ಕಚ್ಛಾತೈಲ ದರ ಏರಿಕೆ (ಸಂಗ್ರಹ ಚಿತ್ರ)
ಕಚ್ಛಾತೈಲ ದರ ಏರಿಕೆ (ಸಂಗ್ರಹ ಚಿತ್ರ)

ನವದೆಹಲಿ: ಇಳಿಕೆಯತ್ತ ಮುಖಮಾಡಿದ್ದ ಪೆಟ್ರೋಲ್ ದರ ಇದೀಗ ಏರಿಕೆಯತ್ತ ಸಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ದರದಲ್ಲಿ ಶೇ.6ರಷ್ಟು ಏರಿಕೆ ದಾಖಲಾಗಿದೆ.

ಯುಎಇ ಇಂಧನ ಸಚಿವರು ಕಚ್ಛಾ ತೈಲ ಉತ್ಪಾದನೆಯನ್ನು ಕಡಿತ ಮಾಡುವ ಹೇಳಿಕೆ ನೀಡಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆಯಲ್ಲಿ ಶೇ.6ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 2003ರ ನಂತರ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಇಂಧನ ಬೆಲೆ ಇದೇ ಮೊದಲ ಬಾರಿಗೆ ಚೇತರಿಸಿಕೊಂಡಿದೆ. ಕಚ್ಛಾ ತೈಲ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದಂತೆಯೇ ಒಪೆಕ್ (ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ ) ರಾಷ್ಟ್ರಗಳಲ್ಲಿ ಹರ್ಷ ಮೂಡಿದ್ದು, ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ.

ಈ ಹಿಂದೆ ಕಚ್ಛಾ ತೈಲದ ಅಗತ್ಯಮಿತಿ ಮೀರಿದ ಉತ್ಪಾದನೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ  27.73 ಡಾಲರ್‌ಗೆ ಕುಸಿದಿತ್ತು. ಇದನ್ನು ಅರಿತ ಅರಬ್ಬ್ ಆಡಳಿತ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವುದಾಗಿ ಹೇಳಿದೆ. ಇದರಿಂದ ನಿನ್ನೆ ಬ್ಯಾರೆಲ್ ದರ ಶೇ.5.8ರಷ್ಟು ಹೆಚ್ಚಾಗಿದ್ದು, ದಿನದ ವಹಿವಾಟು ಅಂತ್ಯಕ್ಕೆ 31.80ಡಾಲರ್ ಗೆ ಹೆಚ್ಚಳವಾಗಿದೆ.

ಭಾರತದಲ್ಲಿ ಪೆಟ್ರೋಲ್ ದರ ಏರಿಕೆ?
ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಏರಿಕೆಯಾಗಿರುವ ಹಿನ್ನಲೆಯಲ್ಲಿ ಭಾರತದಲ್ಲಿಯೂ ಇದರ ಪರಿಣಾಮ ಉಂಟಾಗಲಿದ್ದು, ಪೆಟ್ರೋಲ್ ಉತ್ಪನ್ನಗಳ ದರ ಏರಿಕೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com